ಹೊಸದುರ್ಗದಲ್ಲಿ ಬಿಎಂಎಸ್ ಪ್ರತಿಭಟನೆ

New Project (3)
Published on

ಕಾಸರಗೋಡು: ತಲೆಹೊರೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವಂತೆ ಹಾಗೂ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟು ಹೆಡ್‌ಲೋಡ್ ಆ್ಯಂಡ್ ಜನರಲ್ ಮಜ್ದೂರ್ ಸಂಘ(ಬಿಎಂಎಸ್) ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕೇರಳ ಹೆಡ್‌ಲೋಡ್ ವರ್ಕರ್ಸ್ ವೆಲ್ಫೇರ್ ಬೋರ್ಡ್ ಕಾಸರಗೋಡು ಹಾಗೂ ಹೊಸದುರ್ಗ ಕಚೇರಿ ಎದುರು ಧರಣಿ ನಡೆಸಲಾಯಿತು.

ತಲೆಹೊರೆ ಕಾರ್ಮಿಕರ ಕನಿಷ್ಠ ಪಿಂಚಣಿ 5000 ರೂ. ಮಾಡಬೇಕು. ಅನಧಿಕೃತವಾಗಿ ಕಾರ್ಡ್ ನೀಡುವುದನ್ನು ಕೊನೆಗೊಳಿಸಬೇಕು. ಎನ್‌ಎಫ್‌ಎಸ್‌ಎ ಕಾರ್ಮಿಕರ ಹೆಚ್ಚಳಗೊಂಡ ವೇತನ ಆರಂಭದಿಂದಲೇ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಬಿಎಂಎಸ್ ರಾಜ್ಯ ಸಮಿತಿ ಸದಸ್ಯ ವಿ.ವಿ.ಬಾಲಕೃಷ್ಣನ್ ಉದ್ಘಾಟಿಸಿದರು. ಸಂಘದ ಜಿಲ್ಲಾ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಉಪಸ್ಥಿತರಿದ್ದರು. ಮುಳ್ಳೇರಿಯ ವಲಯ ಕಾರ್ಯದರ್ಶಿ ಸದಾಶಿವ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿಗಳಾದ ಹರೀಶ್ ಕುದ್ರೆಪ್ಪಾಡಿ, ಗುರುದಾಸ್ ಚೆನಕ್ಕೋಡ್, ಬಿಎಂಎಸ್ ವಲಯ ಪದಾಧಿಕಾರಿಗಳಾದ ರಿಜೇಶ್ ಜೆ.ಪಿ.ನಗರ, ಶ್ರೀಧರ ಚೆನಕ್ಕೋಡ್, ಗೋಪಾಲಕೃಷ್ಣ ವಾಣಿನಗರ, ಯೂನಿಯನ್ ಪದಾಧಿಕಾರಿಗಳಾದ ಸೂರ್ಯನಾರಾಯಣ ಪರಂಕಿಲ, ನಾರಾಯಣ ಪರವನಡ್ಕ, ದಿಲೀಪ್ ಡಿಜೋಸ್, ಲೋಕೇಶ್ ಮೀಪುಗುರಿ ನೇತೃತ್ವ ವಹಿಸಿದ್ದರು. ಮಧೂರು ವಲಯ ಕಾರ್ಯದರ್ಶಿ ಬಾಬು ಮೊನ್ ಸ್ವಾಗತಿಸಿದರು. ಬದಿಯಡ್ಕ ವಲಯ ಕಾರ್ಯದರ್ಶಿ ರವಿ ಏತಡ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net