'ಟಾಕ್ಸಿಕ್' ಹೊಸ ಟೀಸರ್ ಔಟ್: ಲೇಡಿ ಸೂಪರ್ ಸ್ಟಾರ್ಸ್ ಪವರ್ಫುಲ್ ಪರಿಚಯ; ರಗಡ್ ಲುಕ್ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ರಾಯಾ! Toxic New Teaser
'ಟಾಕ್ಸಿಕ್' ಸಿನಿಮಾದ ಹೊಸ ಟೀಸರ್ ಬಿಡುಗಡೆ!
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
'ಟಾಕ್ಸಿಕ್' ಸಿನಿಮಾದ ಹೊಸ ಟೀಸರ್ ಬಿಡುಗಡೆ!
ಸಿನಿಮಾದ ಮಹಿಳಾ ಪಾತ್ರಧಾರಿಗಳ ಪರಿಚಯ
ನಯನತಾರಾ, ಕಿಯಾರಾ, ಹುಮಾ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಖಡಕ್ ಎಂಟ್ರಿ
ರಗಡ್ ಲುಕ್ನಲ್ಲಿ ರಾಕಿಂಗ್ ಸ್ಟಾರ್ ರಾಯ
ಟಾಕ್ಸಿಕ್: ಸದ್ಯ ಸಿನಿ ಪ್ರೇಕ್ಷಕರು ದೇಶದಾದ್ಯಂತ ಬಹಳ ಕಾತುರದಿಂದ ಕಾಯುತ್ತಿರುವ ಸಿನಿಮಾ ಯಾವುದೆಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ಅಪ್ಸ್ ಎಂದರೆ ತಪ್ಪಾಗದು. ಬುಧವಾರ (ಜು.1) ಈ ಸಿನಿಮಾದ ಇನ್ನೊಂದು ಟೀಸರ್ (Toxic New Teaser) ಬಿಡುಗಡೆಯಾಗಿದ್ದು, ಇದರಲ್ಲಿ ಚಿತ್ರದಲ್ಲಿರುವ ಮಹಿಳಾ ಪಾತ್ರಧಾರಿಗಳನ್ನು ಪ್ರೇಕ್ಷಕರಿಗೆ ಪರಿಚಯಿಸಲಾಗಿದೆ.
ಕೆವಿಎನ್ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಮಹಿಳಾ ಪಾತ್ರಧಾರಿಗಳ ದಂಡೆ ಇದೆ ಎಂದರು ಸುಳ್ಳಾಗದು. ಸಿನಿಮಾ ತಂಡ ಬಿಡುಗಡೆ ಮಾಡಿರುವ ಟೀಸರ್ನಲ್ಲಿ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಯನತಾರಾ, ಬಾಲಿವುಡ್ನ ಕಿಯಾರಾ ಅಡ್ವಾನಿ, ಹುಮಾ ಖುರೇಶಿ ಮತ್ತು ತಾರಾ ಸುತಾರಿಯಾ ಹಾಗೂ ಕಾಂತಾರ ಖ್ಯಾತಿಯ ಕನ್ನಡತಿ ರುಕ್ಮಿಣಿ ವಸಂತ್ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಗಡ್ ಲುಕ್ನಲ್ಲಿ ರಾಯಾ!
ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್, ರಾಯಾ ಮತ್ತು ಟಿಕೆಟ್ ಎಂಬ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗ ಬಿಡುಗಡೆಯಾಗಿರುವ ಟೀಸರ್ನಲ್ಲಿ ರಗಡ್ ಲುಕ್ನಲ್ಲಿ ಯಶ್ ಮಿಂಚಿದ್ದಾರೆ. ಆದರೆ ಟೀಸರ್ನಲ್ಲಿ ನೋಡಿರುವು ರಾಯನ ಪಾತ್ರವೋ? ಅಥವಾ ಟಿಕೆಟ್ ಪಾತ್ರವೋ? ಎನ್ನುವುದು ಸಿನಿಮಾ ಮಂದಿರದಲ್ಲಿಯೇ ತಿಳಿಯ ಬೇಕಾಗಿದೆ.
ಟೀಸರ್ಗೂ ಮುನ್ನ ತೋರಿಸಿರುವ ಡಿಸ್ಕ್ಲೈಮರ್ನಲ್ಲಿ ಮಕ್ಕಳು ಇದರಿಂದ ದೂರವಿರಿ, ಪಾಲಕರು ತಮ್ಮ ಮಕ್ಕಳುನ್ನು ದೂರವಿರುವಂತೆ ನೋಡಿಕೊಳ್ಳಿ. ತಾತಂದಿರೂ ನಿಮ್ಮ ಮಕ್ಕಳು ಹಾಗೂ ಅವರ ಮಕ್ಕಳು ದೂರವಿರುವಂತೆ ನೋಡಿಕೊಳ್ಳಿ. ಅಂತೆಯೇ ಮುತ್ತಾತಗಳು ನಮ್ಮ ಸ್ವಂತ ಅಪಾಯದಲ್ಲಿ ಇದನ್ನು ವೀಕ್ಷಿಸಿ ಎಂದು ಬರೆಯಲಾಗಿದೆ.
ನೆಟ್ಟಿಗರಿಂದ ಭರಪೂರ ಮೆಚ್ಚುಗೆ
ಈ ಟೀಸರ್ ಬಿಡುಗಡೆ ಕಾಣುತ್ತಿದ್ದಂತೆ ನೆಟ್ಟಿಗರಲ್ಲಿ ಸಂಭ್ರಮ ಮನೆಮಾಡಿದೆ. ಅಂತೂ ಸಿನಿಮಾದ ಇನ್ನೊಂದು ಟೀಸರ್ ಹೊರಬಂದಿದೆ. ನಾಯಕ ನಟಿಯರನ್ನು ಕೇವಲ ಶೋ ಪೀಸ್ ರೀತಿ ತೋರಿಸುವ ಬದಲು ಪ್ರತಿ ಪಾತ್ರಕ್ಕೂ ಅದರದೇ ಆದ ಮಹತ್ವವಿದ್ದಂತೆ ಕಾಣುತ್ತಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈ ಸಿನಿಮಾವನ್ನು ಗೀತು ಮೋಹನ್ದಾಸ್ ನಿರ್ದೇಶಿಸಿದ್ದು, ಟಾಕ್ಸಿಕ್ ಸಿನಿಮಾ ಇದೇ ವರ್ಷ ಆಗಸ್ಟ್ 26 ರಂದು ಕನ್ನಡ, ಹಿಂದಿ ತೆಲುಗು, ತಮಿಳು, ಮಳಿಯಾಳಂ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ, (ಏಜನ್ಸೀಸ್).