ಗಂಗೊಳ್ಳಿ: ಕಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ಳೂರು ಕಂದಾವರ ಅಂಗನವಾಡಿ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಆಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಸ್ತನ್ಯಪಾನ ಸಪ್ತಾಹ ಹಾಗೂ ವಿವಿಧ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ರಕ್ಷಿತ್ ಶೆಟ್ಟಿ ಕಲಿಕಾ ಮೇಜು, ಉಳ್ಳೂರು ಶಾಲಾ ಶಿಕ್ಷಕಿಂ ಉಷಾ ಸ್ಕೂಲ್ ಬ್ಯಾಗ್, ಸಂಗೀತಾ ಹಾಗೂ ಭಾರತಿ ಸಮವಸ್ತ್ರ, ಸ್ಕಂದ ಒಕ್ಕೂಟದ ಸದಸ್ಯರು ಸಮವಸ್ತ್ರದ ಜತೆ ಸ್ಟೀಲ್ ಬುಟ್ಟಿ, ರಾಜೇಶ್ ಅರಳಿಕಟ್ಟೆ ಫ್ಯಾನ್ ಹಾಗೂ ವಿಜಯಾ ಗಣೇಶ್ ಬೋವಿ ಸಂಗ್ರಾಹಕ ಡಬ್ಬಿಯನ್ನು ಕೊಡುಗೆಯಾಗಿ ನೀಡಿದರು.
ಬಾಲವಿಕಾಸ ಸಮಿತಿ ಅಧ್ಯಕ್ಷೆ ಸವಿತಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಇಲಾಖೆ ಮೇಲ್ವಿಚಾರಕಿ ಪ್ರಭಾವತಿ ಶೆಟ್ಟಿ ಸ್ತನ್ಯಪಾನದ ಬಗ್ಗೆ ಮಾಹಿತಿ ನೀಡಿದರು. ಪಂಚಾಯಿತಿ ಸದಸ್ಯೆ ಜಯಶ್ರೀ ಆರ್. ಶೆಟ್ಟಿ, ಸುಬ್ರಹ್ಮಣ್ಯ ಶೇರಿಗಾರ್, ಕಾರ್ತಿಕ್ ದೇವಾಡಿಗ ಉಪಸ್ಥಿತರಿದ್ದರು. ಸತ್ಯನಾರಾಯಣ ಅಡಿಗ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಇಂದಿರಾ ಕಾರ್ಯಕ್ರಮ ನಿರೂಪಿಸಿದರು.