ಕಾಂಗ್ರೆಸ್​​ ನಾಯಕರು ದೇಶಭಕ್ತಿಯನ್ನು ಆರ್​ಎಸ್​​ಎಸ್​​ನಿಂದ ಕಲಿಯಲಿ!

RSS
Published on

ಬೆಂಗಳೂರು: ಚುನಾವಣೆಯಲ್ಲಿ ಸ್ಪಷ್ಟ ಬಹಮತದಿಂದ ಗೆದ್ದು, ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಿದೆ. ನೂತನ ಸಚಿವ ಸಂಪುಟ ರಚನೆಯಾಗಿದ್ದು, ಮಂತ್ರಿಗಳಿಗೆ ಖಾತೆ ಹಂಚಿಕೆಯಾಗಿದೆ. ಈ ನಡುವೆ ರಾಜಕೀಯ ನಾಯಕರ ನಡುವೆ ಮತ್ತೆ ಆರೋಪ-ಪ್ರತ್ಯಾರೋಪಗಳ ಕಾವು ಏರುತ್ತಿವೆ. 'ಟ್ವೀಟ್ ವಾರ್' ಕೂಡ ಆರಂಭವಾಗಿದೆ. ಇದೀಗ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದ್ದು, ಕಾಂಗ್ರೆಸ್​​ ನಾಯಕರಿಗೆ ಅತೀವವಾಗಿ ಕೊರತೆ ಇರುವ ದೇಶಭಕ್ತಿಯನ್ನು ಆರ್​ಎಸ್​ಎಸ್​ನಿಂದ ಕಲಿಯಲಿ ಎಂದು ಹೇಳಿದೆ.

ಬಜರಂಗದಳ ಸಂಘಟನೆ ನಿಷೇಧದ ವಿಚಾರವಾಗಿ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಮಾತನಾಡುತ್ತಾ, 'ಒಂದು ಸಂಘಟನೆ ನಿಷೇಧ ಮಾಡಿದರೆ ಮತ್ತೊಂದು ಸಂಘಟನೆ ಹುಟ್ಟಿಕೊಳ್ಳುತ್ತದೆ. ಬದಲಾಗಿ ಆರ್​ಎಸ್​ಎಸ್​ನಲ್ಲಿರುವ ದಲಿತರು, ಶೂದ್ರರು, ಕೆಳವರ್ಗದವರನ್ನು ಸೆಳೆಯಬೇಕಿದೆ. ಅವರಿಗೆ ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆ ತಿಳಿ ಹೇಳುವ ಪ್ರಯತ್ನ ಮಾಡುತ್ತೇವೆ. ಆರ್​ಎಸ್​​ಎಸ್​​ನಲ್ಲಿರುವ ದಲಿತರನ್ನು ಸೆಳೆಯುವ ಮೂಲಕ ಅಹಿಂದಾಗೆ ಮತ್ತಷ್ಟು ಶಕ್ತಿ ತುಂಬಬೇಕಿದೆ' ಎಂದು ಹೇಳಿದ್ದರು.

ಈ ಬಗ್ಗೆ ಬಿಜೆಪಿ ಟ್ವೀಟ್ ಮಾಡುತ್ತಾ, ಆರ್​ಎಸ್​​ಎಸ್​ನ್ನು ನೆನೆಯದಿದ್ದರೆ ಕಾಂಗ್ರೆಸ್ ನಾಯಕರಿಗೆ ಜೀರ್ಣವಾಗುವುದಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಇಲ್ಲಸಲ್ಲದ್ದನ್ನು ಊಹಿಸಿಕೊಂಡು ಮಾತನಾಡುವುದನ್ನು ಬಿಟ್ಟು, ಕಾಂಗ್ರೆಸಿನ ನಾಯಕರಿಗೆ ಅತೀವವಾಗಿ ಕೊರತೆ ಇರುವ ದೇಶಭಕ್ತಿಯನ್ನು ಆರ್​ಎಸ್​ಎಸ್​ನಿಂದ ಕಲಿಯಲಿ ಎಂದು ಕಿಡಿಕಾರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net