ಕಾಂಗ್ರೆಸ್ ಬಿಟ್ಟು BJP ಸೇರಿದವರನ್ನು ಗಂಗಾಜಲ, ಗೋಮೂತ್ರ ಸಿಂಪಡಿಸಿ ‘ಶುದ್ಧೀಕರಣ’ ಮಾಡಿದ ಬಿಜೆಪಿ ಶಾಸಕ

Rajasthan News
Published on

ಜೈಪುರ : ಕಾಂಗ್ರೆಸ್ ತೊರೆದು  ಬಿಜೆಪಿ ( BJP ) ಸೇರಲು ಬಂದಿರುವ ನಾಯಕರನ್ನು ಬಿಜೆಪಿ ಶಾಸಕ  ಗಂಗಾಜಲ ಮತ್ತು ಗೋಮೂತ್ರ ಸಿಂಪಡಿಸಿ ಶುದ್ಧೀಕರಣ ಮಾಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.  

ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಮಾಜಿ ಮೇಯರ್‌ ಮುನೇಶ್‌ ಗುರ್ಜಾರ್‌ ಅವರ ಜಾಗಕ್ಕೆ ಬಿಜೆಪಿ ಕುಸುಮ್‌ ಯಾದವ್‌ ಅವರನ್ನು ಆಯ್ಕೆ ಮಾಡಲಾಗಿದೆ. ಈ ವೇಳೆ ಅವರಿಗೆ 7 ಕಾಂಗ್ರೆಸ್‌ ಮತ್ತು ಒಬ್ಬ ಸ್ವತಂತ್ರ ಸದಸ್ಯರ ಬೆಂಬಲ ದೊರೆತು, ಅವರೆಲ್ಲ ಬಿಜೆಪಿಗೆ ಸೇರ್ಪಡೆಯಾದರು

8 ಜೈಪುರ ನಗರಪಾಲಿಕೆ ಸದಸ್ಯರನ್ನು ರಾಜಸ್ಥಾನ ಬಿಜೆಪಿ ಶಾಸಕ ಬಾಲಮುಕುಂದ ಆಚಾರ್ಯ ಗಂಗಾಜಲ ಮತ್ತು ಗೋಮೂತ್ರ ಸಿಂಪಡಿಸಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಜೊತೆಗೆ ಭ್ರಷ್ಟಾಚಾರದಿಂದ ‘ಅಶುದ್ಧಗೊಂಡಿದೆ’ ಎಂದು ಆರೋಪ ಹೊರಿಸಿ ಜೈಪುರ ಮಹಾನಗರ ಪಾಲಿಕೆಯನ್ನೂ ಗೋಮೂತ್ರದಿಂದ ಶುದ್ಧೀಕರಿಸಲಾಗಿದೆ.

ಪಾಲಿಕೆಯ ಕಚೇರಿಯನ್ನು ಮಂತ್ರಘೋಷದೊಂದಿಗೆ ಗಂಗಾಜಲದಿಂದ ಶುದ್ಧೀಕರಿಸಲಾಯಿತು. ಅಂತೆಯೇ ಬಿಜೆಪಿ ಸೇರಿದ 8 ಸದಸ್ಯರ ಮೇಲೆ ಗೋಮುತ್ರ ಸಿಂಪಡಿಸಿಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net