ಮಾಟ-ಮಂತ್ರದ ಬೆದರಿಕೆ; ನಾನು ಶಿವನ ಭಕ್ತ, ಈ ತಂತ್ರಗಳಿಗೆ ಹೆದರಲ್ಲ ಎಂದ ಬಿಜೆಪಿ ಶಾಸಕ

Untitled design - 2023-10-01T194843.937
Published on

ನವದೆಹಲಿ: ತನ್ನ ಛಾಯಚಿತ್ರವನ್ನು ಬುಟ್ಟಿಯೊಳಗೆ ಇಟ್ಟು ರಸ್ತೆಯ ಮಧ್ಯೆದಲ್ಲಿ ಮಾಟ ಮಂತ್ರ ಮಾಡಿರುವ ಫೋಟೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡ ಬಿಜೆಪಿ ಶಾಸಕ ಲೋಕೇಂದ್ರ ಪ್ರತಾಪ್ ಸಿಂಗ್, "ನಾನು ಶಿವನ ಭಕ್ತ, ಈ ತಂತ್ರಗಳಿಗೆ ಹೆದರುವುದಿಲ್ಲ" ಎಂದು ಹೇಳಿದ್ದಾರೆ.

ಮಾಟ ಮಂತ್ರದ ಮೂಲಕ ನನ್ನನ್ನು ಕೆಲವರು ಗುರಿಯಾಗಿಸಿಕೊಂಡಿದ್ದಾರೆ ಎಂದ ಉತ್ತರಪ್ರದೇಶದ ಮೊಹಮ್ಮದಿಯ ಬಿಜೆಪಿ ಶಾಸಕರು, ಈ ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಬುಟ್ಟಿಯೊಳಗೆ ಕೆಂಪು ವಸ್ತ್ರದ ಮೇಲೆ ಶಾಸಕನ ಫೋಟೋ ಇರಿಸಿ, ವಾಮಾಚಾರದ ವಸ್ತುಗಳನ್ನು ಬಳಕೆ ಮಾಡಿರುವುದು ಛಾಯಚಿತ್ರದಲ್ಲಿ ಕಾಣಬಹುದಾಗಿದೆ.

ಈ ಬಗ್ಗೆ ಮಾತನಾಡಿದ ಲೋಕೇಂದ್ರ ಪ್ರತಾಪ್ ಸಿಂಗ್, "ನಾನು ಶಿವನ ಭಕ್ತನಾಗಿರುವುದರಿಂದ ಈ ತಂತ್ರಗಳಿಗೆ ಹೆದರುವುದಿಲ್ಲ. ವೈಜ್ಞಾನಿಕ ಪ್ರಗತಿಯು ಜನರು ಚಂದ್ರನನ್ನು ತಲುಪಲು ಅನುವು ಮಾಡಿಕೊಟ್ಟಿರುವ ಯುಗದಲ್ಲಿ, ಇಂತಹ ಅಭ್ಯಾಸಗಳು ಮುಂದುವರಿದಿವೆ. ನಾವು ಚಂದ್ರನನ್ನು ತಲುಪಿದ್ದೇವೆ, ಇನ್ನೂ ಕೆಲವರು ವಾಮಾಚಾರವನ್ನು ನಂಬುತ್ತಾರೆ. ದೇವರು ಅವರಿಗೆ ಬುದ್ಧಿಯನ್ನು ನೀಡಲಿ" ಎಂದು ಬರದು ಪೋಸ್ಟ್​ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net