ಭಯೋತ್ಪಾದಕರಿಗೆ ಟೆಲಿಗ್ರಾಮ್​ ಬೆಂಬಲ?​ ಸ್ಥಾಪಕ ಪಾವೆಲ್ ಡುರೊವ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ರಷ್ಯಾ ಸರ್ಕಾರ! Russia Action against Pavel Durov

ಸಂಸ್ಥೆಯ ಸ್ಥಾಪಕ ಪಾವೆಲ್ ಡುರೊವ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ರಷ್ಯಾ ಸರ್ಕಾರ
ಸಂಸ್ಥೆಯ ಸ್ಥಾಪಕ ಪಾವೆಲ್ ಡುರೊವ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ರಷ್ಯಾ ಸರ್ಕಾರ
Published on

ಪ್ರಮುಖ ಮುಖ್ಯಾಂಶಗಳು

  • ಭಯೋತ್ಪಾದಕ ಚಟುವಟಿಕೆಗಳಿಗೆ ಟೆಲಿಗ್ರಾಮ್ ಅಪ್ಲಿಕೇಶನ್ ಬೆಂಬಲ
  • ಸಂಸ್ಥೆಯ ಸ್ಥಾಪಕ ಪಾವೆಲ್ ಡುರೊವ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ರಷ್ಯಾ ಸರ್ಕಾರ
  • ರಷ್ಯಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಲ್ಲ ಎಂದಿದ್ದ ಪಾವೆಲ್ ಡುರೊವ್
ಮಾಸ್ಕೋ: ರಾಷ್ಟ್ರ ವಿರೋಧಿ ಚಟುವಟಿಕೆ, ಭಯೋತ್ಪಾದಕರೊಂದಿಗೆ ಸಂಪರ್ಕ ಹಾಗೂ ತಮ್ಮ ಅಪ್ಲಿಕೇಶನ್​ ಮೂಲಕ ಭಯೋತ್ಪಾದನೆಗೆ ಉತ್ತೇಜನ ನೀಡಿರುವ ಆರೋಪದ ಹಿನ್ನಲೆಯಲ್ಲಿ ಟೆಲಿಗ್ರಾಮ್​ ಸ್ಥಾಪಕ ಪಾವೆಲ್ ಡುರೊವ್ (Pavel Durov) ನನ್ನು ಅಂತಾರಾಷ್ಟ್ರೀಯ ಮೋಸ್ಟ್​​​ ವಾಂಟೆಡ್​ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ರಷ್ಯನ್​ (Russia Action against Pavel Durov) ಮಾಧ್ಯಮಗಳು ವರದಿಮಾಡಿವೆ.
ರಷ್ಯಾದ ಫೆಡೆರಲ್​ ಸೆಕ್ಯುರಿಟಿ ಸವೀರ್ಸಸ್​​ ತಿಳಿಸಿರುವಂತೆ, ಪಾವೆಲ್ ಡುರೊವ್ ನಿರ್ಮಿಸಿರುವ ಟೆಲಿಗ್ರಾಮ್​ನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗುತ್ತಿದ್ದು, ರಷ್ಯಾ ದೇಶದ ಕಾನೂನನ್ನು ಪಾಲಿಸುವುದರಲ್ಲಿ ಟೆಲಿಗ್ರಾಮ್​ ವಿಫಲವಾಗಿದೆ. ಹೀಗಾಗಿ ಡುರೊವ್​ ಮೇಲೆ ಅತ್ಯಂತ ಕಠಿಣ ಕ್ರಮಕ್ಕೆ ಮುಂದಾಗಿದ್ದೆವೆಂದು ಹೇಳಿದೆ.
ಈ ಟೆಲಿಗ್ರಾಮ್​ ಸ್ಥಾಪಕ ಪಾವೆಲ್ ಡುರೊವ್ ಕೂಡ ಜನ್ಮತಃ ರಷ್ಯನ್​ ಆಗಿದ್ದು, ತದ ನಂತರ ಬೇರೊಂದು ದೇಶದಲ್ಲಿ ವಾಸಿಸುತ್ತಿದ್ದಾನೆ. ಆದರೆ ಈ ಮೊದಲು ಕೂಡ ಇತನ ವಿರುದ್ಧ ರಷ್ಯನ್​ ಸರ್ಕಾರ ಕೆಲ ಪ್ರಕರಣಗಳಲ್ಲಿ ವಿಚಾರಣೆ ನಡೆಸಿತ್ತು.

ಈ ಟೆಲಿಗ್ರಾಮ್​ಅನ್ನು ಉಕ್ರೇನಿಯನ್​ ಭಯೋತ್ಪಾದಕರು ಬಳಸುತ್ತಾರೆ!

ರಷ್ಯಾ ಹೇಳುವ ಪ್ರಕಾರ, ಈ ಟೆಲಿಗ್ರಾಮ್​ ಅನ್ನು ಉಕ್ರೇನಿನ ಗುಪ್ತಚರ ಇಲಾಖೆ ಹಾಗೂ ಅಲ್ಲಿನ ಉಗ್ರ ಸಂಘಟನೆಗಳು ಪರಸ್ಪರ ಸಂವಹನಕ್ಕಾಗಿ ಬಳಸುತ್ತಾರೆ. ಹೀಗಾಗಿ ಈ ಅಪ್ಲಿಕೇಶನ್​ ಅನ್ನು ಬಳಸುವ ರಷ್ಯನ್ನರ ಗೌಪ್ಯತೆ ತೊಂದರೆ ಉಂಟಾಗುತ್ತಿದೆ.
ಹೀಗಾಗಿ ಈ ಟೆಲಿಗ್ರಾಮ್​ನಲ್ಲಿರುವ ಅಂತಹ ಅಪಾಯಕಾರಿ ಚಾನೆಲ್​ಗಳನ್ನು, ಚಾಟ್​ಬಾಟ್​ಗಳನ್ನು ನಿಷ್ಕ್ರಿಯಗೊಳಿಸುವಂತೆ ಈಗಾಗಲೇ ಹೇಳಿಯಾಗಿದೆ. ಆದರೆ ನಮ್ಮ ಮಾತಿಗೆ ಸರಿಯಾಗಿ ಪ್ರತಿಕ್ರಿಯೆ ನೀಡದ ಹಿನ್ನಲೆ ಪಾವೆಲ್ ಡುರೊವ್ ನನ್ನು ಮೋಸ್ಟ್​​ ವಾಂಟೆಡ್​ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ರಷ್ಯಾ ಹೇಳುತ್ತಿದೆ.

ರಷ್ಯಾ ಅಭಿವ್ಯಕ್ತಿ ಸ್ವಾತಂತ್ರ ವಿರೋಧಿ!

ಕಳೆದ ವರ್ಷ ಇದೇ ರೀತಿಯ ಆರೋಪಗಳಿಗೆ ಗುರಿಯಾಗಿದ್ದ ಟೆಲಿಗ್ರಾಮ್​ ಸ್ಥಾಪಕ ಪಾವೆಲ್ ಡುರೊವ್, ವಿಚಾರಣೆ ನಂತರ ಮಾತನಾಡಿ, ರಷ್ಯಾಗೆ ಅಭಿವ್ಯಕ್ತಿ ಸ್ವಾತಂತ್ರ, ವಾಕ್​ ಸ್ವಾತಂತ್ಯದಲ್ಲಿ ವಿಶ್ವಾಸವಿಲ್ಲ. ನನ್ನ ಅಪ್ಲಿಕೇಶನ್​ನನ್ನು ಅತ್ಯಂತ ಸುರಕ್ಷಿತ ಹಾಗೂ ಗೌಪ್ಯತೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ.
ಇದರಲ್ಲಿ ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ದೊಡ್ಡ ಗುಂಪು ಕೂಡಯಿದೆ. ಇದು ಸರ್ಕಾರದ ತಪ್ಪು ನಿರ್ಧಾರಗಳನ್ನು ಈ ವೇದಿಕೆಗಳಲ್ಲಿ ಮುಕ್ತವಾಗಿ ಚರ್ಚಿಸುತ್ತದೆ. ಇದನ್ನು ಸಹಿಸದ ರಷ್ಯಾ ನನ್ನ ಮೇಲೆ ಕ್ರಮಕ್ಕೆ ಮುಂದಾಗಿದೆ ಎಂದು ಡುರೊವ್ ಆಕ್ರೋಶ ವ್ಯಕ್ತಪಡಿಸಿದ್ದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net