ಸರ್ಕಾರಿ ಆಸ್ಪತ್ರೆ ಮೇಲೆ ನಂಬಿಕೆ ಇಲ್ಲ..ನನ್ನ ಗಂಡನನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ; ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ ವಾಂಗ್​ಚುಕ್​ ಪತ್ನಿ ಗೀತಾಂಜಲಿ! Sonam Wangchuk Wife Geetanjali

ಸರ್ಕಾರಿ ಆಸ್ಪತ್ರೆ ವರದಿ ನಂಬಲ್ಲ, ಗಂಡನನ್ನು ಪೊಲೀಸರು ಬಂಧಿಸಿದ್ದಾರೆ: ವಾಂಗ್​ಚುಕ್​ ಪತ್ನಿ
ಸರ್ಕಾರಿ ಆಸ್ಪತ್ರೆ ವರದಿ ನಂಬಲ್ಲ, ಗಂಡನನ್ನು ಪೊಲೀಸರು ಬಂಧಿಸಿದ್ದಾರೆ: ವಾಂಗ್​ಚುಕ್​ ಪತ್ನಿ
Published on

ಪ್ರಮುಖ ಮುಖ್ಯಾಂಶಗಳು

  • ಸೋನಮ್ ವಾಂಗ್‌ಚುಕ್ ಸತ್ಯಾಗ್ರಹದ ಸುತ್ತ ಹೈಡ್ರಾಮಾ!
  • ಸರ್ಕಾರಿ ಆಸ್ಪತ್ರೆ ವರದಿ ನಂಬಲ್ಲ, ಗಂಡನನ್ನು ಪೊಲೀಸರು ಬಂಧಿಸಿದ್ದಾರೆ: ವಾಂಗ್​ಚುಕ್​ ಪತ್ನಿ
  • ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸೋನಮ್​ ವಾಂಗ್​ಚುಕ್​ ಪತ್ನಿ ಗೀತಾಂಜಲಿ
ನವದೆಹಲಿ: ಕಳೆದ 20 ದಿನಗಳಿಂದ ದೆಹಲಿಯ ಜಂತರ್​ ಮಂತರ್​​ನಲ್ಲಿ ಪರಿಸರವಾದಿ ಸೋನಮ್​ ವಾಂಗ್​ಚುಕ್​, ನೀಟ್​ ಸೇರಿ ದೇಶದ್ಯಂತ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.
ಶನಿವಾರ (ಜು.18) ದೆಹಲಿ ಹೈಕೋರ್ಟ್​ ನಿರ್ದೇಶನದಂತೆ ದೆಹಲಿ ಪೊಲೀಸರು, ವಾಂಗ್​ಚುಕ್​ ಅವರನ್ನು ವಶಕ್ಕೆ ತೆಗೆದುಕೊಂಡು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈದೀಗ ತನ್ನ ಗಂಡನ ಬಂಧನ ಅಕ್ರಮವಾಗಿದೆ, ಹಾಗೂ ಅವರನ್ನು ಸರ್ಕಾರಿ ಆಸ್ಪತ್ರೆಯ ಬದಲು ಖಾಸಗಿ ಆಸ್ಪತ್ರೆಗೆ ರವಾನಿಸಬೇಕೆಂದು ಸೋನಮ್​ ವಾಂಗ್​ಚುಕ್​ ಪತ್ನಿ ಗೀತಾಂಜಲಿ ಜೆ ಆಂಗ್ಮೋ (Sonam Wangchuk Wife Geetanjali) ದೆಹಲಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಸರ್ಕಾರಿ ಆಸ್ಪತ್ರೆ ಮೇಲೆ ನಂಬಿಕೆ ಇಲ್ಲ!

ನನಗೆ ಪೊಲೀಸರು ದಾಖಲಿಸಿರುವ ಸಫ್ದರ್ಜಂಗ್ ಆಸ್ಪತ್ರೆ ಮೇಲೆ ಯಾವುದೇ ನಂಬಿಕೆ ಇಲ್ಲ. ಏಕೆಂದರೆ ಅವರು ನನ್ನ ಪತಿ ಸೋನಮ್​ ವಾಂಗ್​ಚುಕ್​ ಅವರ ದೇಹದಲ್ಲಿ ಪೊಟಾಶಿಯಂ ಪ್ರಮಾಣ 2.9 ಗೆ ತಲುಪಿದೆ ಇದರಿಂದ ಅವರ ಪ್ರಾಣಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ. ಆದರೆ ವಾಂಗ್​ಚುಕ್​ ಅವರ ದೇಹದಲ್ಲಿ 3.5 ಮಟ್ಟದಲ್ಲಿ ಪೊಟಾಶಿಯಂ ಇದೆ, ಅವರ ಆರೋಗ್ಯ ಸರಿಯಾಗಿದೆ ಎಂದು ಖಾಸಗಿ ಲಾಬ್​ನ ವರದಿ ಹೇಳುತ್ತಿದೆ.
ಈ ಸಫ್ದರ್ಜಂಗ್ ಆಸ್ಪತ್ರೆ ಅವರು ನನ್ನ ಪತಿಯ ಜೀವದ ಜೊತೆ ಆಟವಾಡುತ್ತಿದ್ದು, ಕೂಡಲೇ ಸೋನಮ್​ ವಾಂಗ್​ಚುಕ್​ರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಬೇಕೆಂದು ಗೀತಾಂಜಲಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ನನ್ನ ಗಂಡನಿಗೆ ಚಿಕಿತ್ಸೆ ನೀಡುತ್ತಿಲ್ಲ; ಬಂಧಿಸಿದ್ದಾರೆ!

ನನಗೆ ನನ್ನ ಗಂಡನಿಗೆ ನಿಜವಾಗಿಯೂ ಚಿಕಿತ್ಸೆ ನೀಡುತ್ತಿದ್ದಾರೋ? ಇಲ್ಲವೋ? ಎನ್ನುವುದೇ ಗೊಂದಲವಾಗಿದೆ. ಶನಿವಾರ ವಾಂಗ್​ಚುಕ್​ ಅವರನ್ನು ಸುಮಾರು 30 ಜನ ಪೊಲೀಸರು ಎತ್ತುಕೊಂಡು ಹೋಗಿದ್ದರು. ಈಗ ಆಸ್ಪತ್ರೆ ಆವರಣದಲ್ಲಿ ಸುಮಾರು 100 ಕ್ಕೂ ಹೆಚ್ಚಿನ ಪೊಲೀಸರು ಕಾವಲಿಗೆ ನಿಂತಿದ್ದಾರೆ.
ಇದನ್ನೆಲ್ಲಾ ನೋಡುತ್ತಿದ್ದರೆ, ಅಲ್ಲಿ ನನ್ನ ಗಂಡನಿಗೆ ಯಾವುದೇ ಚಿಕಿತ್ಸೆ ನೀಡುತ್ತಿಲ್ಲ, ಬದಲಿಗೆ ಪೊಲೀಸರು ಆಸ್ಪತ್ರೆಯಲ್ಲಿಯೇ ಬಂಧಿಸಿಟ್ಟಿದ್ದಾರೆ ಎಂದು ಅನ್ನಿಸುತ್ತದೆ ಎಂದು ಹೇಳಿದ್ದಾರೆ. ಆದರೆ ಅವರಿಗೆ ಯಾವ ವೈಧ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನನಗೆ ತಿಳಿದಿಲ್ಲ. 20 ದಿನಗಳಿಂದ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನೂ ಕೂಡ ಸಂಪರ್ಕಿಸಿಲ್ಲ ಎಂದು ಗೀತಾಂಜಲಿ ದೆಹಲಿ ಹೈಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ನಮೂದಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net