ಸ್ಟೈಲಾಗಿ ಸಿಗರೇಟ್ ಎಳೆದ ಯಜುವೇಂದರ್ ಚಹಲ್: ಸ್ಪಿನ್ನರ್​​ ವಿರುದ್ಧ ಕೆಂಡಕಾರಿದ ನೆಟ್ಟಿಗರು; ವಿಡಿಯೋ ವೈರಲ್​! Yuzvendra Chahal Smoking

ಕಾರಿನಲ್ಲಿ ಕುಳಿತು ಸಿಗರೇಟ್​ ಸೇದಿದ ಯಜುವೇಂದರ್​ ಚಹಲ್​
ಕಾರಿನಲ್ಲಿ ಕುಳಿತು ಸಿಗರೇಟ್​ ಸೇದಿದ ಯಜುವೇಂದರ್​ ಚಹಲ್​
Published on

ಪ್ರಮುಖ ಮುಖ್ಯಾಂಶಗಳು

  • ಕಾರಿನಲ್ಲಿ ಕುಳಿತು ಸಿಗರೇಟ್​ ಸೇದಿದ ಯಜುವೇಂದರ್​ ಚಹಲ್​
  • ಸೋಶಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
  • ಇದೇ ತಪ್ಪನ್ನು ಸಾಮಾನ್ಯ ಜನ ಮಾಡಿದ್ದರೆ ಟ್ರಾಫಿಕ್​ ಪೊಲೀರು ಸುಮ್ಮನಿರುತ್ತಿದ್ದರಾ? ನೆಟ್ಟಿರಗ ಪ್ರಶ್ನೆ
  • ಈ ವಿಡಿಯೋ ಬಗ್ಗೆ ಸ್ಪಷ್ಟಣೆ ನೀಡದ ಯುಜಿ
ವೈರಲ್​: ಭಾರತದ ಪುರುಷರ ಕ್ರಿಕೆಟ್​ ತಂಡದ ಖ್ಯಾತ ಸ್ಪಿನ್​ ಬೌಲರ್ ಯಜುವೇಂದರ್​ ಜಹಲ್​ ಇತ್ತೀಚೆಗೆ ತಮ್ಮ ಬೌಲಿಂಗ್​ನ ಬದಲಾಗಿ ಇತರೆ ವಿಷಯಗಳಿಂದಾಗಿಯೇ ಸುದ್ದಿಯಲ್ಲಿರುತ್ತಾರೆ. ಈಗ ಇ ಯುಜಿ (Yuzvendra Chahal Smoking) ಕಾರಿನಲ್ಲಿ ಕುಳಿತು ಸ್ಟೈಲಾಗಿ ಸಿಗರೇಟ್​ನ್ನು ಸೇದುತ್ತಿರುವ ವಿಡಿಯೋವೊಂದು ಸಖತ್​ ವೈರಲ್​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಸೋಶಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ ಭಾರತದ ಖ್ಯಾತ ಸ್ಪಿನ್​ ಬೌಲರ್​ ಯಜುವೇಂದರ್​ ಜಹಲ್ ತಮ್ಮ ಐಶಾರಾಮಿ ಕಾರಿನ್ನು ಚಲಾಯಿಸುತ್ತಾ ಸಿಗರೇಟನ್ನು ಸೇದಿ ನಂತರ ರಸ್ತೆ ಮೇಲೆ ಎಸೆಯುವುದನ್ನು ನಾವು ನೋಡ ಬಹುದಾಗಿದೆ. ಆದರೆ ಈ ವಿಡಿಯೋನಲ್ಲಿ ಇರುವವನು ನಿಜವಾಗಿಯೂ ಯಜುವೇಂದರ್​ ಜಹಲ್​ನೇ ಅಥವಾ ಇಲ್ಲವೇ ಎಂದು ಇಲ್ಲಿವರೆಗೆ ತಿಳಿದು ಬಂದಿಲ್ಲ. ಹಾಯೆಗೇ ಈ ವಿಡಿಯೋವನ್ನು ಯಾವಾಗ ಸೆರೆ ಹಿಡಿದಿದ್ದು ಎನ್ನುವ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ.
ನಾನು ಕುಡಿತ ಬಿಟ್ಟಿದ್ದೇನೆ: ಚಹಲ್​!
ಆರ್​ಸಿಬಿಯ ಹಾಗೂ ದಕ್ಷಿಣಾಫ್ರಿಕಾ ತಂಡದ ಮಾಜಿ ಆಟಗಾರ ಎ.ಬಿ.ಡಿವಿಲಿಯರ್ಸ್ ಅವರ ಯೂಟ್ಯೂಬ್​ ಚಾನೆಲ್​ನ ಸಂದರ್ಶನದಲ್ಲಿ ಮಾತನಾಡಿದ್ದ ಯುಜಿ, ನನಗೆ ಈಗ 35 ವಯಸ್ಸು, ನಾನು ಆರೋಗ್ಯವಂತನಾಗಿರಬೇಕು, ನನ್ನ ತಂಡಕ್ಕೆ ಶೇ.100 ಅಲ್ಲ 150 ರಷ್ಟು ಕೊಡುಗೆ ನೀಡಬೇಕು, ಹೀಗಾಗಿ ಕಳೆದ ಆರು ತಿಂಗಳಿನಿಂದ ಮಧ್ಯಪಾನವನ್ನು ನಿಲ್ಲಿಸಿದ್ದೆನೆ ಎಂದು ಅವರು ಹೇಳಿದ್ದರು.

ಸ್ಪಷ್ಟಣೆ ನೀಡದ ಯುಜಿ

ಈ ವಿಡಿಯೀ ಈದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗುತ್ತಿದೆ. ಆದರೆ ಈ ಕುರಿತು ಯಜುವೇಂದರ್​ ಜಹಲ್​ ಇಲ್ಲಿವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನಾಗಲಿ ಅಥವಾ ಸ್ಪಷ್ಟಣೆಯನ್ನಾಗಲಿ ನೀಡಿಲ್ಲ. ಆದರೆ ಈ ವಿಡಿಯೋಗೆ ಜನರಿಂದ ತೀವ್ರವಾಗಿ ವಿರೋಧ ವ್ಯಕ್ತವಾಗುತ್ತಿದ್ದು, ಯುಜಿ ಬಹಳ ದಿನ ಮೌನವಾಗಿರುವುದು ಒಳ್ಳೆಯದಲ್ಲ ಎನ್ನುವುದು ಅವರ ಅಭಿಮಾನಿಗಳ ಅಭಿಪ್ರಯಾಗವಾಗಿದೆ.

2026 ರ ಐಪಿಎಲ್​ನಲ್ಲಿ ಚಹಲ್​

ಈ ಭಾರಿಯ ಐಪಿಎಲ್​ನಲ್ಲಿ ಯಜುವೇಂದರ್​ ಚಹಲ್​ ಪಂಜಾಬ್ ಕಿಂಗ್ಸ್​ ತಂಡದ ಪರವಾಗಿ ಕಣಕ್ಕೀಳಿದಿದ್ದಾರೆ. ಸದ್ಯ 3 ಪಂದ್ಯಗಳಲ್ಲಿ ಬೌಲಿಂಗ್​ ಮಾಡಿರುವ ಚಹಲ್​ ಎಸೆದಿರುವ 42 ಬೌಲ್​ಗಳಲ್ಲಿ 49 ರನ್​​ಗಳನ್ನು ನೀಡಿ 3 ವಿಕೆಟ್​ಗಳನ್ನು ಪಡೆದಿದ್ದಾರೆ. ಇಂದು (ಶನಿವಾರ, ಏ.11) ಐ.ಎಸ್​.ಬಿಂದ್ರಾ ಕ್ರೀಡಾಂಗದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸನ್​ರೈಸರ್ಸ್ ತಂಡದ ವಿರುದ್ಧ ಮೈದಾನಕ್ಕಿಳಿಯಲಿದ್ದಾರೆ.

ನೆಟ್ಟಿಗರಿಂದ ತೀವ್ರ ತರಾಟೆ

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಾರ್ಯಪ್ರವರ್ತರಾಗಿದ್ದಾರೆ. ಪಾಪ ನಮ್ಮ ಯುಜಿ, ಹೆಂಡತಿ ಬಿಟ್ಟು ಹೋದ ನಂತರ ಡಿಪ್ರೆಶನ್​ನಲ್ಲಿ ಇದ್ದಾರೆ ಅನ್ನಿಸುತ್ತೆ ಎಂದು ಒಬ್ಬರು ಹೇಳಿದರೆ, ಇದೇ ಕೆಲಸವನ್ನು ಸಾಮಾನ್ಯ ಜನ ಮಾಡಿದ್ದರೆ ನಮ್ಮ ಟ್ರಾಫಿಕ್​ ಪೊಲೀಸರು ಸುಮ್ಮನೆ ಇರುತ್ತಿದ್ದರಾ? ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.
ನಿಮಗೆ ಸಿಗರೇಟು ಸೇದಬೇಕು, ಎಣ್ಣೆ ಕುಡಿಬೇಕು ಎನ್ನಿಸಿದರೆ ನಿಮ್ಮ ಮನೆಯಲ್ಲಿ ಹಾಯಾಗಿ ಮಾಡಿಕೊಳ್ಳಿ ಹೀಗೆ ರಸ್ತೆಯಲ್ಲಿ ಮಾಡುವುದು ಸರಿಯಲ್ಲ, ನಿಮ್ಮನ್ನು ಅದೆಷ್ಟೋ ಜನ ರೋಲ್​ ಮಾಡೆಲ್​ಗಳೆಂದು ಸ್ವೀಕರಿಸಿರುತ್ತಾರೆ ಎಂದು ಮತ್ತೊಬ್ಬರು ಬುದ್ಧಿವಾದ ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net