More

    ಜೀವಸಾರ್ಥಕತೆ ಪೋರ್ಟಲ್​ನಲ್ಲಿ ನೇತ್ರದಾನ ಮಾಡಿ – ಅವಕಾಶ ಕಲ್ಪಿಸಿದ ಆರೋಗ್ಯ ಇಲಾಖೆ

    ಬೆಂಗಳೂರು: ನೇತ್ರಗಳ ದಾನಕ್ಕೆ ಇದೀಗ ‘ಜೀವಸಾರ್ಥಕತೆ ಪೋರ್ಟಲ್’ನಲ್ಲಿ ಅವಕಾಶ ಕಲ್ಪಿಸಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಆರೋಗ್ಯ ಇಲಾಖೆಯ ಭಾಗವಾಗಿರುವ ಜೀವಸಾರ್ಥಕತೆ, ಮಾನವ ಅಂಗಾಂಗ ಕಸಿ ಕಾಯ್ದೆ ಅನುಷ್ಠಾನದ ಮೇಲ್ವಿಚಾರಣೆಯನ್ನು ಮಾಡುತ್ತಿದೆ. ಈವರೆಗೂ ಪಿತ್ತಜನಕಾಂಗ, ಹೃದಯ, ಮೂತ್ರಪಿಂಡ, ಶ್ವಾಸಕೋಶದಂತಹ ಅಂಗಾಂಗಗಳ ನೋಂದಣಿಗೆ ಅವಕಾಶ ನೀಡಲಾಗಿತ್ತು. ಈಗ ನೇತ್ರಗಳ ದಾನಕ್ಕೂ ಇದರಲ್ಲಿ ಅವಕಾಶ ನೀಡಲಾಗಿದೆ.

    ವ್ಯಕ್ತಿ ಮರಣಾ ನಂತರ ನೇತ್ರವನ್ನು ಸುಡುವುದು, ಮಣ್ಣು ಮಾಡುವುದು ಮಾಡಬಾರದು. ದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಬೇಕು. ಒಬ್ಬ ದಾನಿಯಿಂದ ಇಬ್ಬರಿಗೆ ದೃಷ್ಟಿ ದೊರೆಯುತ್ತದೆ. ದೇಶದಲ್ಲಿ ಅಂದಾಜು 1.2 ಲಕ್ಷ ಮಂದಿ ಕಣ್ಣಿನ ಪಟಲದ ತೊಂದರೆಯಿಂದ ಅಂಧರಾಗಿದ್ದಾರೆ. ಪ್ರತಿ ವರ್ಷ 20 ಸಾವಿರ ಮಂದಿ ಈ ತೊಂದರೆಗೆ ಒಳಗಾಗುತ್ತಿದ್ದಾರೆ. ಇವರಿಗೆ ದಾನಿಗಳು ನೀಡಿದ ನೇತ್ರಗಳಿಂದ ಮರಳಿ ದೃಷ್ಟಿ ಬರುವಂತೆ ಮಾಡಬಹುದಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

    ಇದನ್ನೂ ಓದಿ: ಖಾಕಿ ಮಾನ ತೆಗೆದ ಪರೀಕ್ಷೆ ಗೋಲ್​ಮಾಲ್​!

    ದೇಶದಲ್ಲಿ ಪ್ರತಿ ವರ್ಷ 45 ಸಾವಿರದಿಂದ 50 ಸಾವಿರದಷ್ಟು ಕಾರ್ನಿಯಾ ಸಂಗ್ರಹವಾಗುತ್ತಿವೆ. ವ್ಯಕ್ತಿ ಮರಣ ಹೊಂದಿದ 6 ಗಂಟೆಯೊಳಗೆ ನೇತ್ರಗಳ ಸಂಗ್ರಹವಾಗಬೇಕು. ನೇತ್ರದಾನ ಮಾಡುವವರು –http://www.jeevasarthakathe.karnataka.gov.in/ ಮೂಲಕ ಹೆಸರು ನೋಂದಾಯಿಸಿಕೊಂಡು, ದಾನಿಯ ಕಾರ್ಡ್​ನ್ನು ಡೌನ್​ಲೋಡ್ ಮಾಡಿಕೊಳ್ಳಬಹುದು.

    ಮನ್ಸೂರ್ ಜತೆ ಬೇಗ್ ಅಕ್ರಮ ಅವ್ಯವಹಾರ – ಕಂದಾಯ ಇಲಾಖೆಗೆ ಸಕ್ಷಮ ಪ್ರಾಧಿಕಾರದ ತನಿಖಾಧಿಕಾರಿ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts