ಭೂಗತ ಜಗತ್ತಿಲ್ಲದೆ ನಾನಿಲ್ಲ: ದಾವೂದ್ ಇಬ್ರಾಹಿಂನಿಂದಲೇ ನನ್ನ ಮನೆ ನಡೆಯುತ್ತಿದೆ; ರಾಮ್​ ಗೋಪಾಲ್​ ವರ್ಮಾ ಶಾಕಿಂಗ್​ ಹೇಳಿಕೆ! Ram Gopal Varma on Dawood Ibrahim

ದಾವೂದ್ ಇಬ್ರಾಹಿಂನಿಂದಲೇ ನನ್ನ ಮನೆ ನಡೆಯುತ್ತಿದೆ: ಆರ್​ಜಿವಿ
ದಾವೂದ್ ಇಬ್ರಾಹಿಂನಿಂದಲೇ ನನ್ನ ಮನೆ ನಡೆಯುತ್ತಿದೆ: ಆರ್​ಜಿವಿ
Published on

ಪ್ರಮುಖ ಮುಖ್ಯಾಂಶಗಳು

  • ಭೂಗತ ಜಗತ್ತಿಲ್ಲದೆ ನನ್ನ ಸಿನಿಮಾಗಳಿಲ್ಲ
  • ದಾವೂದ್ ಇಬ್ರಾಹಿಂನಿಂದಲೇ ನನ್ನ ಮನೆ ನಡೆಯುತ್ತಿದೆ: ಆರ್​ಜಿವಿ
  • ಭೂಗತ ಜಗತ್ತಿನ ಕತೆಗಳೇ ನನ್ನ ಸಿನಿಮಾಗಳ ಕಥಾವಸ್ತು: ರಾಮ್​ ಗೋಪಾಲ್​ ವರ್ಮಾ
  • ನನಗೆ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ
ಬಾಲಿವುಡ್​: ಸತ್ಯ, ಕಂಪನಿ, ಸರ್ಕಾರ್​, ರಕ್ತ ಚರಿತ್ರ ಹೀಗೆ ನಾನಾ ರೀತಿಯ ಕ್ರೈಮ್ ಡ್ರಾಮಾ ಸಿನಿಮಾಗಳ ಮೂಲಕವೇ ಅಪಾರ ಜನ ಅಭಿಮಾನಿಗಳನ್ನು ಗಳಿಸಿರುವ ನಿರ್ದೇಶಕ ಎಂದರೆ ಅದು ಆರ್​.ಜಿ.ವಿ ಖ್ಯಾತಿಯ ರಾಮ್​ ಗೋಪಾಲ್​ ವರ್ಮಾ.
ಒಂದು ಕಾಲದಲ್ಲಿ ವರ್ಮಾರ ತಮ್ಮನ್ನು ಅವರ ಸಿನಿಮಾದಲ್ಲಿ ಹಾಕಿಕೊಂಡು ನಿರ್ದೇಶನ ಮಾಡಬೇಕೆಂದು ಸ್ಟಾರ್​ ನಟರು ಇವರ ಮನೆ ಮುಂದೆ ಕ್ಯೂನಿಂತದ್ದೂ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಆರ್​.ಜಿ.ವಿ (Ram Gopal Varma on Dawood Ibrahim) ತಮ್ಮ ಸಿನಿಮಾಗಳಿಗಿಂತ ತಮ್ಮ ಹೇಳಿಕೆಯ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ.

ನನ್ನ ಮನೆ ನಡೆಯುತ್ತಿರುವುದೇ ದಾವೂದ್​ನಿಂದ!

ತಮ್ಮ ಸಿನಿಮಾ ಜರ್ನಿ ಬಗ್ಗೆ ಇತ್ತೀಚೆಗೆ ಮಾತನಾಡಿರುವ ವರ್ಮಾ, 80-90 ರ ದಶಕದಲ್ಲಿ ಕೇವಲ ಬಾಂಬೆ ಮಾತ್ರವಲ್ಲ, ಈಡೀ ಭಾರತದಲ್ಲಿ ಭೂಗತ ಜಗತ್ತು ಸಕ್ರೀಯವಾಗಿತ್ತು. ಹಾಗೆಯೇ ಈ ಭೂಗತ ಜಗತ್ತು ಎಲ್ಲೋ ಮಂಗಳ ಗ್ರಹದಲ್ಲಿ ಇರಲಿಲ್ಲ, ಇದು ನಮ್ಮ ಸುತ್ತ-ಮುತ್ತಲೇ ಇತ್ತು.
ಒಂದು ವೇಳೆ ಭೂಗತ ಜಗತ್ತು ಇಲ್ಲದಿದ್ದರೆ ನಾನು ಸತ್ಯಾ, ಕಂಪನಿ ರೀತಿಯ ಸಿನಿಮಾ ನಿರ್ಮಿಸಲು ಕಥಾ ವಸ್ತುಗಳೇ ದೊರೆಯುತ್ತಿರಲಿಲ್ಲ. ಒಂದರ್ಥದಲ್ಲಿ ದಾವೂದ್​ ಇಬ್ರಾಹಿಂನಿಂದ ನನ್ನ ಮನೆ ನಡೆಯುತ್ತಿದೆ ಎಂದರೆ ತಪ್ಪಲ್ಲ ಎಂದು ಆರ್​ಜಿವಿ ಹೇಳಿದ್ದಾರೆ.

ನನಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ

ನಾನು ನಿರ್ಮಿಸಿದ ಬಹುತೇಕ ಸಿನಿಮಾಗಳು ಭೂಗತ ಜಗತ್ತಿನಲ್ಲಿ ಘಟಿಸಿದ ಕತೆಯನ್ನೇ ಆಧರಿಸಿದ್ದ ಕಾರಣ ನನಗೆ ಅವರಿಂದ ಬೆದರಿಕೆ ಕರೆ ಬರುತ್ತಿತ್ತು ಎಂದು ಕೆಲವರು ನಂಬಿದ್ದಾರೆ. ಅದರೆ ಇದು ಸಂಪೂರ್ಣ ಸುಳ್ಳು, ಬದಲಿಗೆ ಅವರಿಗೆ ನನ್ನ ಸಿನಿಮಾಗಳು ಇಷ್ಟವಾಗುತ್ತಿತ್ತು. ಅದರಲ್ಲೂ ಬಾಲಿವುಡ್​ನಲ್ಲಿ ಭೂಗತ ಜಗತ್ತನ್ನ ಅತ್ಯಂತ ನೈಜವಾಗಿ ತೋರಿಸಿದ ಸತ್ಯಾ ಮತ್ತು ಕಂಪನಿ ಸಿನಿಮಾ ನೋಡಿದ ಅನೇಕ ಭೂಗತ ಪಾತಕಿಗಳು ನನ್ನನ್ನು ಹೊಗಳಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಂಡರ್‌ವರ್ಲ್ಡ್ ಮತ್ತು ಬಾಲಿವುಡ್​

90 ರ ದಶಕದಲ್ಲಿ ಬಾಲಿವುಡ್​ನಲ್ಲಿ ತಯಾರಾಗುವ ಬಹುತೇಕ ಸಿನಿಮಾಗಲ್ಲಿ ಅಂಡರ್‌ವರ್ಲ್ಡ್​ನ ಹಣ ಹೂಡಿಕೆಯಾಗುತ್ತಿತ್ತು ಎಂದು ಮುಂಬೈ ಪೊಲೀಸ್​ನ ಮಾಜಿ ಅಧಿಕಾರಿ ಡಿ. ಶಿವಾನಂದನ್​ ಆರೋಪಿಸಿದ್ದರು.
ಸತ್ಯಾ, ಕಂಪನಿ, ಶೂಟೌಟ್​ ಎಟ್​ ವಡಾಲಾ, ಶೂಟೌಟ್​ ಎಟ್​ ಲೋಕಂಡ್​ವಾಲಾ ಈ ಸಿನಿಮಾಗಳಿಗೆ ಭೂಗತ ಜಗತ್ತಿನ ಹಣವನ್ನು ಬಳಕೆ ಮಾಡಿ ಸಿನಿಮಾ ಮೂಲಕ ತಾವು ಬಹಳ ಶುದ್ಧ ಹಸ್ತದವರೆಂದು ಈ ಭೂಗತ ಪಾತಕಿಗಳು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆಂದು ಅವರು ಹೇಳಿದ್ದರು.
ಇತ್ತೀಚೆಗೆ ಬಾಲಿವುಡ್​ ನಟ ವರುಣ್​ ಧವನ್​ ತಮ್ಮ ತಂದೆ ಡೇವಿಡ್​ ಧವನ್​ ಅವರಿಗೆ ಬರುತ್ತಿದ್ದ ಬೆದರಿಕೆ ಕರೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಹಾಗೆಯೇ ನಿರ್ದೇಶಕ ಕರಣ್​ ಜೋಹರ್​ಗೆ ಕುಚ್​ ಕುಚ್​ ಹೋತಾಹೇ ಸಿನಿಮಾ ಸಂದರ್ಭದಲ್ಲಿ ಬಂದಿದ್ದ ಬೆದರಿಕೆ ಕರೆ ಬಗ್ಗೆ ನಿರ್ದೇಶಕಿ ಫರಾ ಖಾನ್​ ಮುಕ್ತವಾಗಿ ಮಾತನಾಡಿದ್ದರು.
ಅದೇ ರೀತಿ ಟಿ- ಸೀರಿಸ್​ನ ಮಾಲೀಕ ಗುಲ್ಶನ್ ಕುಮಾರ್ ಅವರನ್ನು ಹಾಡುಹಗಲೇ ಅಂಡರ್‌ವರ್ಲ್ಡ್ ಕೊಲೆ ಮಾಡಿಸಿದನ್ನು ನೋಡಿದ ನಂತರ ಬಹುತೇಕ ನಟ-ನಟಿಯರು ಭೂಗತಪಾತಕಿಗಳ ಜೊತೆ ಉತ್ತಮ ಸಂಬಂಧವನ್ನು ಹೊಂದಲು ಪ್ರಾರಂಭಿಸಿದ್ದೇನು ಸುಳ್ಳಲ್ಲ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net