ಬಂಟ್ವಾಡಿಯಲ್ಲಿ ನೆರಳು ಯೋಜನೆ ಮನೆ ಹಸ್ತಾಂತರ

mane hastantara
ಬಾಂಧವ್ಯ ಫೌಂಡೇಶನ್‌ನ ಕರ್ನಾಟಕ ನೆರಳು ಯೋಜನೆಯಡಿ ಅಮೃತಾ ಶೆಟ್ಟಿ ಅವರಿಗೆ ಮನೆ ಹಸ್ತಾಂತರಿಸಲಾಯಿತು.
Published on

ಕೋಟ: ಬಾಂಧವ್ಯ ಫೌಂಡೇಶನ್‌ನ ಕರ್ನಾಟಕ ನೆರಳು ಯೋಜನೆ ಅನ್ವಯ ಬಂಟ್ವಾಡಿ ನಿವಾಸಿ ಅಮೃತಾ ಶೆಟ್ಟಿ ಅವರಿಗೆ ಇತ್ತೀಚೆಗೆ ಮನೆ ಹಸ್ತಾಂತರಿಸಲಾಯಿತು.

ಇದೇ ವೇಳೆ ವಿದ್ಯಾರ್ಥಿನಿ ಸಂಜನಾ ಪೂಜಾರಿಗೆ 10,000ರೂ. ಶೈಕ್ಷಣಿಕ ನೆರವು ನೀಡಲಾಯಿತು. ಬಾರಕೂರು ಗರಡಿ ಫ್ರೆಂಡ್ಸ್ ಸದಸ್ಯರನ್ನು ಸನ್ಮಾನಿಸಲಾಯಿತು. ಉಡುಪಿ ಟೌನ್ ಪೊಲೀಸ್ ಠಾಣೆಯ ಎಎಸ್‌ಐ ಜಯಕರ್ ಐರೋಡಿ, ಕುಂದಾಪುರ ಠಾಣೆ ಹೆಡ್‌ಕಾನ್‌ಸ್ಟೇಬಲ್ ಮೋಹನ್ ಪೂಜಾರಿ, ರೇಷ್ಮಾ ವಾಸುದೇವ ನಾಯಕ್, ಜ್ಯೋತಿ ಸಾಮಂತ್, ಕೆ.ಸಂತೋಷ್ ನಾಯಕ್, ಪ್ರವೀಣ್ ಪೂಜಾರಿ, ಸಂತೋಷ್ ಪಡುಕರೆ ಮತ್ತಿತರು ಉಪಸ್ಥಿತರಿದ್ದರು. ಬಾಂಧವ್ಯ ಸಂಸ್ಥೆ ಮುಖ್ಯಸ್ಥ ದಿನೇಶ್ ಸ್ವಾಗತಿಸಿದರು. ಸದಸ್ಯ ಪ್ರಣುತ್ ಆರ್.ಗಾಣಿಗ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net