ಮುಂಬೈ: ಬಾರ್ಬಡೋಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ ಟೀಮ್ ಇಂಡಿಯಾ 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಟ್ರೋಫಿಯನ್ನು ತಂದುಕೊಟ್ಟಿತು. ಭಾರತದ ಗೆಲುವಿಗೆ ಇಡೀ ವಿಶ್ವವೇ ಕೊಂಡಾಡಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು ಕೂಡ ಭಾರತೀಯ ಕ್ರಿಕೆಟಿಗರ ಸಾಧನೆಯನ್ನು ಸಂಭ್ರಮಿಸಿತ್ತು. ವಿಶ್ವಕಪ್ ಟೂರ್ನಿಯ ಆರಂಭದ ಪಂದ್ಯದಿಂದ ಅಂತಿಮ ಘಟ್ಟವಾದ ಫೈನಲ್ ಮ್ಯಾಚ್ವರೆಗೆ ತಮ್ಮ ಕೆಲಸಗಳನ್ನು ಬಿಟ್ಟು, ಟಿವಿ ಮುಂದೆ ಕುಳಿತು ಪಂದ್ಯ ವೀಕ್ಷಿಸಿದ್ದ ಭಾರತೀಯರ ಸಂಭ್ರಮ ಅಂದು ಮುಗಿಲು ಮುಟ್ಟಿತ್ತು. ಕ್ರಿಕೆಟ್ ಆಟಕ್ಕೂ ಇಷ್ಟೊಂದು ಜನಪ್ರಿಯತೆ ಇದೆ ಎಂಬುದು ಗೊತ್ತಾಗಿದ್ದೇ ಅಭಿಮಾನಿಗಳ ಸಡಗರ ಕಂಡಾಗ! ಅದರಲ್ಲೂ ಮುಂಬೈನಲ್ಲಿ ಸೇರಿದ್ದ ಜನಸಾಗರವನ್ನು ನೋಡಿದ ಮೇಲಂತೂ ಟೀಮ್ ಇಂಡಿಯಾ ಮೇಲಿನ ಕ್ರೇಜ್ ದುಪ್ಪಟಾಯಿತು.
ಇದನ್ನೂ ಓದಿ: ನೇಪಾಳದಲ್ಲಿ ಟೇಕಾಫ್ ವೇಳೆ ವಿಮಾನ ಪತನ: 18 ಮಂದಿ ದುರಂತ ಸಾವು, ಪೈಲಟ್ ಬಚಾವ್
ಸಾಮಾನ್ಯವಾಗಿ ವಿದೇಶಿ ನೆಲದವರಿಗೆ ಪ್ರಸ್ತುತ ಟೀಮ್ ಇಂಡಿಯಾ ಕ್ಯಾಪ್ಟನ್ ಮತ್ತು ಉಪನಾಯಕ ಯಾರೆಂಬುದು ಸ್ಪಷ್ಟವಾಗಿ ಗೊತ್ತಿರುವುದಿಲ್ಲ. ಕಾರಣ ಅವರಲ್ಲಿ ಕೆಲವರಿಗೆ ಕ್ರಿಕೆಟ್ ಇಷ್ಟವಿರುವುದಿಲ್ಲ ಅಥವಾ ಇತ್ತೀಚಿನ ಬೆಳವಣಿಗೆ ಬಗ್ಗೆ ಅವರಿಗೆ ಅರಿವಿರುವುದಿಲ್ಲ. ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ಪ್ರಯತ್ನ ಕೂಡ ಮಾಡಿರುವುದಿಲ್ಲ. ಆದ್ರೆ, ಭಾರತೀಯರಿಗೆ ತಮ್ಮ ತಂಡದ ಕ್ಯಾಪ್ಟನ್ ಯಾರೆಂಬುದು ನಿಖರವಾಗಿ ಗೊತ್ತಿರುತ್ತದೆ. ಟಿ20 ತಂಡಕ್ಕೆ, ಏಕದಿನ ಟೀಮ್ಗೆ ಯಾರು ನಾಯಕನ ಜವಾಬ್ದಾರಿ ಹೊತ್ತಿದ್ದಾರೆ ಎಂಬುದರ ಕುರಿತು ಮಾಹಿತಿ ಇರುತ್ತದೆ. ಕೇವಲ ಕೆಲವೇ ಕೆಲವರಿಗೆ ಮಾತ್ರ ತಿಳಿದಿರುವುದಿಲ್ಲ. ಆದ್ರೆ, ಬಾಲಿವುಡ್ ಸ್ಟಾರ್ ನಟರೊಬ್ಬರಿಗೆ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ಯಾರೆಂದು ಇಂದಿಗೂ ಸರಿಯಾಗಿ ಗೊತ್ತಿಲ್ಲ ಎಂಬುದೇ ಸದ್ಯ ಅನೇಕರ ಹುಬ್ಬೇರಿಸಿದೆ.
ಇತ್ತೀಚೆಗಷ್ಟೇ ತಾನು ಹಣಕ್ಕಾಗಿಯೇ ಸಿನಿಮಾ ಮಾಡಿದ್ದೇ ಹೊರತು ಪಾತ್ರಕ್ಕಾಗಿ ಅಲ್ಲ ಎಂದು ಬಹಿರಂಗವಾಗಿ ಹೇಳಿಕೆ ಕೊಡುವ ಮೂಲಕ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಾಲಿವುಡ್ ಹಿರಿಯ ನಟ ನವಾಜುದ್ದೀನ್ ಸಿದ್ದಿಕಿ, ಈಗ ಈ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ನಟನಿಗೆ ಪ್ರಸ್ತುತ ಟೀಮ್ ಇಂಡಿಯಾ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಅದಕ್ಕೆ ಅವರು ವಿರಾಟ್ ಕೊಹ್ಲಿ ಎಂದು ಉತ್ತರಿಸಿದ್ದಾರೆ. ಇದರಿಂದ ಒಂದು ನಿಮಿಷ ಗಾಬರಿಗೊಂಡ ಆ್ಯಂಕರ್, ಅಲ್ಲ ನಿಮ್ಮ ಉತ್ತರ ತಪ್ಪಿದೆ ಎಂದಿದ್ದಾರೆ.
ಇದನ್ನೂ ಓದಿ: ಇದನ್ನು ಗಮನಿಸಿದ್ರೆ ರಾಜಕೀಯ ಸೇಡು ತೀರಿಸಿಕೊಳ್ಳಲು ಮೋದಿ ಸರ್ಕಾರ ನಿರ್ಧರಿಸಿದಂತಿದೆ: ಸಿಎಂ ಗರಂ
ತಕ್ಷಣವೇ ಸ್ಪಷ್ಟನೆ ಕೊಟ್ಟ ನವಾಜುದ್ದೀನ್ ಸಿದ್ದಿಕಿ, ನಾನು ಕ್ರಿಕೆಟ್ನ ಹೆಚ್ಚು ಫಾಲೋ ಮಾಡೋದಿಲ್ಲ. ಹಾಗಾಗಿ ನನಗೆ ಪ್ರಸ್ತುತ ಭಾರತ ತಂಡದ ನಾಯಕ ಯಾರೆಂಬುದು ಗೊತ್ತಿಲ್ಲ. ವಿಶ್ವಕಪ್ ಗೆದ್ದ ಕ್ಯಾಪ್ಟನ್ ಯಾರೆಂದು ತಿಳಿದಿಲ್ಲ. ನಾನು ಅಂದುಕೊಂಡೆ ವಿರಾಟ್ ಕೊಹ್ಲಿ ಇರಬಹುದು ಎಂದು. ಕ್ಷಮೆ ಇರಲಿ ನನ್ನ ಉತ್ತರಕ್ಕೆ ಎಂದು ನಗು ನಗುತ್ತಲೇ ಹೇಳಿದ್ದಾರೆ. ಸದ್ಯ ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಐಸಿಸಿಗೆ ಗಾಳ ಹಾಕಿದ ಪಿಸಿಬಿ! ತಮ್ಮ ನೆಲಕ್ಕೆ ಟೀಮ್ ಇಂಡಿಯಾ ಕರೆಸಿಕೊಳ್ಳಲು ಸಖತ್ ಪ್ಲಾನ್ ಮಾಡಿದೆ ಪಾಕ್