ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮ ಶತಾಬ್ದಿ

dharmika karyakrama
ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಿತು.
Published on

ಗಂಗೊಳ್ಳಿ: ಶ್ರೀ ಸಂಸ್ಥಾನ ಕಾಶೀ ಮಠದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿ ಅಂಗವಾಗಿ ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ವ್ಯಾಸೋಪಾಸನೆ, ಸ್ತೋತ್ರ ಪಠಣ, ದೇವರಿಗೆ 108 ಪವಮಾನ ಕಲಶಾಭಿಷೇಕ, ಪಾರಾಯಣ, ಭಜನೆ ಮಹಾಪೂಜೆ ನಡೆಯಿತು. ದೇವಳದ ತಾಂತ್ರಿಕ ಜಿ.ರಾಘವೇಂದ್ರ ಆಚಾರ್ಯ, ಪ್ರಧಾನ ಅರ್ಚಕ ಜಿ.ಮೋಹನದಾಸ ಭಟ್ ಮತ್ತು ಜಿ.ಪ್ರದೀಪ್ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಿದವು. ಸಂಜೆ ಸ್ತೋತ್ರ ಪಠಣ, ರಾಜ ಬೀದಿಯಲ್ಲಿ ಶ್ರೀ ದೇವರ ಹಾಗೂ ಶ್ರೀಗುರುಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವ, ರಾತ್ರಿ ದೇವರಿಗೆ ವಸಂತ ಪೂಜೆ, ಭೋಜನ ಪ್ರಸಾದ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಸಮಾಜ ಬಾಂಧವರು, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net