ನಿವೃತ್ತಿ ದಿನವೇ ಐಎಎಸ್ ಅಧಿಕಾರಿಗೆ ಬಿಗ್ ಶಾಕ್: 169 ಕೋಟಿ ಹಗರಣದಲ್ಲಿ ಪ್ರದೀಪ್ ಕುಮಾರ್ ಸಿಬಿಐ ವಶಕ್ಕೆ! Pradeep Kumar IAS Arrest
ಐಎಎಸ್ ಅಧಿಕಾರಿ ಬಿ. ಪ್ರದೀಪ್ ಕುಮಾರ್‌ಗೆ ಸಿಬಿಐ ಶಾಕ್!
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಐಎಎಸ್ ಅಧಿಕಾರಿ ಬಿ. ಪ್ರದೀಪ್ ಕುಮಾರ್‌ಗೆ ಸಿಬಿಐ ಶಾಕ್!
169 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧಿಕಾರಿಯನ್ನು ವಶಕ್ಕೆ ಪಡೆದ ಸಿಬಿಐ
ನಿವೃತ್ತಿ ದಿನವೇ ಪ್ರದೀಪ್ ಕುಮಾರ್ ಅರೆಸ್ಟ್
ಹರಿಯಾಣ: ಹರಿಯಾಣ ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸೆಕ್ರೆಟರಿ ಹುದ್ದೆಯಿಂದ ನಿವೃತ್ತಿಯಾದ ದಿನವೇ ಸುಮಾರು 169 ಕೋಟಿ ಬ್ರಷ್ಟಾಚಾರ ಆರೋಪದಲ್ಲಿ ಪ್ರದೀಪ್ ಕುಮಾರ್ (Pradeep Kumar IAS Arrest) ಎಂಬ ಐಎಎಸ್ ಅಧಿಕಾರಿಯನ್ನು ಸಿಬಿಐ ಬಂಧಿಸಿರುವ ಘಟನೆ ವರದಿಯಾಗಿದೆ.
ಸರ್ಕಾರದ ಅನುದಾನದ ಹಣವನ್ನು ಐಡಿಎಫ್ಸಿ ಬ್ಯಾಂಕ್ನಲ್ಲಿ ಫಿಕ್ಸ್ಡ್ ಡಿಪಾಸಿಟ್ ಇಟ್ಟ ಆರೋಪದಲ್ಲಿ ಪ್ರದೀಪ್ ಕುಮಾರ್ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಸಿಬಿಐ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಹರಿಯಾಣ ಸರ್ಕಾರದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಬಿಡುಗಡೆಯಾಗಿದ್ದ ಹಣವನ್ನು ಪ್ರದೀಪ್ ಕುಮಾರ್ ನಕಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹೆಸರಿನಲ್ಲಿ ಸುಮಾರು 169 ಕೋಟಿ ರೂಪಾಯಿಗಳನ್ನು ಎಫ್ಡಿ ಇಟ್ಟಿರುವುದು ತಿಳಿದು ಬಂದಿದೆ.
2011 ರ ಬ್ಯಾಚ್ನ ರಾಜ್ಯ ಸರ್ಕಾರದ ಅಧಿಕಾರಿಯಾಗಿದ್ದ ಪ್ರದೀಪ್ ಕುಮಾರ್ನನ್ನು ನಂತರ ಐಎಎಸ್ ಶ್ರೇಣಿಗೆ ಭಡ್ತಿ ನೀಡಲಾಗಿತ್ತು. ಯಾವಾಗ ಮಾಲಿನ್ಯ ನಿಯಂತ್ರಣ ಮಂಡಳಿಯ ಸೆಕ್ರೆಟರಿ ಆದರೋ ಅಂದಿನಿಂದ ಇಲಾಖೆಯಲ್ಲಿ ಬ್ರಷ್ಟಾಚಾರ ಪ್ರಾರಂಭವಾಯಿತು ಎಂದು ಹೇಳಲಾಗಿದೆ.
ಜೂನ್ 30, 2026 ರಂದು ಪ್ರದೀಪ್ ಕುಮಾರ್ ಸೇವೆಯಿಂದ ನಿವೃತ್ತರಾದ ದಿನವೇ ಸಿಬಿಐ ಇವರನ್ನು ಬಂಧಿಸಿದ್ದು, ಸದ್ಯ ಕಸ್ಟಡಿಯಲ್ಲಿ ವಿಚಾರಣೆ ಮುಂದುವರಿಸಿದೆ ಎಂದು ತಿಳಿದುಬಂದಿದೆ, (ಏಜನ್ಸೀಸ್).