ಒಂದು ಮಗುವಿನ ಸುತ್ತ … 'ಬ್ರಹ್ಮಕಮಲ'ಳಾದ ಅದ್ವಿತಿ ಶೆಟ್ಟಿ

Brahma Kamala - Final
Published on

ಬೆಂಗಳೂರು: ರಾತ್ರಿ ಹುಟ್ಟಿ ರಾತ್ರಿಯೇ ಮುರುಟಿ ಹೋಗುವ ಹೂವು ಬ್ರಹ್ಮಕಮಲ. ಈಗ ಅದೇ ಹೆಸರಿನ ಚಿತ್ರವೊಂದು ಸದ್ದಿಲ್ಲದೆ ನಿರ್ಮಾಣವಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಹೊಸ ವರ್ಷದ ಪ್ರಯುಕ್ತ ಚಿತ್ರದ ಫಸ್ಟ್​ ಲುಕ್​ ಬಿಡುಗಡೆಯಾಗಿದೆ.

ಚಿತ್ರಕ್ಕೆ 'ಬ್ರಹ್ಮಕಮಲ' ಎಂಬ ಹೆಸರಿಡುವುದಕ್ಕೂ ಕಾರಣವಿದೆ. ಬ್ರಹ್ಮಕಮಲದಂತೆ ಇದು ಸಹ ಒಂದು ರಾತ್ರಿಯ ಕಥೆಯಾಗಿದ್ದು, ಒಂದು ಮಗುವಿನ ಸುತ್ತ ಸುತ್ತುದಂತೆ. ಒಂದು ರಾತ್ರಿಯಲ್ಲಿ ಆ ಮಗುವಿನ ಜೀವನದಲ್ಲಿ ಏನೆಲ್ಲ ಆಗುತ್ತದೆ ಎಂಬುದರ ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ.

'ಬ್ರಹ್ಮಕಮಲ' ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅದ್ವಿತಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರೊಂದಿಗೆ ಲೋಕೇಂದ್ರ ಸೂರ್ಯ, ಋತು ಚೈತ್ರ, ಮಮತಾ ರಾಹುತ್, ಪ್ರಮಿಳಾ ಸುಬ್ರಹ್ಮಣ್ಯ, ಬಲ ರಾಜ್ವಾಡಿ, ಆಟೋ ನಾಗರಾಜ್, ಗಂಡಸಿ ಸದಾನಂದಸ್ವಾಮಿ, ಕವಿತಾ ಕಂಬಾರ್, ರಾಧಾ ರಾಮಚಂದ್ರ ಮುಂತಾದವರು ನಟಿಸಿದ್ದಾರೆ.

ಈ ಹಿಂದೆ 'ದಾರಿ ಯಾವುದಯ್ಯಾ ವೈಕುಂಠಕೆ' ಎಂಬ ಸಿನಿಮಾ ಮಾಡಿದ್ದ ಸಿದ್ದು ಪೂರ್ಣಚಂದ್ರ ಕಥೆ ಮತ್ತು ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿರ್ಮಾಣವೂ ಅವರದ್ದೇ. ಚಿತ್ರಕ್ಕೆ ಲೋಕೇಂದ್ರ ಸೂರಿ ಛಾಯಾಗ್ರಹಣ ಮತ್ತು ಅನಂತ್​ ಆರ್ಯನ್​ ಅವರ ಸಂಗೀತವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net