ಫೋನ್ ಕಳ್ಳನ ಜತೆ ಮಹಿಳೆ ಲವ್; ಇವರಿಬ್ಬರ ಲವ್ ಸ್ಟೋರಿ ಸಾಮಾನ್ಯವಲ್ಲ…

lovethief
Published on

ಬ್ರೆಜಿಲ್: ನಾವು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅಥವಾ ಬಸ್ಸು ಮತ್ತು ರೈಲುಗಳಲ್ಲಿ ಪ್ರಯಾಣಿಸುವಾಗ ಯಾರಾದರೂ ನಮ್ಮ ಫೋನ್ ಕದ್ದರೆ  ಪೊಲೀಸರಿಗೆ ದೂರು ನೀಡುತ್ತೇವೆ..ಅಥವಾ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತೇವೆ. ಇವೆರಡೂ ಮಾಡಲು ಸಾಧ್ಯವಾಗದಿದ್ದರೆ ಇನ್ನೊಂದು ಫೋನ್ ಖರೀದಿಸಿ ಸುಮ್ಮನಾಗುತ್ತೇವೆ. ಆದರೆ ಮಹಿಳೆಯೊಬ್ಬಳು ತನ್ನ ಫೋನ್ ಕದ್ದ ಕಳ್ಳನನ್ನು ಸಂಪರ್ಕಿಸಿ ಆತನ ಜತೆಗೆ ಪ್ರೀತಿಯಾಗಿದೆ ಎಂದರೆ ನುಂಬುತ್ತೀರಾ?

ಬ್ರೆಜಿಲ್ ಮಾಧ್ಯಮವೊಂದು ದಂಪತಿಯನ್ನು ಸಂದರ್ಶಿಸಿದಾಗ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಫೋನ್ ಕಳ್ಳನ ಲವ್ ಸ್ಟೋರಿಯಲ್ಲಿ ನಾಯಕಿಯ ಹೆಸರು ಎಮಾನುಲಾ. ಈಕೆ  ತಮ್ಮ ಲವ್ ಸ್ಟೋರಿಯನ್ನು ಬಹಿರಂಗಪಡಿಸಿದ್ದಾಳೆ.

ಒಂದು ದಿನ ನಾನು ರಸ್ತೆಯಲ್ಲಿ ಹೋಗುತ್ತಿದ್ದಾಗ ಒಬ್ಬ ವ್ಯಕ್ತಿ ನನ್ನ ಫೋನ್ ಕದ್ದನು. ನಾನು ನನ್ನ ಮತ್ತೊಂದು ಫೋನ್​ನಿಂದ ಕರೆ ಮಾಡಿದೆ. ರಿಂಗ್ ಆಯ್ತು. ಆದರೆ ಯಾರು ಕೂಡಾ ಫೋನ್ ಎತ್ತಲಿಲ್ಲ. ಆದರೆ ಸ್ವಲ್ಪ ಸಮಯದ ನಂತರ ನನಗೆ ಮತ್ತೆ ಕರೆ ಬಂತು ಫೋನ್ ಮಾಡಿದನು. ನಾನೇ ಆ ಫೋನ್ ಕದ್ದಿದ್ದು ಎಂದು ಪ್ರಾಮಾಣಿಕವಾಗಿ ಹೇಳಿದರು. ಅವರ ಪ್ರಾಮಾಣಿಕತೆ ನನಗೆ ಇಷ್ಟವಾಯ್ತು. ಅದಕ್ಕೇ ಅವರ ಜತೆ ಮಾತಾಡಿದ್ದು, ಆ ಮಾತಿನಲ್ಲಿ ನೋವನ್ನು ಕಂಡೆ. ಅವನ ಮಾತಿಗೆ ನಾನು ಆಕರ್ಷಿತಳಾದೆ ಎಂದಳು.

ನನಗೆ ಗರ್ಲ್ ಫ್ರೆಂಡ್ ಇಲ್ಲ. ಒಬ್ಬಂಟಿಯಾಗಿರುವುದು ತುಂಬಾ ನೋವು ತರಿಸುತ್ತದೆ. ನಾನು ಫೋನ್ ರಿಂಗ್ ಮಾಡಿದಾಗ, ಅವಳ ಫೋಟೋ ನೋಡಿದೆ. ಎಷ್ಟು ಸುಂದರವಾಗಿದ್ದಾರೆ ಎಂದು ಅಂದುಕೊಂಡೆ. ಅದಕ್ಕೇ ಮತ್ತೆ ಕಾಲ್ ಮಾಡಿದೆ, ಅವಳನ್ನ ದಿನಾಲೂ ಕಂಡರೆ ಎಷ್ಟು ಚೆನ್ನಗಿರುತ್ತದೆ ಎಂದು ಯೋಚಿಸಿದೆ. ನಂತರ ಹೀಗೆ ಇಬ್ಬರು ನಡುವೆ ಆಗಾಗ ಮಾತು ನಡೆಯುತ್ತಲೇ ಇತ್ತು. ನಂತರ ಇಬ್ಬರು ಭೇಟಿಯಾದೆವು. ಹೀಗೆ ಇಬ್ಬರ ನಡುವೆ ಸ್ನೇಹ ಬೆಳೆಯಿತು ಎಂದು ಆಕೆಯ ಗೆಳೆಯ ಹೇಳಿದ್ದಾನೆ.

ಅದು ಪ್ರೀತಿಗೆ ತಿರುಗಿತು.ನಂತರ ಇಬ್ಬರೂ ಒಟ್ಟಿಗೆ ಇರಲು ಪ್ರಾರಂಭಿಸಿದರು. ಈಗ ಎಮಾನುಲಾ ಮತ್ತು ಅವಳ ಕಳ್ಳ ಗೆಳೆಯ ಎರಡು ವರ್ಷಗಳಿಂದ ಒಟ್ಟಿಗೆ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net