

ಮಂಗಳೂರು: ಬಿಜೆಪಿ ಹಿರಿಯ ಮುಖಂಡ, ಪುತ್ತೂರು ಮಾಜಿ ಶಾಸಕ ಉರಿಮಜಲು ರಾಮ್ ಭಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ ಅವರನ್ನು ಇಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಿಜೆಪಿಯ ಭೀಷ್ಮ ಎಂದೇ ಗುರುತಿಸಿ ಕೊಂಡಿದ್ದ 92 ವರ್ಷದ ರಾಮ್ ಭಟ್, ರಾಜ್ಯದಲ್ಲಿ ಆರಂಭಿಕ ಇಬ್ಬರು ಬಿಜೆಪಿ ಶಾಸಕರ ಪೈಕಿ ಒಬ್ಬರಾಗಿದ್ದಾರೆ. ಅವರು ಪುತ್ತೂರು ಶಾಸಕರಾಗಿ ಆಯ್ಕೆ ಆಗಿದ್ದರು. ಅಂದು ರಾಜ್ಯದಲ್ಲಿ ಯಡಿಯೂರಪ್ಪ ಬಿಟ್ಟರೆ ಬಿಜೆಪಿಯಿಂದ ಶಾಸಕರಾಗಿದ್ದವರ ಪೈಕಿ ಇನ್ನೊಬ್ಬರೆಂದರೆ ರಾಮ್ ಭಟ್.
ಆದರೆ 2008ರಲ್ಲಿ ಬಿಜೆಪಿ ಜತೆ ಮುನಿಸಿಕೊಂಡಿದ್ದ ರಾಮ್ ಭಟ್ ಪಕ್ಷದಿಂದ ದೂರ ಉಳಿದಿದ್ದರು. ಮಾತ್ರವಲ್ಲ ಶಕುಂತಲಾ ಶೆಟ್ಟಿನ ಅವರನ್ನು ಬಿಜೆಪಿ ವಿರುದ್ಧ ಬಂಡಾಯವಾಗಿ ಚುನಾವಣಾ ಕಣಕ್ಕಿಳಿಸಿದ್ದರು. ನಂತರ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ರಾಮ್ ಭಟ್ ಮತ್ತೆ ಬಿಜೆಪಿ ಬೆಂಬಲಿಸಿದ್ದರು.