ಓಮನ್‌ನಲ್ಲಿ ಹೈದರಾಬಾದ್ ಯುವತಿಗೆ ನರಕ ದರ್ಶನ: ದಿನಕ್ಕೆ 15 ಗಂಟೆ ಕೆಲಸ, ಊಟವೂ ಇಲ್ಲ, ಸಂಬಳವೂ ಇಲ್ಲ! ಗಲ್ಫ್ ದೇಶದ ಕರಾಳ ಮುಖ ಬಿಚ್ಚಿಟ್ಟ ಶಬ್ನಮ್ ಬೇಗಂ! Shabnam Begum

ಓಮನ್‌ನಲ್ಲಿ ನರಕಯಾತನೆ ಅನುಭವಿಸಿದ ಹೈದರಾಬಾದ್‌ ಯುವತಿ ಶಬ್ನಮ್ ಬೇಗಂ
ಓಮನ್‌ನಲ್ಲಿ ನರಕಯಾತನೆ ಅನುಭವಿಸಿದ ಹೈದರಾಬಾದ್‌ ಯುವತಿ ಶಬ್ನಮ್ ಬೇಗಂ
Published on

ಪ್ರಮುಖ ಮುಖ್ಯಾಂಶಗಳು

  • ಓಮನ್‌ನಲ್ಲಿ ನರಕಯಾತನೆ ಅನುಭವಿಸಿದ ಹೈದರಾಬಾದ್‌ ಯುವತಿ ಶಬ್ನಮ್ ಬೇಗಂ
  • ದಿನಕ್ಕೆ 15 ಗಂಟೆ ಕೆಲಸ, ಸಂಬಳವಿಲ್ಲದೆ ದೌರ್ಜನ್ಯಕ್ಕೊಳಗಾಗಿದ್ದ ಯುವತಿ
  • ರಕ್ಷಣೆಗೆ ಧಾವಿಸಿದ ವಿದೇಶಾಂಗ ಇಲಾಖೆ!
ಹೈದರಾಬಾದ್​​: ಆರ್ಥಿಕ ಸ್ಥಿತಿಯನ್ನು ಸರಿ ಮಾಡಿಕೊಳ್ಳಲೋ ಅಥವಾ ಹೊರಗಿನ ದೇಶದ ಅನುಭವ ಪಡಿಯಲೋ ಹಲವರು ವಿದೇಶಕ್ಕೆ ಕೆಲಸಕ್ಕೆಂದು ಹೋಗುತ್ತಾರೆ. ಅದರಲ್ಲೂ ಮುಸ್ಲಿಂ ಸಮುದಾಯದವರು ದಶಕಗಳಿಂದ ಗಲ್ಫ್​ ದೇಶಕ್ಕೆ ದುಡಿಮೆಗಾಗಿ ವಲಸೆ ಹೋಗುತ್ತಿದ್ದಾರೆ.
ಆದರೆ ಅಲ್ಲಿಯ ಜನ ಜೀವನ ನಿಜವಾಗಿಯೂ ಅಲ್ಲಿನ ಶೇಖ್​ಗಳ ರೀತಿಯಲ್ಲೇ ಇರುತ್ತದೆ ಎಂಬ ತಪ್ಪು ಕಲ್ಪನೆ ಹೊಂದಿರುವ ಜನರಿಗೆ ಈ ಹೈದರಾಬಾದ್​ನ ಯುವತಿ (Shabnam Begum) ಬಿಚ್ಚಿಟ್ಟಿರುವ ಕಟು ಸತ್ಯ, ಮಧ್ಯಪ್ರಾಚ್ಯದ ಕರಾಳ ಮುಖವನ್ನು ತೋರಿಸುತ್ತದೆ.

15 ಗಂಟೆ ಕೆಲಸ; ಊಟವಿಲ್ಲ; ಹಣವೂ ಇಲ್ಲ!

ಈ ಘಟನೆ ನಡೆದಿರುವುದು ಓಮನ್​ ದೇಶದಲ್ಲಿ. ಹೈದರಾಬಾದ್​ ಮೂಲದ 26 ವರ್ಷದ ಶಬ್ನಮ್ ಬೇಗಂ ಎಂದು ಗುರುತಿಸಲಾಗಿರುವ ಯುವತಿ ಗಲ್ಫ್​ ದೇಶದ ಕರಾಳ ಮುಖದ ದರ್ಶನ ಮಾಡಿಸಿದ್ದಾಳೆ.
ಈ ಯುವತಿ ಮಾರ್ಚ್​ 26 ರಂದು ಹೈದರಾಬಾದ್​ನಿಂದ ಓಮನ್​ ದೇಶಕ್ಕೆ ಮನೆಗೆಲಸದ ಕೆಸಲವನ್ನು ಮಾಡಲು ಹೋಗಿದ್ದಳಂತೆ. ಇವಳನ್ನು ವಿದೇಶಕ್ಕೆ ಕಳುಹಿಸಿದ ಏಜೆಂಟ್​ ಒಂದು ಮನೆಯಲ್ಲಿ ಕೆಲಸ, ತಿಂಗಳಿಗೆ 200 ದಿನಾರ್ (50 ಸಾವಿರ ರೂಪಾಯಿ) ಸಂಬಳ, ಉಳಿದುಕೊಳ್ಳಲು ಮನೆ ಮೊದಲಾದ ಸೌಲಭ್ಯ ನೀಡುತ್ತಾರೆ ಎಂದು ನಂಬಿಸಿ ಇವಳನ್ನು ಓಮನ್​ಗೆ ರವಾನಿಸಿದ್ದಾನೆ.
ಆದರೆ ಓಮನ್​ಗೆ ಕಾಲಿಡುತ್ತಿದ್ದಂತೆ ಶಬ್ನಮ್ ಬೇಗಂ ಗೆ ಇವೆಲ್ಲಾ ಸುಳ್ಳು ಭರವಸೆ ಎಂದು ತಿಳಿದಿದೆ. ಒಂದು ಮನೆಯ ಬದಲಿಗೆ ಹತ್ತಾರು ಮನೆಯಲ್ಲಿ ಕೆಲಸ, ದಿನಕ್ಕೆ 12 ರಿಂದ 15 ಗಂಟೆ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದೆ ಎಂದು ಬೇಗಂ ಹೇಳಿದ್ದಾಳೆ. ಅಷ್ಟು ಕೆಲಸ ಮಾಡಿದರೂ ಸರಿಯಾಗಿ ಊಟವನ್ನು ಕೊಡುತ್ತಿರಲಿಲ್ಲ, ಅಷ್ಟೇ ಅಲ್ಲದೆ ಮೂರು ತಿಂಗಳು ಒಂದು ರೂಪಾಯಿ ಸಂಬಳವನ್ನು ಕೊಟ್ಟಿಲ್ಲ ಎಂದು ತಿಳಿಸಿದ್ದಾಳೆ.
ಹಾಗೆಯೇ ನಿರಂತರವಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುತ್ತಿದ್ದರು. ಮೊಬೈಲ್​ ಬಳಿಸಿದರೆ ಕಠಿಣ ಶಿಕ್ಷೆ ನೀಡಿದ್ದಾಗಿ ವಿಡಿಯೋ ಮಾಡಿ ನೋವನ್ನು ತೋಡಿಕೊಂಡಿದ್ದಾಳೆ.

ವಿದೇಶಾಂಗ ಇಲಾಖೆ ತಲುಪಿದ ಬೇಗಂ!

ನಂತರ ಈ ನಿರಂತರ ನೋವನ್ನು ಸಹಿಸಲಾಗದ ತರುವಾಯ ವಿದೇಶಾಂಗ ಇಲಾಖೆ ಬಗ್ಗೆ ಮಾಹಿತಿ ಕಲೆಹಾಕಿದ ಶಬ್ನಮ್ ಬೇಗಂ, ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ಓಡಿ ಹೋಗಿ ಭಾರತೀಯ ಎಂಬಸ್ಸಿಯನ್ನು ತಲುಪಿದ್ದಾಳೆ.
ಅಲ್ಲಿದ್ದ ಅಧಿಕಾರಿಗಳಲ್ಲಿ ತನ್ನ ನೋವನ್ನು, ತಾನು ಭಾರತದಿಂದ ಹೇಗೆ ಬಂದೆ, ತನ್ನ ವೃತ್ತಾಂತವನೆಲ್ಲಾ ಅವರಲ್ಲಿ ಬಿಚ್ಚಿಟ್ಟಿದ್ದಾಳೆ. ಈ ಮಹಿಳೆ ಕುರಿತು ಅಲ್ಲಿನ ರಾಜಕೀಯ ನಾಯಕ ಅಜ್ಮದ್​ ಉಲ್ಲಾ ಖಾನ್​, ಭಾರತದ ವಿದೇಶಾಂಗ ಸಚಿವ ಎಸ್​. ಜೈ ಶಂಕರ್​ಗೆ ಈ ಕುರಿತು ಮನವಿ ಮಾಡಿದ ಬಳಿಕ ವಿಷಯ ಎಲ್ಲಡೆ ತಲುಪಿದೆ.
ಈ ಘಟನೆಗೆ ಮರು ಉತ್ತರ ನೀಡಿರುವ ಭಾರತದ ಎಂಬಸ್ಸಿ, ನಾವು ಮಹಿಳೆ ನೀಡಿದ ಮಾಹಿತಿಯನ್ನು ಪಡೆದಿದ್ದೆವೆ, ಈ ಕುರಿತು ವಿಚಾರಣೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೆವೆಂದು ಮಾಹಿತಿ ನೀಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net