ಅವನನ್ನು ಏಕೆ ಆಡಿಸಲಿಲ್ಲ....? ಐರ್ಲೆಂಡ್ ಎದುರು ಟೀ ಇಂಡಿಯಾಗೆ ಹೀನಾಯ ಸೋಲು; ವಂಡರ್ ಕಿಡ್ ಪರ ಬ್ಯಾಟ್ ಬೀಸಿದ ರಿತೇಶ್ ದೇಶ್ಮುಖ್! Riteish Deshmukh on Vaibhav Suryavanshi
ಯುವ ಆಟಗಾರ ವೈಭವ್ ಸೂರ್ಯವಂಶಿ ಪರ ಧ್ವನಿ ಎತ್ತಿದ ರಿತೇಶ್ ದೇಶ್ಮುಖ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಐರ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಕ್ಲೀನ್ ಸ್ವೀಪ್ ಮುಖಭಂಗ!
ಯುವ ಆಟಗಾರ ವೈಭವ್ ಸೂರ್ಯವಂಶಿ ಪರ ಧ್ವನಿ ಎತ್ತಿದ ರಿತೇಶ್ ದೇಶ್ಮುಖ್
ಈ ಭಾರಿಯ ಐಪಿಎಲ್ನಲ್ಲಿ ತನ್ನ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಆಟಗಾರ ಎಂದರೆ ಅದು ವೈಭವ್ ಸೂರ್ಯವಂಶಿ. ಈ ಕಾರಣದಿಂದಲೇ ಇತನನ್ನು ಐರ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ನಡೆದ ಎರಡೂ ಪಂದ್ಯಗಳಲ್ಲಿ ವೈಭವ್ನನ್ನು ತಂಡಕ್ಕೆ ಸೇರಿಸಿಕೊಳ್ಳದಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ರಿತೇಶ್ ದೇಶ್ಮುಖ್, ವೈಭವ್ ಸೂರ್ಯವಂಶಿಯನ್ನು ಆದಷ್ಟು ಬೇಗ ಮೈದಾನಕ್ಕಿಳಿಸಿ, ನೀವು ಯಾವುದಕ್ಕಾಗಿ ಕಾಯುತ್ತಿದ್ದಿರಿ? ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಯುವ ಆಟಗಾರನ ಪರ ಬಾಲಿವುಡ್ ನಟ ಧ್ವನಿ ಎತ್ತಿದ್ದಕಾಗಿ ಜನ ಫುಲ್ ಖುಷ್ ಆಗಿದ್ದಾರೆ.
ಐರ್ಲೆಂಡ್ ವಿರುದ್ಧ ಭಾರತಕ್ಕೆ ಮುಖಭಂಗ!
ಜೂನ್ 26 ರಂದು ನಡೆದ ಮೊದಲ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ 20 ಓವರ್ಗಳಲ್ಲಿ 184 ರನ್ಗಳನ್ನು ಗಳಿಸಿತು. ಈ ದೊಡ್ಡ ಟಾರ್ಗೆಟ್ನ್ನು ಬೆನ್ನತ್ತಿದ್ದ ಭಾರತದ ಬ್ಯಾಟಿಂಗ್ ವಿಭಾಗ ಸಂಪೂರ್ಣ ವಿಫಲವಾದ ಹಿನ್ನಲೆ 18.5 ಓವರ್ಗಳಲ್ಲಿ 148 ರನ್ಗಳಿಸಿ ಆಲ್ಔಟ್ ಆಗಿತು. ಈ ಮೂಲಕ ಮೊದಲ ಪಂದ್ಯದಲ್ಲಿ ಐರ್ಲೆಂಡ್ 34 ರನ್ಗಳ ಭರ್ಜರಿ ಗೆಲುವನ್ನು ಸಾಧಿಸಿತು.
ಭಾನುವಾರ (ಜೂ.28) ನಡೆದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಕೇವಲ 1 ರನ್ನಿಂದ ಪರಾಜಿತಗೊಂಡಿತು. ಟಾಸ್ ಸೊತು ಬ್ಯಾಟಿಂಗ್ ಆರಂಭಿಸಿದ ಐರ್ಲೆಂಡ್ ತಂಡ 20 ಓವರ್ಗಳಲ್ಲಿ 154 ರನ್ ಗಳಿಸಿತು.
155 ರನ್ನ್ನು ಬೆನ್ನತ್ತಿದ್ದ ಭಾರತ ತಂಡದ ಬ್ಯಾಟರ್ಗಳು ನಿರಾಶಾದಾಯಕ ಪ್ರದರ್ಶನ ನೀಡಿದರು. ತಿಲಕ್ ವರ್ಮಾ ಬ್ಯಾಟ್ನಿಂದ ಅರ್ಧ ಶತಕ ಬಂದಿದ್ದು ಬಿಟ್ಟರೆ ಮತ್ತ್ಯಾರು ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಪಂದ್ಯದ ಕೊನೆಯಲ್ಲಿ ಹರ್ಷಿತ್ ರಾಣಾ ಪ್ರಯತ್ನ ತಂಡವನ್ನು ಗೆಲ್ಲಿಸಲಿಲ್ಲ. ಹೀಗಾಗಿ ಭಾರತ ಈ ಪಂದ್ಯವನ್ನೂ ಸಹ ಸೋಲುವುದರೊಂದಿಗೆ ಸರಿಣಿಯಲ್ಲಿ ಕ್ಲೀನ್ ಸ್ವೀಪ್ ಮೂಲಕ ಪರಾಜಿಗಗೊಂಡಿದೆ, (ಏಜನ್ಸೀಸ್).