ಡೆಂಘೆ ಹೆಚ್ಚಳದ ನಡುವೆಯೇ ಕೋವಿಡ್​ಗೆ ತುತ್ತಾದ ಬಾಲಿವುಡ್​ನ ಖ್ಯಾತ ನಟ​; ಅಂಬಾನಿ ಪುತ್ರನ ಮದುವೆಗೆ ಗೈರು

Anant Radhika
Published on

ಮುಂಬೈ: ದೇಶದಲ್ಲಿ ದಿನ ಕಳೆದಂತೆ ಮಳೆ ಹೆಚ್ಚಾಗುತ್ತಿರುವಂತೆಯೇ ಡೆಂಘೆ ಪ್ರಕರಣಗಳು ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಬಾಲಿವುಡ್​ನ ಸೂಪರ್​ಸ್ಟಾರ್​ ಅಕ್ಷಯ್​ ಕುಮಾರ್​ ಕೋವಿಡ್​ಗೆ ತುತ್ತಾಗಿದ್ದಾರೆ. ಹೀಗಾಗಿ ಮುಕೇಶ್​ ಅಂಬಾನಿ ಕಿರಿಯ ಪುತ್ರನ ಮದುವೆಗೆ ಗೈರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಅಕ್ಷಯ್​ ಕುಮಾರ್​ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 12ರಂದು ಬಿಡುಗಡೆಗೊಂಡ ಸರ್ಫಿರಾ ಚಿತ್ರದ ಪ್ರಮೋಷನ್​ ವೇಳೆ ಅನಾರೋಗ್ಯಕ್ಕೀಡಾಗಿದ್ದರು ಎಂದು ವರದಿಯಾಗಿದೆ. ಜ್ವರ ಕಾಣಿಸಿಕೊಂಡ ಹಿನ್ನೆಲೆ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದರು.

akshay kumar

ಕೋವಿಡ್-19 ಪರೀಕ್ಷೆ ಪಾಸಿಟಿವ್ ಬಂದ ಕಾರಣ ಅವರು ಕ್ವಾರಂಟೈನ್‌ನಲ್ಲಿದ್ದು, ವೈದ್ಯರು ಶಿಫಾರಸು ಮಾಡಿದ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ವರದಿಯ ಪ್ರಕಾರ, ಜುಲೈ 12 ರಂದು ಶುಕ್ರವಾರ ಬೆಳಗ್ಗೆ ನಟ ಕೋವಿಡ್​ಗೆ ತುತ್ತಾಗಿದ್ದು, ಚಿಕಿತ್ಸೆ ಒಡೆಯುತ್ತಿದ್ದಾರೆ. ಹೀಗಾಗಿ ಅಕ್ಷಯ್​ ಕುಮಾರ್​ ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಮದುವೆ ತಪ್ಪಿಸಿಕೊಳ್ಳಲಿದ್ದಾರೆ ಎಂದು ಅವರ ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.

ಕನ್ನಡಿಗ ಕ್ಯಾ. ಗೋಪಿನಾಥ್​ ಜೀವನವನ್ನು ಆಧರಿಸಿ ಮಾಡಲಾಗಿರುವ ಸರ್ಫಿರಾ ಚಿತ್ರವು ಜುಲೈ 12 ವಿಶ್ವದಾದ್ಯಂತೆ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದಲದೆ ಅಕ್ಷಯ್​ ಕುಮಾರ್​ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದು, ಭರದಿಂದ ಚಿತ್ರೀಕರಣ ಸಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net