ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಪಡುಬಿದ್ರಿ ಕಾರ್ಕಳದ ರಾಜ್ಯ ಹೆದ್ದಾರಿ 1ರ ಪಡುಬಿದ್ರಿ ಬಳಿಯ ಕಂಚಿನಡ್ಕ ಪ್ರದೇಶದಲ್ಲಿ ಸುಂಕ ವಸೂಲಾತಿ ಕೇಂದ್ರಕ್ಕೆ ಸಮಸ್ತ ಕಾರ್ಕಳ ಪಡುಬಿದ್ರಿ ಹೆದ್ದಾರಿ ಅವಲಂಬಿಸಿರುವ 40 ಹಳ್ಳಿಗಳ ಜನತೆಯಿಂದ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಳ್ಳಲಾಯಿತು.
ರಾಜ್ಯ ಸರ್ಕಾರ ಟೋಲ್ ಕೇಂದ್ರ ನಿರ್ಮಾಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಪಡುಬಿದ್ರಿ ಶ್ರೀ ಉದಯಾದ್ರಿ ದೇವಸ್ಥಾನದಲ್ಲಿ ಸೋಮವಾರ ಜನಾಗ್ರಹ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೆಳ್ಮಣ್ ಟೋಲ್ ಹೋರಾಟ ಸಮಿತಿ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಅನ್ಸಾರ್ ಅಹಮ್ಮದ್, ಅನಿತಾ ಡಿಸೋಜ, ನವೀನಚಂದ್ರ ಜೆ. ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸಾಮಾಜಿಕ ಕಾರ್ಯಕರ್ತ ರಮಾನಾಥ್ ಶೆಟ್ಟಿ, ಕೆನರಾ ಬಸ್ ಮಾಲೀಕಕರ ಸಂಘ ಕೋಶಾಧಿಕಾರಿ ಜ್ಯೋತಿಪ್ರಸಾದ್ ಹೆಗ್ಡೆ, ರಮೇಶ್ ಕೋಟ್ಯಾನ್, ಸರ್ವಜ್ಞ ತಂತ್ರಿ ಬೆಳ್ಮಣ್, ಮಿಥುನ್ ಹೆಗ್ಡೆ, ಉದಯ ಶೆಟ್ಟಿ ಮುನಿಯಾಲ್, ಜಿತೇಂದ್ರ ಶೆಟ್ಟಿ ಉದ್ಯಾವರ, ವೈ.ಸುಧೀರ್‌ಕುಮಾರ್, ವೈ.ಸುಕುಮಾರ್ ಶರಣ್‌ಕುಮಾರ್ ಮಟ್ಟು, ಗಣೇಶ್ ಕೋಟ್ಯಾನ್, ನವೀನ್ ಎನ್. ಶೆಟ್ಟಿ, ಶಶಿಧರ್ ಶೆಟ್ಟಿ ಬೆಳ್ಮಣ್, ಮಧು ಆಚಾರ್ಯ ಮೂಲ್ಕಿ, ರವಿ ಶೆಟ್ಟಿ ಪಾದೆಬೆಟ್ಟು, ಹರೀಶ್ ಶೆಟ್ಟಿ ಪಾದೆಬೆಟ್ಟು, ಚಂದ್ರಹಾಸ್ ಶೆಟ್ಟಿ ಇನ್ನಾ, ದೀಪಕ್ ಕಾಮತ್ ಕಾಂಜರಕಟ್ಟೆ, ಯುವರಾಜ್ ಕುಲಾಲ್, ಸಂದೇಶ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಶಶಿಕಾಂತ್ ಪಡುಬಿದ್ರಿ, ನಾಗೇಶ್ ಭಟ್, ದಿನೇಶ್ ಕೋಟ್ಯಾನ್ ಪಲಿಮಾರು, ಉದಯ್ ಬೆಳ್ಮಣ್, ರವೀಂದ್ರ ಪ್ರಭು ಸಾಂತೂರು, ಸಂತೋಷ್ ಕುಮಾರ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ನೀತಾ ಗುರುರಾಜ್, ಗಾಯತ್ರಿ ಪ್ರಭು ಪಲಿಮಾರು, ರಮಾಕಾಂತ್ ದೇವಾಡಿಗ, ಲಕ್ಷ್ಮಣ್ ಎಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಅನಾವುತಗೀಗೆ ರಾಜ್ಯ ಸರ್ಕಾರವೇ ಹೊಣೆ
ಯಾವುದೇ ಕಾರಣಕ್ಕೂ ಈ ರಾಜ್ಯ ಹೆದ್ದಾರಿಯಲ್ಲಿ ಸುಂಕ ವಸೂಲಾತಿ ಕೇಂದ್ರ ಸ್ಥಾಪಿಸಲು ಅವಕಾಶ ನೀಡುವುದಿಲ್ಲ. ಜನವಿರೋಧಿಯಾಗಿರುವ ಈ ಸುಂಕ ವಸೂಲಾತಿ ಕೇಂದ್ರ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಕ್ಷಣ ಕೈಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ 40 ಹಳ್ಳಿಯ ಜನ ಸೇರಿ ಜನಾಂದೋಲನ ಮೂಲಕ ಉಗ್ರ ಹೋರಾಟ ಮಾಡಲು ಸಿದ್ಧರಿರುವುದಲ್ಲದೆ, ಜನರ ವಿರೋಧದ ನಡುವೆಯೂ ಸುಂಕ ವಸೂಲಾತಿ ಕೇಂದ್ರ ಸ್ಥಾಪಿಸಲು ಮುಂದಾದರೆ ಮುಂದೆ ಆಗುವ ಎಲ್ಲ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಸಂಪೂರ್ಣ ಹೊಣೆಯಾಗಲಿದೆ ಎಂದು ಜನ ಎಚ್ಚರಿಕೆ ನೀಡಿದರು.
ಕಾಪು ಭಾಗದಲ್ಲಿ ಯಾವುದೇ ಕಾರಣಕ್ಕೂ ಸುಂಕ ವಸೂಲಾತಿ ಕೇಂದ್ರ ಆಗಲೂ ಬಿಡೋದಿಲ್ಲ, ತಂಡ ರಚಿಸಿ ಸಂಘಟಿತ ಹೋರಾಟಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ.
-ಗುರ್ಮೆ ಸುರೇಶ್ ಶೆಟ್ಟಿ ಶಾಸಕ
-ಗುರ್ಮೆ ಸುರೇಶ್ ಶೆಟ್ಟಿ ಶಾಸಕ