ವಿಪಕ್ಷ ನಾಯಕರ ಆಯ್ಕೆ: ರಾಜ್ಯದ ಮತ್ತೊಂದು ಪ್ರಬಲ ಸಮುದಾಯಕ್ಕೆ ಮಹತ್ವ ಕೊಟ್ಟ ಬಿಜೆಪಿ

BJP OL
Published on

ಬೆಂಗಳೂರು: ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಕೈಗೊಂಡ ತಂತ್ರವನ್ನೇ ವಿಪಕ್ಷ ನಾಯಕರ ಆಯ್ಕೆಯಲ್ಲೂ ಬಿಜೆಪಿ ಪ್ರಯೋಗಿಸಿದ್ದು, ರಾಜ್ಯದ ಮತ್ತೊಂದು ಪ್ರಬಲ ಸಮುದಾಯಕ್ಕೆ ಭಾಜಪ ಮಹತ್ವ ನೀಡಿದೆ. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಜಾತಿ ಮಹತ್ವದ ಪಾತ್ರ ವಹಿಸುವುದು ನಿಚ್ಚಳಗೊಂಡಿದೆ.

ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯ ರಾಜ್ಯದ ಎರಡು ಪ್ರಬಲ ಸಮುದಾಯಗಳಾಗಿದ್ದು, ಒಕ್ಕಲಿಗ ಸಮುದಾಯದ ಆರ್. ಅಶೋಕ ಅವರನ್ನು ವಿಪಕ್ಷ ನಾಯಕರಾಗಿ ಆಯ್ಕೆ ಮಾಡುವ ಮೂಲಕ ಪಕ್ಷವನ್ನು ಮತ್ತಷ್ಟು ಸಬಲಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಮುನ್ನಡೆದಿದೆ.

ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಜಾತಿ ಜನಗಣತಿ ವರದಿ ಪ್ರಕಟಗೊಂಡಿದ್ದು, ರಾಜ್ಯದಲ್ಲೂ ಜಾತಿಗಣತಿ ವರದಿ ವಿಚಾರ ಚರ್ಚೆಯಲ್ಲಿದೆ. ಮಾತ್ರವಲ್ಲ, ಮುಂದಿನ ಲೋಕಸಭೆ ಚುನಾವಣೆಗೆ ಎಲ್ಲ ಪಕ್ಷಗಳು ಜಾತಿಗೆ ಮಹತ್ವ ನೀಡುತ್ತಿದ್ದು, ಅದೇ ಹಾದಿಯಲ್ಲಿರುವ ಬಿಜೆಪಿ ಕೂಡ ರಾಜ್ಯದ ಪ್ರಬಲ ಸಮುದಾಯಕ್ಕೆ ಮಣೆ ಹಾಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net