

ಮುಂಬೈ: ಶಾಲಾ ಪಠ್ಯಕ್ರಮದಿಂದ ವೀರ್ ಸಾವರ್ಕರ್ ಮತ್ತು ಕೆಬಿ ಹೆಡ್ಗೆವಾರ್ರ ಅಧ್ಯಾಯಗಳನ್ನು ತೆಗೆದು ಹಾಕುವ ಕ್ರಮವನ್ನು ಉಲ್ಲೇಖಿಸಿ, ಮಹಾರಾಷ್ಟ್ರದ ಬಿಜೆಪಿಯು ತನ್ನ ಮಾಜಿ ಮಿತ್ರ ಪಕ್ಷ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ: ಬಿಯರ್ ಬಾಟಲ್ನಿಂದ ಕೈ ಕೊಯ್ದುಕೊಂಡು ಪ್ರಭಾಸ್ಗೆ ಜೈಕಾರ: ಅಭಿಮಾನಿಯ ಅತಿರೇಕದ ವರ್ತನೆ, ವಿಡಿಯೋ ವೈರಲ್
ಶಿವಸೇನಾ ನಾಯಕ ಠಾಕ್ರೆ ಸಾವರ್ಕರ್ ವಿಚಾರವಾಗಿ ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದ್ದರು. ಆದರೆ ಸದ್ಯ ಕರ್ನಾಟಕದ ಸರ್ಕಾರ ಸಾವರ್ಕರ್ ಹಾಗೂ ಹೆಡ್ಗೆವಾರ್ರ ಅಧ್ಯಾಯ ತೆಗೆದು ಹಾಕಲು ಮುಂದಾಗಿದ್ದರೂ ಠಾಕ್ರೆ ಸುಮ್ಮನಿದ್ದಾರೆ ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಮಹಾರಾಷ್ಟ್ರ ಡಿಸಿಎಂ, ದಕ್ಷಿಣ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಶಾಲಾ ಪಠ್ಯಪುಸ್ತಕಗಳಲ್ಲಿ ಪರಿಷ್ಕರಣೆಗೆ ಮುಂದಾಗಿದೆ. ಕಾಂಗ್ರೆಸ್ ಸಾವರ್ಕರ್ ಮತ್ತು ಹೆಡ್ಗೆವಾರ್ ಅವರನ್ನು ಪಠ್ಯಪುಸ್ತಕಗಳಿಂದ ತೆಗೆದುಹಾಕಬಹುದು ಆದರೆ ಜನರ ಹೃದಯ ಮತ್ತು ಮನಸ್ಸಿನಿಂದ ಅಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ಸರ್ಕಾರದ ನಡೆಯನ್ನು ಅಲ್ಪಸಂಖ್ಯಾತರ ಓಲೈಕೆ ಎಂದು ಬಣ್ಣಿಸಿದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಈ ಕ್ರಮದ ಬಗ್ಗೆ ಠಾಕ್ರೆಯವರ ಅಭಿಪ್ರಾಯವನ್ನು ಕೇಳಿದ್ದು, ಅಧಿಕಾರಕ್ಕಾಗಿ ಸಿದ್ಧಾಂತಗಳ ಮೇಲೆ ರಾಜಿ ಮಾಡಿಕೊಂಡಿದ್ದೀರಾ ಎಂದು ಪ್ರಶ್ನಸಿದ್ದಾರೆ.
ಇದನ್ನೂ ಓದಿ: ‘ಇಲ್ಲಿದೆ ಎಫ್.ಸಿ.ಐ ಕಮಿಟ್‌ಮೆಂಟ್ ಪತ್ರ’; ಸಿ.ಟಿ. ರವಿ ಸವಾಲಿಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ
ಠಾಕ್ರೆಯವರ ಶಿವಸೇನೆ(ಯುಬಿಟಿ) ಮಹಾರಾಷ್ಟ್ರದ ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿಯಲ್ಲಿ ಪಾಲುದಾರ ಪಕ್ಷವಾಗಿದ್ದು, ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ) ಜತೆ ಮೈತ್ರಿ ಮಾಡಿಕೊಂಡಿದೆ. ಮಾಜಿ ಮಿತ್ರ ಪಕ್ಷವು ಹಿಂದುತ್ವ ಸಿದ್ಧಾಂತದಿಂದ ದೂರ ಸರಿಯುತ್ತಿದೆ ಎಂದು ಬಿಜೆಪಿ ಆರೋಪಿಸತ್ತಲೇ ಬಂದಿದೆ.(ಏಜೆನ್ಸೀಸ್)