ಬಾಲಕನನ್ನು ರೇಪ್​ ಮಾಡಿ ಜೈಲುವಾಸಿಯಾದ ನರ್ಸರಿ ಟೀಚರ್​: ಇತ್ತ ಬಾಲಕನ ವರ್ತನೆಯೇ ಬದಲಾಯ್ತು!

Nursery Worker
Published on

ಲಂಡನ್​: ಹದಿಮೂರು ವರ್ಷದ ಬಾಲಕನನ್ನು ತನ್ನ ಬಲೆಗೆ ಬೀಳಿಸಿಕೊಂಡು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ಆತನ ಮಗುವಿಗೆ ತಾಯಿಯಾಗಿರುವ ವಿವಾಹಿತೆ ನರ್ಸರಿ ಟೀಚರ್​, ಬಾಲಕನ ಜೀವನವನ್ನೇ ಹಾಳು ಮಾಡಿರುವುದಾಗಿ ಆತನ ತಾಯಿ ಕಣ್ಣೀರಾಕಿದ್ದಾಳೆ.

ವಿಂಡ್ಸರ್​ ನಿವಾಸಿಯಾಗಿರುವ ಲಿಯಾ ಕೊರ್ಡೈಸ್​ (20) 2017ರ ಜನವರಿ ತಿಂಗಳಲ್ಲಿ ಒಂದು ರಾತ್ರಿ ಕಂಪ್ಯೂಟರ್​ ಗೇಮ್​ ಆಡುತ್ತಿದ್ದ ಬಾಲಕನ ಬೆಡ್​ರೂಮ್​ಗೆ ತೆರಳಿ ಬಲವಂತವಾಗಿ ಸೆಕ್ಸ್​ಗೆ ಒತ್ತಾಯಿಸಿ, ಕಾಮದಾಹಕ್ಕೆ ಬಳಸಿಕೊಂಡಿದ್ದಳು. ಈ ವೇಳೆ ಆಕೆ ಪಾನಮತ್ತಳಾಗಿದ್ದಳು ಎನ್ನಲಾಗಿದೆ. ಇದೇ ಪ್ರಕರಣದಲ್ಲಿ ಈ ವರ್ಷದ ಆರಂಭದಲ್ಲಿಯೇ ಲಿಯಾ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ. ಇದಕ್ಕೂ ಬಾಲಕನೇ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆಂದು ಸುಳ್ಳು ಹೇಳಿದ್ದಳು. ಆದರೆ, ಅದನ್ನು ತಳ್ಳಿ ಹಾಕಿದ ನ್ಯಾಯಾಲಯ ಲಿಯಾಳನ್ನು ಶಿಕ್ಷೆಗೆ ಗುರಿ ಮಾಡಿತ್ತು.

ಬಾಲಕನ ಜತೆ ಅನೇಕ ಬಾರಿ ದೈಹಿಕ ಸಂಪರ್ಕ ಮಾಡಿರುವ ಲಿಯಾ ಗರ್ಭಿಣಿಯು ಆಗಿ ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದ್ದಾಳೆ. ಆರಂಭದಲ್ಲಿ ಮಗುವಿನ ತಂದೆ ಲಿಯಾಳ ಪತಿ ಎಂದು ಹೇಳಲಾಗಿತ್ತು. ಸ್ವತಃ ಆತನು ಕೂಡ ತನ್ನದೇ ಮಗು ಎಂದು ನಂಬಿದ್ದ. ಆದರೆ, ಡಿಎನ್​ಎ ಪರೀಕ್ಷೆಯಲ್ಲಿ ಮಗುವಿನ ತಂದೆ ಬಾಲಕ ಎಂದು ಗೊತ್ತಾದ ಬಳಿಕ ಆತನಿಗೆ ಶಾಕ್​ ಆಗಿತ್ತು. ಪತ್ನಿಯ ಇನ್ನೊಂದು ಮುಖವು ಸಹ ಬಿಚ್ಚಿಕೊಂಡಿತ್ತು.

ಕೊನೆಗೆ ನ್ಯಾಯಾಲಯದ ಮುಂದೆ ಲಿಯಾ ತನ್ನ ತಪ್ಪು ಒಪ್ಪಿಕೊಂಡಳು. ಕಳೆದ ಮಾರ್ಚ್​ನಲ್ಲಿ ಆಕೆಗೆ ಲಂಡನ್​ ರೀಡಿಂಗ್​ ಕ್ರೌನ್​ ಕೋರ್ಟ್​ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸದ್ಯ ಲಿಯಾ ಜೈಲು ವಾಸಿಯಾಗಿದ್ದು, ಇದರ ನಡುವೆ ಅನಾಮಿಕನಾಗಿ ಉಳಿದುಕೊಂಡಿರುವ ಬಾಲಕನ ಗುರುತನ್ನು ಆತನ ತಾಯಿ ಕಾಪಾಡಿಕೊಂಡು ಬರುತ್ತಿದ್ದಾರೆ.

ಬಾಲಕನ ವರ್ತನೆಗೆ ತಾಯಿಯ ಕಣ್ಣೀರು....

ಲಿಯಾ ನನ್ನ ಕುಟುಂಬ ನಂಬಿಕಸ್ಥ ಸ್ನೇಹಿತೆಯಾಗಿದ್ದಳು. ಒಮ್ಮೆ ನನ್ನ ಮಗನ ಕೋಣೆಗೆ ನುಗ್ಗಿದಳು. ಆವಾಗ ನನ್ನ ಮಗ ಅಲ್ಲಿರಲಿಲ್ಲ. ಗೇಮ್​ ಆಡುತ್ತಾ ವಿಶ್ರಾಂತಿಯ ಮೂಡ್​ನಲ್ಲಿದ್ದ ನನ್ನ ಮಗನನ್ನು ಬಲವಂತಾಗಿ ತನ್ನ ಕಾಮತೃಷೆಗೆ ಬಳಸಿಕೊಂಡಲು. ನಾನು ಇಲ್ಲದಿರುವಾಗಲೆಲ್ಲ ಇದೇ ಪ್ರಯತ್ನ ಮಾಡುತ್ತಿದ್ದಳು. ನನ್ನ ಮಗ ಇನ್ನೂ ಚಿಕ್ಕವನು. ಆದರೆ, ಆಕೆಗೆ ಶೂನ್ಯ ಪಶ್ಚತಾಪವೂ ಇಲ್ಲ. ಚಿಕ್ಕ ವಯಸ್ಸಿನಲ್ಲೇ ನನ್ನ ಮಗನನ್ನು ತಂದೆಯನ್ನಾಗಿ ಮಾಡಿದ್ದಾಳೆ. ನಮಗೆಲ್ಲರಿಗೂ ಇಂದಿಗೂ ನಂಬಲಾಗದ ಆಘಾತಕಾರಿ ಸಂಗತಿಯಾಗಿದೆ. ನನ್ನ ಮಗನ ಜೀವನವೇ ಹಾಳಾಗಿ ಹೋಗಿದೆ. ತುಂಬಾ ಸಂತೋಷದಲ್ಲಿರುತ್ತಿದ್ದ ನನ್ನ ಮಗನೀಗ ಸದಾ ದುಃಖದಲ್ಲಿರುತ್ತಾನೆ ಎಂದಿದ್ದಾರೆ.

ನನ್ನ ಮಗ ಮಹಿಳೆಯರನ್ನು ಅನುಮಾನದಿಂದ ನೋಡುತ್ತಾನೆ. ಸಣ್ಣ ವಿಚಾರಕ್ಕೂ ಕೋಪ ಮಾಡಿಕೊಳ್ಳುತ್ತಾನೆ. ಏನೇ ಕೇಳಿದರೂ ಪ್ರಶ್ನೆ ಮಾಡುತ್ತಾನೆ. ಆತನ ಮೇಲಿನ ಅತ್ಯಾಚಾರ ಭಾವನಾತ್ಮಕವಾಗಿ ಆತನನ್ನು ಕುಗ್ಗಿಸಿದೆ. ಯಾರೊಂದಿಗೆ ಮಾತನಾಡಲು ಬಯಸುವುದಿಲ್ಲ. ಯಾವಾಗಲೂ ಕೊಠಡಿಯಲ್ಲಿ ಏಕಾಂಗಿಯಾಗಿರುತ್ತಾನೆ. ಚಿಂತಾಕ್ರಾಂತನಾಗಿರುತ್ತಾನೆ. ನನ್ನ ಮಗನ ಜೀವನವನ್ನೇ ಲಿಯಾ ಹಾಳು ಮಾಡಿದಳು ಎಂದು ಬಾಲಕನ ತಾಯಿ ಕಣ್ಣೀರಾಕಿದ್ದಾಳೆ.

ಚೈಲ್ಡ್​ ಕೇರ್​ ಅಧ್ಯಯನ ಮಾಡಿರುವ ಲಿಯಾ, ಸ್ಥಳೀಯ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದಳು. ಬಾಲಕ ಹಾಗೂ ಲಿಯಾ ಒಂದೇ ಏರಿಯಾದವರು. 17 ಮತ್ತು 18ನೇ ವರ್ಷದಲ್ಲಿ ಬಾಲಕನೊಂದಿಗೆ ಅನೇಕ ಬಾರಿ ಲೈಂಗಿಕ ಕ್ರಿಯೆ ನೆಡೆಸಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net