ಪುರುಷರನ್ನು ಕೊಲ್ಲುವುದು ಹೇಗೆ? ಮೆಟ್ರೋನಲ್ಲಿ ಪುಸ್ತಕ ಓದುತ್ತಿರುವ ಯುವತಿ; ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್! How To Kill Men Viral Video
ಮೆಟ್ರೋ ರೈಲಿನಲ್ಲಿ 'How to Kill Man' (ಪುರುಷರನ್ನು ಕೊಲ್ಲುವುದು ಹೇಗೆ?) ಎಂಬ ಪುಸ್ತಕ ಓದಿದ ಯುವತಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮೆಟ್ರೋ ರೈಲಿನಲ್ಲಿ 'How to Kill Man' (ಪುರುಷರನ್ನು ಕೊಲ್ಲುವುದು ಹೇಗೆ?) ಎಂಬ ಪುಸ್ತಕ ಓದಿದ ಯುವತಿ
ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ವೈರಲ್ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು
ವೈರಲ್: ಒಂದು ಕಡೆ ಪುಣೆಯ ಯುವ ಉದ್ಯಮಿ ಕೇತನ್ ಅಗರ್ವಾಲ್ ಪ್ರಕರಣ ದೇಶದೆಲ್ಲಡೆ ಸದ್ದು ಮಾಡುತ್ತಿದ್ದರೆ ಇನ್ನೊಂದು ಕಡೆ ಪುರುಷರನ್ನು ಹೇಗೆ ಕೊಲ್ಲುವುದು (How to Kill Men) ಎಂಬ ಪುಸ್ತಕ ಓದುತ್ತಿರುವ ಮಹಿಳೆ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ (How To Kill Men Viral Video) ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ಮೆಟ್ರೋನಲ್ಲಿ ಸಂಚರಿಸುತ್ತಿರುವ ಯುವತಿಯೊಬ್ಬಳು ಪುರುಷರನ್ನು ಹೇಗೆ ಕೊಲ್ಲುವುದು (How to Kill Men) ಎಂಬ ತಲೆಬಹರವಿರುವ ಪುಸ್ತಕವನ್ನು ಓದುತ್ತಿರುವ ವಿಡಿಯೋ ಈಗ ಎಲ್ಲಡೆ ವೈರಲ್ ಆಗುತ್ತಿದೆ.
ಆದರೆ ಈ ವಿಡಿಯೋವನ್ನು ಯಾವ ಮೆಟ್ರೋವಿನಲ್ಲಿ? ಯಾವ ನಗರದಲ್ಲಿ? ಮತ್ತು ಯಾವ ಸಮಯದಲ್ಲಿ ಸೆರೆಹಿಡಿದಿದ್ದು ಎನ್ನುವುದು ತಿಳಿದುಬಂದಿಲ್ಲ.
ಹಾಗೆಯೇ ಪುಸ್ತಕವನ್ನು ಕೇವಲ ತಲೆಬರಹದ ಆಧಾರಲ್ಲಿ ತೀರ್ಮಾನಿಸುವುದು ತಪ್ಪಾಗುತ್ತದೆ. ಕೆಲವೊಮ್ಮೆ ಪತ್ತೇದಾರಿ ಕಾದಂಬರಿಗಳಿಗೆ ಈ ರೀತಿಯ ಆಕರ್ಷಕ ಹೆಸರನ್ನು ನೀಡುವ ಕಾರಣ ಈ ಪುಸ್ತಕ ಪುರುಷ ಸಂಕುಲ ನಾಶದ ಹುನ್ನಾರ ಎಂದು ಭಾವಿಸುವುದು ತಪ್ಪಾಗುತ್ತದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಿವಿ ಮತ್ತು ಕೈ ನೆಟ್ಟಗಾಗಿ ಬಿಟ್ಟಿದೆ. ಅಯ್ಯೋ.. ಗಂಡಸರನ್ನು ಹೇಗೆ ಕೊಲ್ಲಬೇಕು ಎನ್ನುವ ಪುಸ್ತಕ ಕೂಡ ಬಿಡುಗಡೆಯಾಗಿದೆಯೇ? ಎಂದು ಒಬ್ಬ ಬಳಕೆದಾರ ಪ್ರಶ್ನಿಸಿದ್ದಾರೆ.
ಆಕೆಯ ಗಂಡನ ಪರಿಚಯವಿದ್ದವರು ದಯಮಾಡಿ ಒಂದು ಎಚ್ಚರಿಕೆ ನೀಡಿಬಿಡಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಪುಸ್ತಕ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲೆಂದು ಈ ರೀತಿಯ ತಲೆಬರಹವನ್ನು ನೀಡಿರುತ್ತಾರೆ, ಯಾರು ಹೆದರುವ ಅಗತ್ಯವಿಲ್ಲ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, (ಏಜನ್ಸೀಸ್).