More

    ಕರೊನಾದಿಂದಾಗಿ ಶುಕ್ರಯಾನ ಮುಂದಕ್ಕೆ – 2023ರಲ್ಲಿ ಯಾತ್ರೆ ಸಾಧ್ಯತೆ ಕಡಿಮೆ

    ಬೆಂಗಳೂರು : ಭೂಮಿಯ ಸಹೋದರಿ ಎನ್ನಲಾಗುವ ಶುಕ್ರ ಗ್ರಹದ ಅನ್ವೇಷಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಕೈಗೊಳ್ಳಲಿರುವ ಶುಕ್ರಯಾನ ಯೋಜನೆಯು ಉದ್ದೇಶಿತ 2023ನೇ ಇಸವಿಯಿಂದ ಮುಂದೂಡುವ ಸಾಧ್ಯತೆಯಿದೆ.

    ಭೂಮಿಯಷ್ಟೆ ಗಾತ್ರ, ಹುಟ್ಟಿನ ಮೂಲ, ಸಾಧ್ಯತೆ, ಗುರುತ್ವಾಕರ್ಷಣೆಯಲ್ಲಿ ಸಾಮ್ಯತೆಯಿಂದಾಗಿ ಭೂಮಿಯೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಶುಕ್ರ ಗ್ರಹವನ್ನು ಅಧ್ಯಯನ ಮಾಡಬೇಕೆಂದು ಈಗಾಗಲೆ ಇಸ್ರೊ ಘೋಷಿಸಿರುವ ಶುಕ್ರಯಾನ ಯೋಜನೆ ತಯಾರಿ ನಡೆದಿದ್ದು, 2023ಕ್ಕೆ ಜಿಎಸ್​ಎಲ್​ವಿ ಮಾರ್ಕ್-2 ರಾಕೆಟ್ ಮೂಲಕ ಉಪಕರಣಗಳ ಉಡಾವಣೆ ಮಾಡುವ ಯೋಚನೆಯಿತ್ತು. ಆದರೆ ಕರೊನಾ ಮಹಾಮಾರಿ ಕಾರಣಕ್ಕೆ ಸಿದ್ಧತೆಯಲ್ಲಿ ವ್ಯತ್ಯಯವಾಗಿದೆ. ಉಡಾವಣೆಯ ಸಮಯದ ಪುನರ್ ಪರಿಶೀಲನೆ ನಡೆಯುತ್ತಿದೆ. ಶುಕ್ರ ಗ್ರಹಕ್ಕೆ ಉಪಕರಣಗಳನ್ನು ತಲುಪಿಸಲು ಅನುಕೂಲಕರ ಅವಧಿ(ಭೂಮಿಗೆ ಹತ್ತಿರದಲ್ಲಿರುವ ಸಮಯ) ಪ್ರತಿ 19 ತಿಂಗಳಿಗೊಮ್ಮೆ ಆಗಮಿಸುತ್ತದೆ. 2023ರಲ್ಲಿ ಸಾಧ್ಯವಾಗದಿದ್ದರೆ ಬಹುಶಃ 2024ರಲ್ಲಿ ಅಥವಾ 2026ರಲ್ಲಿ ಅವಕಾಶ ಲಭಿಸುತ್ತದೆ ಎಂದು ಇಸ್ರೊ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಶುಕ್ರಗ್ರಹ ಅನ್ವೇಷಣೆ: ಇಸ್ರೋ ಜೊತೆ ಸ್ವೀಡನ್ ಸಹಯೋಗ

    ಈ ನಡುವೆ ಶುಕ್ರಯಾನಕ್ಕೆ ವಿದೇಶಗಳು ಸೇರಿ ಅನೇಕ ಮೂಲಗಳಿಂದ ವೈಜ್ಞಾನಿಕ ವಲಯ ಆಸಕ್ತಿ ವ್ಯಕ್ತಪಡಿಸಿದೆ. ಶುಕ್ರಯಾನದಲ್ಲಿ ಕೊಂಡೊಯ್ಯಲು, ಫ್ರಾನ್ಸ್​ನಿಂದ ಒಂದು ಸೇರಿದಂತೆ 20 ಬಾಹ್ಯಾಕಾಶ ಆಧರಿತ ಸಂಶೋಧನಾ ಪ್ರಸ್ತಾವನೆಗಳ(ಉಪಕರಣಗಳನ್ನು) ಪರಿಶೀಲನೆ ನಡೆಯುತ್ತಿದೆ. ರಷ್ಯಾ, ಫ್ರಾನ್ಸ್, ಸ್ವೀಡನ್ ಹಾಗೂ ಜರ್ಮನಿಯ ಸಹಭಾಗಿತ್ವದ ಪ್ರಸ್ತಾವನೆಗಳೂ ಇದರಲ್ಲಿ ಸೇರಿವೆ. ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ ಸಿಎನ್​ಇಎಸ್ ಪ್ರಕಾರ ವೈರಲ್ ಉಪಕರಣವನ್ನು(ವೀನಸ್ ಇನ್​ಫ್ರಾರೆಡ್ ಅಟ್ಮಾಸ್ಪೆರಿಕ್ ಗ್ಯಾಸ್ ಲಿಂಕರ್) ಈಗಾಗಲೆ ಆಯ್ಕೆಯಾಗಿದೆ.

    ಪಡಿತರ ಜತೆಗೆ ಭತ್ಯೆ ನೀಡುವ ಕುರಿತು ನಿಲುವು ತಿಳಿಸಿ – ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts