BSF ನುಸುಳುಕೋರರನ್ನು ಒಳಬಿಡುವ ಮೂಲಕ ಬಂಗಾಳದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ: Mamata Banerjee

Mamata Banerjee
Published on

ಕಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಅರಾಜಕತೆ ಸೃಷ್ಟಿಸಲು ಗಡಿ ಭದ್ರತಾ ಪಡೆ (BSF) ಬಾಂಗ್ಲಾದಿಂದ ಅಕ್ರಮವಾಗಿ ಭಾರತ ಪ್ರವೇಶಿಸುತ್ತಿರುವ ನುಸುಳುಕೋರರಿಗೆ ಸಹಾಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಆರೋಪಿಸಿದ್ದಾರೆ.

ಇಸ್ಲಾಂಪುರ, ಸೀತಾಯ್ ಮತ್ತು ಚೋಪ್ರಾದಂತಹ ಗಡಿ ಪ್ರದೇಶಗಳ ಮೂಲಕ ಗೂಂಡಾಗಳನ್ನು ಕಳುಹಿಸಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಅರಾಜಕತೆ ಸೃಷ್ಟಿಸುವುದಕ್ಕೆ ಕೇಂದ್ರ ಸರ್ಕಾರ ಬಿಎಸ್​ಎಫ್​ ಮೂಲಕ ಈ ರೀತಿ ಮಾಡಿಸುತ್ತಿದೆ.  ಗಡಿ ಕಾಯುವ ಹೊಣೆ ಗಡಿ ಭದ್ರತಾ ಪಡೆಯದ್ದು. ಆದರೆ ನುಸುಳುವಿಕೆ ತಡೆಯದ ಇವರ ಕ್ರಮದ ವಿರುದ್ಧ ಏಕೆ ಧನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದ್ಧಾರೆ.

ಗಡಿಯಲ್ಲಿ ನುಸುಳುಕೋರರಿಗೆ ನೆರವಾಗುವ ಮೂಲಕ ತೃಣಮೂಲ ಸರ್ಕಾರದ ಮೇಲೆ ಅನಗತ್ಯ ಆರೋಪ ಮಾಡಿದರೆ ಹುಷಾರ್​. ಬಿಎಸ್‌ಎಫ್‌ ಮಾಡುವ ತಪ್ಪುಗಳನ್ನು ಬೆಂಬಲಿಸುವ ಮೂಲಕ ತೃಣಮೂಲ ಕಾಂಗ್ರೆಸ್​ಅನ್ನು ಹೀಯಾಳಿಸಬೇಡಿ. ನಮ್ಮ ಪಕ್ಷ ಎಂದಿಗೂ ಈ ರೀತಿಯ ಕೆಲಸ ಮಾಡುವುದಿಲ್ಲ. ಗಡಿ ಕಾಯುತ್ತಿರುವುದು ಬಿಎಸ್‌ಎಫ್‌ ಹೊರತೂ ಟಿಎಂಸಿ ಪಕ್ಷವಲ್ಲ. ಅಲ್ಲಿಂದ ಗೂಂಡಾಗಳು ರಾಜ್ಯ ಪ್ರವೇಶಿಸುತ್ತಿದ್ದಾರೆ. ಗಡಿಯುದ್ದಕ್ಕೂ ಕೊಲೆಗಳನ್ನು ಮಾಡುತ್ತಿದ್ದಾರೆ.

ಗಡಿಯುದ್ದಕ್ಕೂ ಮಹಿಳೆಯರ ಮೇಲೆ ಬಿಎಸ್‌ಎಫ್‌ ದೌರ್ಜನ್ಯ ಎಸಗುತ್ತಿದೆ. ಈ ಕುರಿತು ಕೇಂದ್ರಕ್ಕೆ ನಿರಂತರವಾಗಿ ದೂರು ನೀಡಲಾಗಿದೆ. ಆದರೂ ಕ್ರಮ ಕೈಗೊಂಡಿಲ್ಲ. ರಾಜ್ಯಕ್ಕೆ ಸೌಕರ್ಯಗಳನ್ನು ನೀಡದಿದ್ದಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಅದರ ಪ್ರತಿಯನ್ನು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net