More

  ಪಾರ್ಟಿಯಲ್ಲಿ ಕಿರುಕುಳ ನೀಡಿದ ಯುವತಿ ! ಬಾಲಿವುಡ್​ ನಟಿಯ ಬೇಸರ…

  ‘ಇಷ್ಕ್’, ‘ಚಾಚಿ 420’ ಸೇರಿ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಫಾತಿಮಾ ಸನಾ ಶೇಖ್ ನಂತರ ‘ದಂಗಲ್’, ‘ಲೂಡೋ’, ‘ಥಾರ್’, ‘ಥಗ್ಸ್ ಆ್ ಹಿಂದುಸ್ಥಾನ್’ ಸೇರಿ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಫಾತಿಮಾ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಜೀವನಾಧಾರಿತ ‘ಸ್ಯಾಮ್ ಬಹದ್ದೂರ್’ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದು, ಸಿನಿಮಾ ನಾಳೆ ರಿಲೀಸ್ ಆಗಲಿದೆ.

  ಇದನ್ನೂ ಓದಿ : ನಯನತಾರಾ 75 & ಕೌಂಟಿಂಗ್; ಗಮನ ಸೆಳೆದ ಅನ್ನಪೂರಣಿ ವಿಭಿನ್ನ ಟ್ರೇಲರ್

  ಪಾರ್ಟಿಯಲ್ಲಿ ಕಿರುಕುಳ ನೀಡಿದ ಯುವತಿ ! ಬಾಲಿವುಡ್​ ನಟಿಯ ಬೇಸರ...

  ಇಂತಹ ಫಾತಿಮಾ ಇತ್ತೀಚೆಗಷ್ಟೆ ಫ್ರೆಂಡ್ ಜತೆ ಪಾರ್ಟಿಯೊಂದಕ್ಕೆ ಹೋಗಿದ್ದರಂತೆ. ಆಗ, ‘ಯುವತಿಯೊಬ್ಬಳು ತುಂಬ ಒರಟಾಗಿ ಮಾತನಾಡತೊಡಗಿದಳು. ಕೆಲವರಿಗೆ ಮದ್ಯಪಾನ ಮಾಡಿರುವುದೇ ಇನ್ನೊಬ್ಬರ ಜತೆ ಕೆಟ್ಟದಾಗಿ ವರ್ತಿಸಿ, ಜಾರಿಕೊಳ್ಳಲು ಕಾರಣವಾಗಿಬಿಡುತ್ತದೆ. ಆಕೆಯೂ ನನ್ನ ಬಳಿ ಬಂದು ನಿನ್ನ ಕಣ್ಣಿಗೆ ಲೈನರ್ ಹಾಕಬೇಕು ಎಂದು ಹಠ ಮಾಡಿ ಲೈನರ್ ಹಾಕಿದಳು. ನಂತರ ಕೂದಲು ಫ್ರೀ ಬಿಡಬೇಡ, ಜಡೆ ಕಟ್ಟುತ್ತೇನೆ ಎಂದು ಒತ್ತಾಯ ಮಾಡತೊಡಗಿದಳು. ನನ್ನ ಕೂದಲು ಹೇಗಾದರೂ ಇರಲಿ ಬಿಡು ಎಂದು ಖಡಾಖಂಡಿತವಾಗಿ ಹೇಳಿಬಿಟ್ಟೆ. ಅದಕ್ಕೆ ಆಕೆ, ನೀನು ಈ ಪಾರ್ಟಿಗೆ ಹೊಂದುವುದಿಲ್ಲ ಎಂದಳು. ಆದರೆ, ನಿನ್ನ ಸಮಾಧಾನಕ್ಕೆ ನನ್ನನ್ನೇಕೆ ಬದಲಾಗು ಎನ್ನುತ್ತಿರುವೆ? ಎಂದು ಆಕೆಗೆ ಖಾರವಾಗಿ ನುಡಿದೆ. ಈ ಘಟನೆಯಿಂದ ನನಗೆ ತುಂಬ ಬೇಸರವಾಗಿತ್ತು. ಮನೆಗೆ ಬಂದು ಸಾಕಷ್ಟು ಅತ್ತೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಫಾತಿಮಾ.

  ಇದನ್ನೂ ಓದಿ : ನಟ ದರ್ಶನ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​; ಸದ್ದಿಲ್ಲದೆ ಬಿಡುಗಡೆಗೆ ಸಜ್ಜಾದ ಕಾಟೇರ

  ಪಾರ್ಟಿಯಲ್ಲಿ ಕಿರುಕುಳ ನೀಡಿದ ಯುವತಿ ! ಬಾಲಿವುಡ್​ ನಟಿಯ ಬೇಸರ...

  ಜತೆಗೆ ಕೆಲ ಶ್ರೀಮಂತರಿಗೆ ಯಾರೊಂದಿಗೆ ಹೇಗೆ ವರ್ತಿಸಬೇಕು? ಹೇಗೆ ಮಾತನಾಡಬೇಕು? ಎಂಬುದೇ ಗೊತ್ತಿರುವುದಿಲ್ಲ ಎಂದೂ ಫಾತಿಮಾ ಹೇಳಿಕೊಂಡಿದ್ದಾರೆ.


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts