ಕೆಎಎಸ್ ಅಧಿಕಾರಿ ಸುಧಾ ಆಪ್ತರ ಮನೆಗಳಿಗೆ ಎಸಿಬಿ ದಾಳಿ

ACB Raid on KAS officer Sudha's relatives house
Published on

ಬೆಂಗಳೂರು: ಆದಾಯ ಮೀರಿದ ಆಸ್ತಿ ಹೊಂದಿದ ಕೆಎಎಸ್ ಅಧಿಕಾರಿ ಡಾ.ಸುಧಾ ಅವರ ಆಪ್ತರ ಮನೆಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ. ಇಂದು ಬೆಳಗ್ಗೆಯೇ ಬೆಂಗಳೂರು ನಗರ ಮತ್ತು ಸುತ್ತಮುತ್ತ 9 ಪ್ರದೇಶಗಳಲ್ಲಿರುವ ಸುಧಾ ಆಪ್ತರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಹುತೇಕರು ಸುಧಾ ಅವರ ಏಜೆಂಟ್​ಗಳಾಗಿ ಕೆಲಸ ಮಾಡುತ್ತಿದ್ದವರು.

ದೊಡ್ಡ ಆಲದಮರದ ಬಳಿಯ ಭೀಮಾನಕುಪ್ಪೆಯಲ್ಲಿರುವ ಮಹೇಶ್ ಎಂಬಾತನ ಮನೆಗೆ 5 ಅಧಿಕಾರಿಗಳ ಎಸಿಬಿ ತಂಡ ಬೆಳಗ್ಗೆ ಏಳು ಗಂಟೆಗೆ ತೆರಳಿದ್ದು, ಶೋಧ ಕಾರ್ಯ ನಡೆಸಿದೆ. ಮಹೇಶ್ ಮನೆಯಲ್ಲಿ ದಾಖಲೆಗಳಿಲ್ಲದ ಹಣ, ಚಿನ್ನಾಭರಣ ಪತ್ತೆಯಾಗಿದೆ.

ಇದೇ ರೀತಿ, ಸುಧಾ ಜತೆಗೆ ಸಂಪರ್ಕ ಹೊಂದಿದ್ದು ವ್ಯವಹಾರ ನಡೆಸುತ್ತಿರುವವರ ಮನೆ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆದಿದೆ. ದೊಡ್ಡಾಲದ ಮರ ಮತ್ತು ಸುತ್ತಮುತ್ತ ಇರುವ ಆರು ಏಜೆಂಟ್​ಗಳ ಮನೆ ಮೇಲೆ ದಾಳಿ ನಡೆದಿದೆ. ಇನ್ನುಳಿದ ಮಾಹಿತಿ ಲಭ್ಯವಾಗಬೇಕಷ್ಟೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net