ಪ್ರಭಾಸ್​ ನಟನೆಯ ಆದಿಪುರುಷ್ ದಾಖಲೆ ಮುರಿಯುವಲ್ಲಿ ಫೇಲ್​ ಆದ ರಣಬೀರ್​, ಯಶ್​ ನಟನೆಯ ರಾಮಾಯಣ..! Ramayana

ರಾಕಿಂಗ್ ಸ್ಟಾರ್ ಯಶ್ ಅವರ ಉಪಸ್ಥಿತಿಯಿಂದಾಗಿ ಕನ್ನಡ ಆವೃತ್ತಿಯು ಎರಡನೇ ಅತಿ ಹೆಚ್ಚು ಅಂದರೆ 7.25 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಮನಸೆಳೆದಿದೆ. ಉಳಿದಂತೆ ತೆಲುಗು ಆವೃತ್ತಿ 6 ಕೋಟಿ, ತಮಿಳು ಆವೃತ್ತಿ 2.60 ಕೋಟಿ ಹಾಗೂ ಮಲಯಾಳಂ ಆವೃತ್ತಿಯು 1.50 ಕೋಟಿ ರೂಪಾಯಿ ನಿವ್ವಳ ಗಳಿಕೆ ಕಂಡಿದೆ.
Ramayana
ಪ್ರಭಾಸ್​ ನಟನೆಯ ಆದಿಪುರುಷ್ ದಾಖಲೆ ಮುರಿಯುವಲ್ಲಿ ಫೇಲ್​ ಆದ ರಣಬೀರ್​, ಯಶ್​ ನಟನೆಯ ರಾಮಾಯಣ..! Ramayana
Published on: 

ಮುಂಬೈ: ಸಿನಿಪ್ರಿಯರು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಪೌರಾಣಿಕ ಮಹಾಕಾವ್ಯ ಆಧಾರಿತ 'ರಾಮಾಯಣ: ಭಾಗ 1' ಸಿನಿಮಾ ( Ramayana ) ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿದೆ. ನವೆಂಬರ್​ 5ರಿಂದ ಬೆಳ್ಳಿಪರೆದೆಗೆ ಲಗ್ಗೆ ಇಟ್ಟಿರುವ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಬಾಲಿವುಡ್ ನಟ ರಣ್‌ಬೀರ್ ಕಪೂರ್, ಸ್ಯಾಂಡಲ್‌ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ಸಾಯಿ ಪಲ್ಲವಿ ಅಭಿನಯದ ಬಹುತಾರಾಗಣದ ಈ ಚಿತ್ರವು ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ಅದ್ಧೂರಿ ಆರಂಭ ಪಡೆದುಕೊಂಡಿದೆ. ಆದರೆ, ಬಜೆಟ್​ ತಕ್ಕಂತೆ ನಿರೀಕ್ಷಿತ ಗುರಿ ಮುಟ್ಟುವಲ್ಲಿ ಈ ಸಿನಿಮಾ ಭಾರಿ ಹಿನ್ನಡೆ ಅನುಭವಿಸಿದೆ.

ಚಿತ್ರರಂಗದ ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ಸಂಸ್ಥೆಗಳ ವರದಿಯ ಪ್ರಕಾರ, 'ರಾಮಾಯಣ: ಪಾರ್ಟ್ 1' ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಭಾರತದಲ್ಲಿ 64.85 ಕೋಟಿ ರೂಪಾಯಿ ನಿವ್ವಳ (Net Collection) ಗಳಿಕೆ ಮಾಡಿದೆ. ಇನ್ನು ಒಟ್ಟು ಗಳಿಕೆಯ (Gross Collection) ಲೆಕ್ಕಾಚಾರ ನೋಡುವುದಾದರೆ, ದೇಶಾದ್ಯಂತ ಐದು ಭಾಷೆಗಳಲ್ಲಿ 25,200 ಪ್ರದರ್ಶನಗಳಿಂದ ಒಟ್ಟು 77.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

Also Read
ರಾವಣನಾಗಿ ಯಶ್ ಅಬ್ಬರಿಸಿದರೂ ಕನ್ನಡದಲ್ಲಿ ಕಲೆಕ್ಷನ್ ಡಲ್!..ರಾಮಾಯಣದ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?Ramayana Day 1 Collection
Ramayana

ಭಾಷಾವಾರು ಗಳಿಕೆಯ ಲೆಕ್ಕಾಚಾರದಲ್ಲಿ ಹಿಂದಿ ಆವೃತ್ತಿಯು ಸಿಂಹಪಾಲು ಪಡೆದುಕೊಂಡಿದ್ದು, 47.50 ಕೋಟಿ ರೂಪಾಯಿ ಗಳಿಸಿದೆ. ವಿಶೇಷವೆಂದರೆ, ರಾಕಿಂಗ್ ಸ್ಟಾರ್ ಯಶ್ ಅವರ ಉಪಸ್ಥಿತಿಯಿಂದಾಗಿ ಕನ್ನಡ ಆವೃತ್ತಿಯು ಎರಡನೇ ಅತಿ ಹೆಚ್ಚು ಅಂದರೆ 7.25 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಗಮನಸೆಳೆದಿದೆ. ಉಳಿದಂತೆ ತೆಲುಗು ಆವೃತ್ತಿ 6 ಕೋಟಿ, ತಮಿಳು ಆವೃತ್ತಿ 2.60 ಕೋಟಿ ಹಾಗೂ ಮಲಯಾಳಂ ಆವೃತ್ತಿಯು 1.50 ಕೋಟಿ ರೂಪಾಯಿ ನಿವ್ವಳ ಗಳಿಕೆ ಕಂಡಿದೆ.

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿ ಭರ್ಜರಿ ಕಲೆಕ್ಷನ್ ಮಾಡಿದ್ದರೂ ಸಹ, ಪ್ರಭಾಸ್ ಅಭಿನಯದ 'ಆದಿಪುರುಷ್' ಚಿತ್ರದ ಮೊದಲ ದಿನದ ದಾಖಲೆಯನ್ನು ಮುರಿಯಲು 'ರಾಮಾಯಣ' ಚಿತ್ರಕ್ಕೆ ಸಾಧ್ಯವಾಗಿಲ್ಲ. 2023ರಲ್ಲಿ ಬಿಡುಗಡೆಯಾಗಿದ್ದ 'ಆದಿಪುರುಷ್' ಮೊದಲ ದಿನ ಭಾರತದಲ್ಲಿ 86.75 ಕೋಟಿ ರೂ. ನಿವ್ವಳ (103.08 ಕೋಟಿ ರೂ. ಗ್ರಾಸ್) ಗಳಿಸಿ ದಾಖಲೆ ಬರೆದಿತ್ತು. ಇದರೊಂದಿಗೆ 102.55 ಕೋಟಿ ರೂ. ಗಳಿಸಿದ್ದ ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದಿ ರಿವೇಂಜ್' ಹಾಗೂ 75 ಕೋಟಿ ರೂ. ಗಳಿಸಿದ್ದ ಶಾರುಖ್ ಖಾನ್ ಅವರ 'ಜವಾನ್' ಚಿತ್ರಗಳ ಬಿಡುಗಡೆಯ ದಿನದ ಗಳಿಕೆಗಿಂತಲೂ ರಾಮಾಯಣ ಸ್ವಲ್ಪ ಹಿನ್ನಡೆ ಅನುಭವಿಸಿದೆ.

ಚಿತ್ರಕ್ಕೆ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಸಿನಿಮಾದ ವೈಭವೋಪೇತ ದೃಶ್ಯ ವೈಭವ (VFX), ಬೃಹತ್ ಮೇಕಿಂಗ್ ಮತ್ತು ತಾರಾಗಣದ ನಟನೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಭಾರತೀಯ ಚಿತ್ರರಂಗದ ದೈತ್ಯ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿ, ಚಿತ್ರದ ಅದ್ಭುತ ಗ್ರಾಫಿಕ್ಸ್ ವಿಎಫ್‌ಎಕ್ಸ್ ಹಾಗೂ ರಣ್‌ಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅವರ ಅಭಿನಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Also Read
ಸೀತೆ ಕೈಗೆ ಖಡ್ಗ ಕೊಟ್ಟು ಯುದ್ಧ ಭೂಮಿಗೆ ಇಳಿಸಿದ್ದಕ್ಕೆ ನೆಟ್ಟಿಗರ ಆಕ್ರೋಶ: ರಾಮಾಯಣ ತಿರುಚಿದ್ರಾ? ನಿರ್ದೇಶಕರ ಸ್ಪಷ್ಟನೆ ಏನು? Ramayana
Ramayana

ನಿತೀಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯ ಆಧರಿತ 'ರಾಮಾಯಣ: ಪಾರ್ಟ್ 1' ಚಿತ್ರದಲ್ಲಿ ರಣ್‌ಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಅಭಿನಯಿಸಿದ್ದಾರೆ. ಸಿನಿಮಾದ ಮೇಲಿರುವ ಕ್ರೇಜ್ ನೋಡಿದರೆ ಮುಂಬರುವ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಇನ್ನಷ್ಟು ಹೊಸ ಎತ್ತರಕ್ಕೇರುವ ಸಾಧ್ಯತೆಯಿದೆ, (ಏಜೆನ್ಸೀಸ್​).