More

    ಒಂದೇ ನೊಂದಣಿ ಸಂಖ್ಯೆಯ ಹಲವು ಬಸ್​​ಗಳು – ಹೊರರಾಜ್ಯಗಳ 6 ಖಾಸಗಿ ಬಸ್ ಆರ್​ಟಿಒ ಬಲೆಗೆ

    ರಾಜಧಾನಿ ಪ್ರವೇಶಿಸದೆ ತೆರಿಗೆ ವಂಚನೆ!

    ರಾಜಸ್ಥಾನದ ಜೋಧಪುರ-ಬೆಂಗಳೂರು ಸಂಚರಿಸುವ ಆರ್​ಜೆ-19 ಪಿಸಿ 3131 ಸ್ಲೀಪರ್ ಕೋಚ್ ಬಸ್ ನ.18ರಂದು ದಾಬಸ್​ಪೇಟೆ-ನೆಲಮಂಗಲ ನಡುವಿನ ಡಾಬಾ ಬಳಿ ನಿಂತಿತ್ತು. ಅದನ್ನು ಗಮನಿಸಿದ ಆರ್​ಟಿಒ ಅಧಿಕಾರಿಗಳು ನೋಂದಣಿ ಸಂಖ್ಯೆ ಪರಿಶೀಲನೆ ನಡೆಸಿದಾಗ, ಅ.31ಕ್ಕೆ ಬಸ್​ನ ರಹದಾರಿ ಮತ್ತು ತೆರಿಗೆ ಪಾವತಿ ಅವಧಿ ಮುಗಿದಿರುವುದು ಕಂಡು ಬಂದಿದೆ. ಅಲ್ಲದೆ, ವಾರ್ಷಿಕ 6.4 ಲಕ್ಷ ತೆರಿಗೆ ಪಾವತಿಸುವ ಬದಲು ತ್ರೈಮಾಸಿಕ ತೆರಿಗೆ ಕಟ್ಟಿರುವುದಾಗಿ ದಾಖಲೆ ಸೃಷ್ಟಿಸಲಾಗಿತ್ತು. ಬೆಂಗಳೂರಿನ ಒಳಗೆ ಪ್ರವೇಶಿಸಿದರೆ ಆರ್​ಟಿಒಗೆ ಸಿಕ್ಕಿಬೀಳುವ ಭಯದಿಂದ ಹೊರವಲಯದಲ್ಲೇ ನಿಲುಗಡೆ ಮಾಡಿ, ಪ್ರಯಾಣಿಕರನ್ನು ನಗರದ ಒಳಗಿಂದ ಬೇರೆ ವಾಹನದಲ್ಲಿ ಕರೆಸಿಕೊಂಡು ನಂತರ ಈ ಬಸ್​ನಲ್ಲಿ ಜೋಧಪುರಕ್ಕೆ ಕರೆದೊಯ್ಯುಲಾಗುತ್ತಿತ್ತು.

    ನೆಲಮಂಗಲ : ಸಾರಿಗೆ ಇಲಾಖೆಗೆ ಲಕ್ಷಾಂತರ ರೂ. ತೆರಿಗೆ ವಂಚಿಸಿ ಕಳ್ಳ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹೊರರಾಜ್ಯಗಳ 6 ಖಾಸಗಿ ಬಸ್​ಗಳನ್ನು ಆರ್​ಟಿಒ ಅಧಿಕಾರಿಗಳು ಪತ್ತೆಮಾಡಿ ಒಟ್ಟು 41 ಲಕ್ಷ ರೂ. ದಂಡ ವಿಧಿಸಿದ್ದಾರೆ. ಒಂದೇ ನೋಂದಣಿ ಫಲಕವನ್ನು ಹಲವು ಬಸ್​ಗಳಿಗೆ ಅಳವಡಿಸಿಕೊಂಡು ಓಡಾಡುತ್ತಿದ್ದವು. ನಗರ ಪ್ರವೇಶಿಸಿದರೆ ತೆರಿಗೆ ವಂಚನೆ ಬಯಲಾಗುತ್ತದೆಂದು ನಗರದ ಹೊರವಲಯದಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದವು.

    ಇದನ್ನೂ ಓದಿ:  ಶಾಲೆಗಳಿಗೆ ಸಂಕಷ್ಟ, ಸರ್ಕಾರಕ್ಕೂ ಕಷ್ಟ; ವಿದ್ಯಾರ್ಥಿಗಳಿಗೆ ಸಂಕಟ…

    ಖಾಸಗಿ ಬಸ್ ಮಾಲೀಕರ ಕಳ್ಳಾಟ ಹಾಗೂ ಅವುಗಳನ್ನು ಹಿಡಿಯಲು ಆರ್​ಟಿಒ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ಕುರಿತು ಸಾರಿಗೆ ಇಲಾಖೆ ಆಯುಕ್ತ ಶಿವಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜಪ್ತಿ ಮಾಡಿರುವ ಬಸ್​ಗಳ ಚಾಸ್ಸಿ ನಂಬರ್ ಹಾಗೂ ಬಸ್ ನೋಂದಣಿ ನಂಬರ್​ಗಳಲ್ಲೂ ವ್ಯತ್ಯಾಸ ಕಂಡು ಬಂದಿದ್ದು, ಅಸಲಿ ಮಾಲೀಕರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

    ಇದನ್ನೂ ಓದಿ:  ಜೀವಸಾರ್ಥಕತೆ ಪೋರ್ಟಲ್​ನಲ್ಲಿ ನೇತ್ರದಾನ ಮಾಡಿ – ಅವಕಾಶ ಕಲ್ಪಿಸಿದ ಆರೋಗ್ಯ ಇಲಾಖೆ

    ಸಾರಿಗೆ ಇಲಾಖೆ ಜಂಟಿ ಆಯುಕ್ತರಾದ ಕೆ.ಟಿ.ಹಾಲಸ್ವಾಮಿ ಹಾಗೂ ಓಂಕಾರೇಶ್ವರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಗುರುಮೂರ್ತಿ, ಹಿರಿಯ ಮೋಟಾರು ನಿರೀಕ್ಷಕರಾದ ಎಚ್.ರಾಜಣ್ಣ, ಎಂ.ಎನ್.ಸುಧಾಕರ್, ಡಾ.ಡಿ.ಎಸ್.ಒಡೆಯರ್, ಕೃಷ್ಣಾನಂದ್, ಶಿವಪ್ರಸಾದ್ ಮತ್ತಿತರರು ಕಾರ್ಯಾಚರಣೆ ತಂಡದಲ್ಲಿದ್ದರು.

    ಇದನ್ನೂ ಓದಿ: Web Exclusive | 18 ಜಿಲ್ಲೆಗಳಲ್ಲಿ ಸಾವಯವ ಕೃಷಿ ಅನುಷ್ಠಾನಕ್ಕೆ ಸಿದ್ಧತೆ; ಪರಂಪರಾಗತ ಕೃಷಿ ವಿಕಾಸ ಯೋಜನೆ ಜಾರಿ

    ಒಂದೇ ಸಂಖ್ಯೆಯ ಹಲವು ಬಸ್ : ಜೋಧಪುರ ಬಸ್ ಜಪ್ತಿ ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳಿಗೆ ಆನಂದ್ ಟ್ರಾನ್ಸ್ ಲಿಂಕ್ ಹೆಸರಿನ ಎನ್​ಎಲ್01 ಬಿ 1794 ನೋಂದಣಿ ಸಂಖ್ಯೆಯ ಬಸ್ ಕಣ್ಣಿಗೆ ಬಿದ್ದಿತ್ತು. ಆದರೆ, ಅದೇ ನೋಂದಣಿಯ ಬಸ್ ತೆರಿಗೆ ಪಾವತಿಸದ ಕಾರಣಕ್ಕೆ ಈ ಮೊದಲೇ ಜಪ್ತಿಯಾಗಿತ್ತು. ಆದರೆ, ಆ ನೋಂದಣಿ ಸಂಖ್ಯೆಯ ಫಲಕವನ್ನೇ ಬಳಸಿ ಇನ್ನೊಂದು ಬಸ್ ಸಂಚರಿಸುತ್ತಿರುವ ವಿಚಾರ ತಿಳಿದ ಅಧಿಕಾರಿಗಳು, ಹೊಸೂರು ರಸ್ತೆ ಡೇರಿ ವೃತ್ತದ ಬಳಿ ಇನ್ನೊಂದು ಬಸ್ ಜಪ್ತಿ ಮಾಡಿದ್ದಾರೆ. ನಂತರ ಎನ್​ಎಲ್ 01 ಬಿ 1797 ಹಾಗೂ ಎನ್​ಎಲ್ 01 ಬಿ 1795 ಬಸ್​ಗಳನ್ನೂ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ತೆರಿಗೆ ಕಟ್ಟದೆ ಓಡಾಡುತ್ತಿದ್ದ ಜಿಜೆ 03 ಬಿವಿ 9015 ಸಂಖ್ಯೆಯ ಬಸ್ಸನ್ನೂ ಜಪ್ತಿ ಮಾಡಲಾಗಿದೆ.

    ಕೆಎಎಸ್ ಅಧಿಕಾರಿ ಸುಧಾ ಆಪ್ತರ ಮನೆಗಳಿಗೆ ಎಸಿಬಿ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts