ಸಾಲಿಗ್ರಾಮ ದೇವಳದಲ್ಲಿ ಋಗ್ವೇದ ಪಾರಾಯಣ

parayana
ಶ್ರೀ ಗುರುನರಸಿಂಹ ದೇವಳದಲ್ಲಿ ಋಗ್ವೇದ ಪಾರಾಯಣ ನಡೆಯಿತು
Published on

ಕೋಟ: ಶ್ರಾವಣ ಮಾಸದ ಪ್ರಯುಕ್ತ ಶನಿವಾರ ಶ್ರೀ ಗುರುನರಸಿಂಹ ದೇವಳದಲ್ಲಿ ಋಗ್ವೇದ ಪಾರಾಯಣ ಆರಂಭವಾಯಿತು.
ದೇಗುಲ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್ ಚಾಲನೆ ನೀಡಿದರು. ಕೋಶಾಧಿಕಾರಿ ಪರಶುರಾಮ ಭಟ್ಟ, ಮೊಕ್ತೇಸರ ಮಹಾಬಲ ಹೇರಳೆ ಉಪಸ್ಥಿತಿಯಲ್ಲಿ ತಂತ್ರಿ ಕೃಷ್ಣ ಸೋಮಯಾಜಿ, ಅರ್ಚಕ ಜನಾರ್ದನ ಅಡಿಗ ಸಾಮೂಹಿಕ ಫಲ ಪ್ರಾರ್ಥನಾ ವಿಧಿ ನೆರವೇರಿಸಿದರು. ಎಂಟು ದಿನ ಪಠಣ ನಡೆಯಲಿದ್ದು, ಆಗಸ್ಟ್ 17ರಂದು ಕಾರ್ಯಕ್ರಮ ಸಮಾಪನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net