ನಿಮ್ಮಲ್ಲಿ ಇಂತಹ ಅಸಭ್ಯ ರೀತಿಯ ಬ್ಯಾಕ್‌ಶಾಟ್‌ಗಳನ್ನು ತಗೆಯುವವರು ಯಾರು? ಯಾರು ಆ ಕೆಲಸ ಮಾಡ್ತಿರೋದು? ಮೊದಲು ಇದನ್ನೆಲ್ಲಾ ಬಂದ್ ಮಾಡಿ!" ಎಂದು ಗರಂ ಆಗಿ ಕೇಳಿದ್ದಾರೆ. ಅಷ್ಟಕ್ಕೇ ನಿಲ್ಲಿಸದ ನಟಿ, ನನ್ನದಷ್ಟೇ ಅಲ್ಲ, ಬೇರೆ ಯಾವುದೇ ನಟಿಯರದ್ದೂ ಈ ತರಹ ವಿಡಿಯೋ ಮಾಡಬೇಡಿ. ಬ್ಯಾಗ್ ಹಿಡಿದುಕೊಂಡು, ಬುಕ್ ಹಿಡಿದುಕೊಂಡು, ರಿವರ್ಸ್ ವಾಕಿಂಗ್ ಮಾಡ್ತಾ ವಿಡಿಯೋ ತೆಗೆಯಬೇಡಿ ಅಂತ ಹೇಳಿ ಹೇಳಿ ಸಾಕಾಗಿದೆ. ಇನ್ಮೇಲೆ ಇದೆಲ್ಲಾ ನಡೆಯಲ್ಲ, ನಿಲ್ಲಿಸಿಬಿಡಿ ಎಂದು ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ.