ಸುಬ್ರಹ್ಮಣ್ಯ: ಪಂಜದಲ್ಲಿ ಬಿಜೆಪಿ ಹಾಗೂ ಪರಿವಾರ ಸಂಘಟನೆಯ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ನಾಯಕರು ನಿರಂತರ ದಬ್ಬಾಳಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ ಸುಳ್ಯ ಮಂಡಲ ಬಿಜೆಪಿ ವತಿಯಿಂದ ಪಂಜ ಪೇಟೆಯಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಉತ್ತಮ ಸ್ಥಾನದಲ್ಲಿರುವವರು ಈ ರೀತಿಯ ದಬ್ಬಾಳಿಕೆ ಕೆಲಸ ಮಾಡುತ್ತಿರುವುದು ಸರಿಯಲ್ಲ. ಜೀವನ ನಿರ್ವಹಣೆಗೆ ವ್ಯಾಪಾರ ನಡೆಸುತ್ತಿರುವ ವ್ಯಕ್ತಿಯ ಮೇಲೆ ಸವಾರಿ ಮಾಡುತ್ತಿರುವುದು ಖಂಡನೀಯ. ಪಂಜದ ಎಲ್ಲ ಜನತೆ ಎಚ್ಚರಿಕೆಯಿಂದ ಇದ್ದು, ಇಂತಹ ಘಟನೆ ಮರು ಕಳುಹಿಸಲು ಬಿಡಬಾರದು ಎಂದು ಹೇಳಿದರು.
ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, ಸಣ್ಣ-ಪುಟ್ಟ ವಿಚಾರಗಳನ್ನು ದೊಡ್ಡದು ಮಾಡುತ್ತಿರುವ ಕಾಂಗ್ರೆಸ್‌ನ ವಿರುದ್ಧ ನಾವು ಮುಂದಿನ ದಿನಗಳಲ್ಲಿ ನಮ್ಮಲ್ಲಿರುವ ಅಂಕಿ-ಅಂಶಗಳನ್ನು ಇಟ್ಟುಕೊಂಡು ನ್ಯಾಯಯುತ ಹೋರಾಟ ನಡೆಸುತ್ತೇವೆ. ಬಿಜೆಪಿ ಹಾಗೂ ಪರಿವಾರ ಸಂಘಟನೆ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸಿದಲ್ಲಿ ಮುಂದೆ ತೀವ್ರ ಹೋರಾಟ ನಡೆಸುತ್ತೇವೆ ಎಂದರು.
ಪ್ರಮುಖರಾದ ಮುರಳೀಕೃಷ್ಣ ಹಸಂತಡ್ಕ, ರಾಕೇಶ್ ರೈ ಕೆಡೆಂಜಿ, ಗಣೇಶ್ ಉದನಡ್ಕ, ಅಜಿತ್ ರಾವ್ ಕಿಲಂಗೋಡಿ, ಮೋಹನ್ ದಾಸ್ ಬಲ್ಕಾಡಿ, ಪ್ರಮೋದ್ ರೈ ನಂದಗುರಿ, ಅನುಪ್ ಬಿಳಿಮಲೆ, ವಿನಯ ಕುಮಾರ್ ಕಂದಡ್ಕ, ಶಿವರಾಮ ರೈ, ಕಿರಣ್ ಎನ್., ಚಂದ್ರಶೇಖರ ಶಾಸ್ತ್ರಿ, ರಮೇಶ್ ಕುದ್ವ, ಶರತ್ ಕುದ್ವ, ನಿತ್ಯಾನಂದ ಮೆಲ್ಮನೆ, ನಾರಾಯಣ ಕೃಷ್ಣನಗರ, ದಯಾನಂದ ಮೇಲ್ಮನೆ, ಜಯಂತ್ ಬರೆಮೇಲು, ಕೃಷ್ಣ ಶೆಟ್ಟಿ ಕಡಬ, ಹರೀಶ್ ಕಂಜಿಪಿಲಿ ಸೇರಿದಂತೆ ಬಿಜೆಪಿ ನಾಯಕರು ಕರ್ಯಕರ್ತರು, ಸಂಘ ಪರಿವಾರದ ಕಾರ್ಯಕರ್ತರು ಭಾಗವಹಿಸಿದ್ದರು.