ಅವಳು ವಾರಗಟ್ಟಲೆ ಅವನ ಮನೆಯಲ್ಲಿಯೇ ಇರುತ್ತಿದ್ದಳು: ಶ್ವೇತಾ ತಿವಾರಿಗೆ ಎಲ್ಲರೊಂದಿಗೆ ಸಂಬಂಧವಿತ್ತು; ನಟಿ ವಿರುದ್ಧ ಮಾಜಿ ಪತಿ ಗಂಭೀರ ಆರೋಪ! Raja Chaudhary on Shweta Tiwari

ಶ್ವೇತಾ ತಿವಾರಿಗೆ ಎಲ್ಲರ ಜೊತೆ ಸಂಬಂಧವಿತ್ತು: ಮಾಜಿ ಪತಿ ವಿವಾದಾತ್ಮಕ ಆರೋಪ
ಶ್ವೇತಾ ತಿವಾರಿಗೆ ಎಲ್ಲರ ಜೊತೆ ಸಂಬಂಧವಿತ್ತು: ಮಾಜಿ ಪತಿ ವಿವಾದಾತ್ಮಕ ಆರೋಪ
Published on

ಪ್ರಮುಖ ಮುಖ್ಯಾಂಶಗಳು

  • ಖ್ಯಾತ ಕಿರುತೆರೆ ಹಾಗೂ ಬಾಲಿವುಡ್​ ನಟಿ ಶ್ವೇತಾ ತಿವಾರಿ
  • ಶ್ವೇತಾ ತಿವಾರಿಗೆ ಎಲ್ಲರ ಜೊತೆ ಸಂಬಂಧವಿತ್ತು: ಮಾಜಿ ಪತಿ ವಿವಾದಾತ್ಮಕ ಆರೋಪ
  • ಮಾಜಿ ಪತ್ನಿ ವಿರುದ್ಧ ನಾಲಿಗೆ ಹರಿಬಿಟ್ಟ ರಾಜಾ ಚೌಧರಿ
ಮುಂಬೈ: ಬಾಲಿವುಡ್​ ಹಾಗೂ ಕಿರುತೆರೆಯ ಖ್ಯಾತ ನಟಿಯರಲ್ಲಿ ಶ್ವೇತಾ ತಿವಾರಿ ಕೂಡ ಒಬ್ಬರು. ವಯಸ್ಸು 40 ದಾಟಿದರೂ ಈಗಲೂ ಇಪ್ಪತ್ತರ ಹರೆಯದವರಂತೆ ಕಾಣುವ ಅವರ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಶ್ವೇತಾ ಅವರಿಗೆ 20 ವರ್ಷದ ಒಬ್ಬಳು ಮಗಳಿದ್ದಾರೆ ಎಂದರೆ ನಂಬಲು ಸ್ಪಲ್ಪ ಕಷ್ಟವಾದರೂ ಸತ್ಯವಾಗಿದೆ.
ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಯಶಸ್ಸನ್ನು ಕಂಡಿದ್ದರೂ ಶ್ವೇತಾ, ತಮ್ಮ ವೈಯಕ್ತಿಕ ಅದರಲ್ಲೂ ವೈವಾಹಿಕ ಜೀವನದಲ್ಲಿ ಸದಾ ವಿವಾದದ ಮೂಲಕ ಸುದ್ದಿಯಲ್ಲಿದರೇ ಹೊರತು ಒಳ್ಳೆಯ ವಿಚಾರದಿಂದ ಖ್ಯಾತಿಗೆ ಬಂದಿದ್ದು ಕಮ್ಮಿಯೇ.
ಈಗ ಶ್ವೇತಾ ಅವರ, ವೈವಾಹಿಕ ಜೀವನದ ಚರ್ಚೆ ಮತ್ತೊಮ್ಮೆ ಪ್ರಾರಂಭವಾಗಿದ್ದು, ಶ್ವೇತಾ ತಿವಾರಿ ಮಾಜಿ ಪತಿ ರಾಜಾ ಚೌಧರಿ (Raja Chaudhary on Shweta Tiwari), ಮಾಜಿ ಪತ್ನಿ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ಅವಳಿಗೆ ಎಲ್ಲರ ಜೊತೆಗೂ ಸಂಬಂಧವಿತ್ತು!

ಇತ್ತೀಚೆಗೆ ಯೂಟ್ಯೂಬ್​ ಚಾನೆಲ್​ವೊಂದಕ್ಕೆ ನೀಡದ್ದ ಸಂದರ್ಶನಲ್ಲಿ ಮಾತನಾಡಿದ ರಾಜಾ ಚೌಧರಿಗೆ, ತಮ್ಮ ಮಾಜಿ ಪತ್ನಿ ಶ್ವೇತಾ ತಿವಾರಿ ಬಗ್ಗೆ ಪ್ರಶ್ನೆ ಕೇಳಿದಾಗ, ಅವಳಿಗೆ ಕೇವಲ ಸೆಜಾನ್ನೆ ಖಾನ್ (Cezanne Khan) ಜೊತೆ ಮಾತ್ರವಲ್ಲ, ನನ್ನ ಪ್ರಕಾರ ಎಲ್ಲರ ಜೊತೆಗೂ ಅಕ್ರಮ ಸಂಬಂಧ ಹೊಂದಿದ್ದಳೆಂದು ಆರೋಪಿದ್ದಾರೆ.
ಕೂಡನೇ ಈ ಮಾತನ್ನು ತಡೆದ ಸಂದರ್ಶಕ, ನೀವು ಹೀಗೆ ಊಹೆ ಆಧಾರದಲ್ಲಿ ತೆಜೋವಧೆ ಮಾಡುವುದು ಸರಿಯಲ್ಲ ಎಂದಾಗ, ನನಗೆ, ಆಕೆಯ ಸ್ನೇಹಿತನೇ ಇದರ ಬಗ್ಗೆ ಹೇಳಿದ್ದಾನೆ. ಅವಳು ಸೆಜಾನ್ನೆ ಖಾನ್ ಮನೆಯಲ್ಲಿ ವಾರಗಟ್ಟಲೆ ಇರುತ್ತಿದ್ದಳೆಂದರೆ, ನಾನು ಇದನ್ನು ಹೇಗೆ ನೋಡಬೇಕು? ಎಂದು ರಾಜಾ ಆಕ್ರೋಶ ಹೊರಹಾಕಿದ್ದಾರೆ.
ಒಂದು ದಿನ ನಾನು ಸೆಜಾನ್ನೆ ಖಾನ್ (Cezanne Khan) ಗೆ ಕರೆ ಮಾಡಿ, ನೀನು ಯಾಕೆ ನನ್ನ ಸಂಸಾರವನ್ನು ಹಾಳು ಮಾಡುತ್ತಿದ್ದಿಯಾ? ಎಂದು ಕೇಳಿದ್ದೆ, ಅದಕ್ಕೆ ಅವನು, ಹೌದು ನನಗೆ ಶ್ವೇತಾ ಜೊತೆ ಸಂಬಂಧವಿರುವುದು ನಿಜ, ನಿನೇನು ಮಾಡ್ತಿಯಾ? ನಿನಗೆ ಧೈರ್ಯವಿದ್ದರೆ ಕೋಳಿವಾಡದಲ್ಲಿವರುವ ನನ್ನ ಮನೆಗೆ ಬಾ ಎಂದು ಧಮ್ಕಿ ಹಾಕಿದ್ದ.
ಆದರೂ ಅವನಿಗೆ ಇನ್ನೊಮ್ಮೆ ನೀನು ಮಾಡುತ್ತಿರುವುದು ಸರಿಯಲ್ಲ ಎಂದಾಗ, ನನ್ನ ಕುಟುಂಬದ ವಿಷಯಕ್ಕೆ ಬರಬೇಡ ಎಂದಾಗ, ಯಾವ ಕುಟುಂಬ? ಯಾವ ಸಂಸಾರ? ಅವಳಿಗೆ ನಿನ್ನ ಜೊತೆಗೆ ಬದುಕಲು ಇಷ್ಟವೇ ಇಲ್ಲ, ನೀವು ಕೇವಲ ಅವಳ ಸಂಬಳ ಪಡೆಯುವ ಮಗ ಅಷ್ಟೇ ಎಂದಿದ್ದರಂತೆ.
2012 ರಲ್ಲಿ ಬೇರ್ಪಟ್ಟ ಜೋಡಿ!
ರಾಜಾ ಚೌಧರಿ ಹಾಗೂ ಶ್ವೇತಾ ತಿವಾರಿ ಧಾರಾವಾಹಿ ಒಂದರಲ್ಲಿ ಪರಿಚಯವಾಗಿ, ನಂತರ ಪ್ರೀತಿಸಿ ಇಬ್ಬರು 1998 ರಲ್ಲಿ ಮದುವೆಯಾಗಿದ್ದು, 2000 ರಲ್ಲಿನ ಪಲಕ್​ ತಿವಾರಿ ಎಂಬ ಮಗಳನ್ನು ಪಡೆದಿದ್ದರು. ಆದರೆ ಕೆಲ ವರ್ಷಗಳ ನಂತರ ಶ್ವೇತಾ, ರಾಜಾ ಅತೀಯಾಗಿ ಕುಡಿಯುತ್ತಾನೆ, ಕುಡಿದು ತನ್ನ ಮೇಲೆ ಹಲ್ಲೆ ಮಾಡುತ್ತಾನೆಂದು ಕೌಟುಂಬಿಕ ಹಲ್ಲೆ ಆರೋಪವನ್ನು ಮಾಡಿದ್ದಳು. 2007 ರಲ್ಲಿಯೇ ದೂರವಾದ ಈ ಜೋಡಿ, ಕಾನೂನಾತ್ಮಕವಾಗಿ 2012 ರಲ್ಲಿ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net