ರಾವಣನಾಗಿ ಯಶ್ ಅಬ್ಬರಿಸಿದರೂ ಕನ್ನಡದಲ್ಲಿ ಕಲೆಕ್ಷನ್ ಡಲ್!..ರಾಮಾಯಣದ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?Ramayana Day 1 Collection

ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ರಾಮಾಯಣ ಬಿಡುಗಡೆಯ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದೆ. ಆದರೆ ಅಭಿಮಾನಿಗಳು ಮತ್ತು ಚಿತ್ರತಂಡ ನಿರೀಕ್ಷಿಸಿದ್ದಂತಹ ಭರ್ಜರಿ ಆರಂಭ ಚಿತ್ರಕ್ಕೆ ಸಿಕ್ಕಿಲ್ಲ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರಕ್ಕೆ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಹೆಚ್ಚಾಗಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಮೊದಲ ದಿನದ ಗಳಿಕೆ ನಿರೀಕ್ಷಿತ ಮಟ್ಟ ತಲುಪಿಲ್ಲ.Ramayana Day 1 Collection
Ramayana Day 1 Collection
Ramayana Day 1 Collection WEB
Published on: 

Ramayana Box Office Collection Day 1: ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ರಾಮಾಯಣ ಬಿಡುಗಡೆಯ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದೆ. ಆದರೆ ಅಭಿಮಾನಿಗಳು ಮತ್ತು ಚಿತ್ರತಂಡ ನಿರೀಕ್ಷಿಸಿದ್ದಂತಹ ಭರ್ಜರಿ ಆರಂಭ ಚಿತ್ರಕ್ಕೆ ಸಿಕ್ಕಿಲ್ಲ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರಕ್ಕೆ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಹೆಚ್ಚಾಗಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಮೊದಲ ದಿನದ ಗಳಿಕೆ ನಿರೀಕ್ಷಿತ ಮಟ್ಟ ತಲುಪಿಲ್ಲ.

ವರದಿ ಪ್ರಕಾರ, 'ರಾಮಾಯಣ' ಭಾರತದಲ್ಲಿ ಮೊದಲ ದಿನ ಎಲ್ಲಾ ಭಾಷೆಗಳಿಂದ ಒಟ್ಟು 77.50 ಕೋಟಿ ಗಳಿಕೆ ಮಾಡಿದ್ದು, ವಿದೇಶಿ ಗಳಿಕೆ ಸೇರಿಸಿದರೆ 127.50 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. ಆದರೆ, ಈ ಸಿನಿಮಾದ ಹೈಫ್​ ಹಾಗೂ ಹೂಡಿಕೆ ಮೊತ್ತಕ್ಕೆ ಹೋಲಿಸಿದರೆ, ಮೊದಲ ದಿನದ ಗಳಿಕೆ ಬಹಳ ಕಡಿಮೆಯಾಗಿದೆ ಎನ್ನುವುದು ಸಿನಿ ವಿಮರ್ಶಕರ ವಾದವಾಗಿದೆ.

ಭಾಷಾವಾರು ಗಳಿಕೆಯಲ್ಲಿ ಹಿಂದಿಗೆ ಮೊದಲ ಸ್ಥಾನ

ರಾಮಾಯಣ ಸಿನಿಮಾ ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಪೈಕಿ ಹಿಂದಿ ಆವೃತ್ತಿ ಅತಿ ಹೆಚ್ಚು ಗಳಿಕೆ ಮಾಡಿದ್ದು, ಒಟ್ಟು 47.50 ಕೋಟಿ ಕಲೆಕ್ಷನ್ ಮಾಡಿದೆ. ಕನ್ನಡದಲ್ಲಿ 7.25 ಕೋಟಿ ಗಳಿಕೆ ಮಾಡುವ ಮೂಲಕ ಎರಡನೇ ಸ್ಥಾನವನ್ನು ಪಡೆದಿದೆ. ಅಂತಯೇ, 6 ಕೋಟಿ, 2 ಕೋಟಿ ಹಾಗೂ 1.50 ಕೋಟಿ ಗಳಿಕೆಯೊಂದಿದೆ ತೆಲುಗು, ತಮಿಳು ಮತ್ತು ಮಳಿಯಾಳಂ ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ.

ಈ ಸಿನಿಮಾದ ಅತ್ಯಂತ ಪ್ರಮುಖ 'ರಾವಣ' ನ ಪಾತ್ರದಲ್ಲಿ ಕನ್ನಡ ಮೂಲದ ನಟ ಯಶ್​ ಅಭಿನಯಿಸಿದ್ದು, ಕನ್ನಡ ಪ್ರೇಕ್ಷಕರಿಂದ ದೊಡ್ಡ ಮಟ್ಟದ ಕಲೆಕ್ಷನ್​ ಹರಿದು ಬರಲಿದೆ ಎಂಬ ನೀರಿಕ್ಷೆಯಿತ್ತು. ಆದರೆ ಬಾಕ್ಸ್​​ ಆಫೀಸ್​ ಕಲೆಕ್ಷನ್​ ನೋಡಿದ ಮೇಲೆ ಈ ನೀರಿಕ್ಷೆ ಹುಸಿಯಾಗಿದೆ.

ಇದನ್ನೂ ಓದಿ : ರಾಮಾಯಣ: ರಣಬೀರ್ ಕಪೂರ್ vs ಯಶ್, ಇಬ್ಬರಲ್ಲಿ ಮಿಂಚಿದವರು ಯಾರು? ಇಲ್ಲಿದೆ ಒಂದು ಸಮಗ್ರ ವಿಶ್ಲೇಷಣೆ... Ramayana

ವಿಶ್ವಾದ್ಯಂತ 127.50 ಕೋಟಿ ಕಲೆಕ್ಷನ್

ಭಾರತದ ಹೊರಗಿನ ಮಾರುಕಟ್ಟೆಯಲ್ಲೂ ಸಿನಿಮಾ ಉತ್ತಮ ಗಳಿಕೆ ಮಾಡಿದೆ. ವಿದೇಶಿ ಮಾರುಕಟ್ಟೆಯಲ್ಲಿ ಮೊದಲ ದಿನ 50 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ಭಾರತ ಮತ್ತು ವಿದೇಶಗಳ ಒಟ್ಟು ಗಳಿಕೆ 127.50 ಕೋಟಿಗೆ ತಲುಪಿದೆ ಎಂದು ವರದಿಯಾಗಿದೆ.

2,000 ಕೋಟಿ ಬಜೆಟ್‌ನ ಸಿನಿಮಾ

ರಾಮಾಯಣ ಚಿತ್ರದ ಎರಡೂ ಭಾಗಗಳನ್ನು ಸೇರಿಸಿ ಸುಮಾರು 4,000 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಮೊದಲ ಭಾಗದ ಅಂದಾಜು ಬಜೆಟ್ 2,000 ಕೋಟಿ ಎಂದು ಪರಿಗಣಿಸಲಾಗಿದೆ. ಇಷ್ಟು ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಮೊದಲ ದಿನದ ಗಳಿಕೆ ಸಮಾಧಾನಕರ ಆರಂಭ ನೀಡಿದೆಯಾದರೂ, ಚಿತ್ರದ ಮುಂದಿನ ಭವಿಷ್ಯ ವಾರಾಂತ್ಯದ ಗಳಿಕೆಯ ಮೇಲೆ ಅವಲಂಬಿತವಾಗಲಿದೆ. ಶನಿವಾರ ಮತ್ತು ಭಾನುವಾರ ಸಿನಿಮಾ ಎಷ್ಟು ಗಳಿಕೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​​).