ಸದ್ಯದಲ್ಲೇ ಬಿಜೆಪಿಯ ಮತ್ತೊಂದು ವಿಕೆಟ್ ಪತನ; ಮೂರನೇ ಪಟ್ಟಿ ಬಿಡುಗಡೆ ಬೆನ್ನಿಗೇ ಆಕಾಂಕ್ಷಿಯ ಅಸಮಾಧಾನ

BJP Lotus
Published on

ಕೊಪ್ಪಳ: ಬಿಜೆಪಿ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದಾಗ ಸಂಭವಿಸಿದ್ದ ಬೆಳವಣಿಗೆ ಮೂರನೇ ಪಟ್ಟಿ ಬಿಡುಗಡೆ ಸಂದರ್ಭದಲ್ಲೂ ಉಂಟಾಗಿದ್ದು, ಪಕ್ಷದ ಇನ್ನೊಬ್ಬ ನಾಯಕ ಸದ್ಯದಲ್ಲೇ ರಾಜೀನಾಮೆ ನೀಡುವ ನಿರ್ಧಾರ ಘೋಷಿಸಿದ್ದಾರೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್​ನ ಪ್ರಬಲ ಆಕಾಂಕ್ಷಿ ಆಗಿರುವ ಸಿ.ವಿ.ಚಂದ್ರಶೇಖರ್​, ಇದೀಗ ಟಿಕೆಟ್ ಸಿಗದ್ದರಿಂದ ಬೇಸರಗೊಂಡು ಪಕ್ಷಕ್ಕೆ ರಾಜೀನಾಮೆ ನೀಡಲಿರುವುದಾಗಿ ಹೇಳಿದ್ದಾರೆ. ಸಂಸದ ಕರಡಿ ಸಂಗಣ್ಣನ ಸೊಸೆ ಮಂಜುಳಾ ಅಮರೇಶ್ ಕರಡಿಗೆ ಈ ಕ್ಷೇತ್ರದ ಟಿಕೆಟ್ ಸಿಕ್ಕಿದೆ.

ತಾನು ನಿರೀಕ್ಷೆ ಮಾಡಿದ್ದ ಟಿಕೆಟ್ ತಪ್ಪಿ ಹೋಗಿದ್ದರಿಂದ ತೀವ್ರ ಮನನೊಂದಿರುವ ಚಂದ್ರಶೇಖರ್, ಪಕ್ಷಕ್ಕೆ ರಾಜೀನಾಮೆ ನೀಡಲು ಬೆಂಗಳೂರಿಗೆ ಹೊರಟಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದರೂ ಈ ಸಲದ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದಿರುವ ಅವರು, ರಾಜೀನಾಮೆ ನೀಡಿದ ಬಳಿಕ ಮುಂದಿನ ತೀರ್ಮಾನ ತಿಳಿಸುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net