ಸೀತೆ ಪಾತ್ರವನ್ನು ನಾನು ಆಯ್ಕೆ ಮಾಡಲಿಲ್ಲ, ಆ ಪಾತ್ರವೇ ನನ್ನನ್ನು ಹುಡುಕಿ ಬಂತು!: ಮನದಾಳದ ಮಾತು ಹಂಚಿಕೊಂಡ ಸಾಯಿ ಪಲ್ಲವಿ! Sai Pallavi on Sita Mata

ಸೀತೆ ಪಾತ್ರದ ಬಗ್ಗೆ ನಟಿ ಸಾಯಿ ಪಲ್ಲವಿ ಭಾವುಕ ನುಡಿ
ಸೀತೆ ಪಾತ್ರದ ಬಗ್ಗೆ ನಟಿ ಸಾಯಿ ಪಲ್ಲವಿ ಭಾವುಕ ನುಡಿ
Published on

ಪ್ರಮುಖ ಮುಖ್ಯಾಂಶಗಳು

  • ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ
  • ಸೀತೆ ಪಾತ್ರದ ಬಗ್ಗೆ ನಟಿ ಸಾಯಿ ಪಲ್ಲವಿ ಭಾವುಕ ನುಡಿ
  • ಈ ಪಾತ್ರ ನನ್ನ ಆಯ್ಕೆ ಮಾಡಿದ್ದಕ್ಕಾಗಿ ಧನ್ಯ ಎಂದ ಸೌತ್​ ಬ್ಯೂಟಿ
ಮುಂಬೈ: ಸದ್ಯ ಭಾರತದ ಸಿನಿಲೋಕ ಬಿಡುಗಡೆಗೆ ತುದಿಗಾಲಿನಲ್ಲಿ ಕಾದು ಕುಳಿತಿರುವ ಸಿನಿಮಾ ಎಂದರೆ ಅದು ನಿತೇಶ್​ ತಿವಾರಿ ನಿರ್ದೇಶನದ ರಾಮಾಯಣ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ ಪ್ರಭು ಶ್ರೀರಾಮನ ಪಾತ್ರವನ್ನು ನಿರ್ವಹಿಸಲಿದ್ದರೆ, ಸೌತ್​ ಬ್ಯೂಟಿ ಸಾಯಿ ಪಲ್ಲವಿ ಸೀತಾ ಮಾತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಕಾಣಲಿದ್ದು, ಮೊದಲ ಭಾಗವು 2026 ರ ದೀಪಾವಳಿಗೆ ಬಿಡುಗಡೆಯಾದರೆ, ಎರಡನೇ ಭಾಗವು 2027 ರ ದೀಪಾವಳಿಗೆ ತೆರೆಕಾಣಲಿದೆ ಎಂದು ಸಿನಿಮಾ ತಂಡ ತಿಳಿಸಿದೆ. ಇತ್ತೀಚೆಗೆ ನಡೆದ ಸಿನಿಮಾ ಟ್ರೇಲರ್​ ಲಾಂಚ್​ ಇವೆಂಟ್​ನಲ್ಲಿ ಸಾಯಿ ಪಲ್ಲವಿ (Sai Pallavi on Sita Mata) ತಾವು ನಿರ್ವಹಿಸಲಿರುವ ಸೀತಾ ಮಾತೆಯ ಪಾತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಈ ಪಾತ್ರ ನನ್ನನ್ನು ಹುಡುಕಿ ಬಂದಿದೆ!

ಒಬ್ಬ ಕಲಾವಿದೆಯಾಗಿ ದೇವರ ಪಾತ್ರವನ್ನು, ಅದರಲ್ಲೂ ಸೀತಾ ಮಾತೆಯ ಪಾತ್ರ ನಿರ್ವಹಿಸುವುದು ನನಗೆ ತುಂಬಾ ಸವಾಲಾಗಿತ್ತು. ಆದರೆ ನನ್ನ ಚಿತ್ರತಂಡ, ಅವರ ಪ್ರೊತ್ಸಾಹದಿಂದ ಈ ಮಾತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.
ನಿಜ ಹೇಳಬೇಕೆಂದರೆ ನಾನು ಈ ಪಾತ್ರವನ್ನು ಆಯ್ಕೆ ಮಾಡಿಕೊಂಡಿಲ್ಲ, ಆದರೆ ಈ ಪಾತ್ರ ನನ್ನನ್ನು ಆರಿಸಿ ಬಂದಿದ್ದಕ್ಕಾಗಿ ಧನ್ಯಳಾಗಿದ್ದೆನೆಂದು ನಟಿ ಹೇಳಿದ್ದಾರೆ. ಹಾಗೆಯೇ ಈ ಪಾತ್ರವನ್ನು ಒಂದೇ ಸಮನೆ ಅಭಿನಯಿಸಲು ಸಾಧ್ಯವಿರಲಿಲ್ಲ, ಹೀಗಾಗಿ ನಾನು ಪ್ರತಿದಿನ ಧ್ಯಾನ ಹಾಗೂ ಸೀತಾ ದೇವಿಯನ್ನು ಪೂಜಿಸುತ್ತಿದೆ ಎಂದು ತಿಳಿಸಿದ್ದಾರೆ.

ನನಗೆ ಆಕೆ ಕಣ್ಣಲ್ಲಿ ಸೀತೆ ಕಂಡಳು!

ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ನಿತೇಶ್​ ತಿವಾರಿ, ನಟರು ಸುಮ್ಮನೆ ನಟಿಸಬಹುದು ಆದರೆ ಅವರ ಕಣ್ಣುಗಳು ಸುಳ್ಳನ್ನು ಹೇಳುವುದಿಲ್ಲ. ನನಗೆ ರಣಬೀರ್​ನ ಕಣ್ಣಲ್ಲಿ ಶ್ರೀರಾಮನನ್ನು ಹಾಗು ಸಾಯಿ ಕಣ್ಣಲ್ಲಿ ಸೀತೆಯನ್ನು ಕಂಡಿದ್ದೆನೆ.
ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಇದೇ ಜುಲೈ 24 ರಂದು ಟ್ರೇಲರ್​ ಬಿಡುಗಡೆಯಾಗಲಿದೆ, ಹಾಗೆಯೇ ದೀಪಾವಳಿಗೆ ಸಿನಿಮಾ ತೆರೆಕಾಣುತ್ತೆ. ಪ್ರತಿತೊಬ್ಬ ಭಾರತೀಯರು ಈ ಸಿನಿಮಾವನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಅವರು ಹೇಳಿದರು.

ಸಿನಿಮಾದಲ್ಲಿ ಭಾರಿ ತಾರಾಗಣ!

ನಿತೇಶ್​ ತಿವಾರಿ ನಿರ್ದೇಶಿಸುತ್ತಿರುವ ಈ ರಾಮಾಣ ಸಿನಿಮಾದಲ್ಲಿ, ರಾಮನ ಪಾತ್ರಧಾರಿಯಾಗಿ ರಣಬೀರ್​ ಕಪೂರ್​ ಕಾಣಿಸಿಕೊಂಡರೆ, ರಾವಣನಾಗಿ ಕನ್ನಡಿಗ ರಾಕಿಂಗ್​ಸ್ಟಾರ್​ ಯಶ್​​ ಮಿಂಚಲಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ, ಮಂಡೋದರಿಯಾಗಿ ಕಾಜಲ್​ ಅರ್ಗವಾಲ್​, ಹನುಮನಾಗಿ ಸನ್ನಿ ಡಿಯೋಲ್​ ಹಾಗೂ ಲಕ್ಷ್ಮಣನಾಗಿ ರವಿ ದುಭೆ ಕಾಣಿಸಿಕೊಳ್ಳುತ್ತಿದ್ದು, ಇನ್ನೂ ಅನೇಕ ಖ್ಯಾತನಾಮರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net