ಈಜು ಪ್ರಮುಖ ಜೀವರಕ್ಷಕ ಕಲೆ

swimming pool
ಪದಪ್ರದಾನ ಸಮಾರಂಭ ಹಾಗೂ ಈಜು ಉಚಿತ ತರಬೇತಿ ಕಾರ್ಯಾಗಾರವನ್ನು ಮಹಾಬಲೆಶ್ವರ ಐತಾಳ್ ಉದ್ಘಾಟಿಸಿದರು.
Published on

ಬೈಂದೂರು: ಈಜು ಜೀವರಕ್ಷಕ ಕಲೆಯಾಗಿದ್ದು, ಶರೀರಕ್ಕೂ ವ್ಯಾಯಾಮ ನೀಡುತ್ತದೆ. ಏಕಾಗ್ರತೆ ಹಾಗೂ ಹಠ ಇದ್ದರೆ ಈಜು ವೇಗವಾಗಿ ಕಲಿಯಬಹುದು ಎಂದು ಶ್ರೀ ಅಶ್ವಥನಾರಾಯಣ ಮೂಡುಗಣಪತಿ ಶಿಶುಮಂದಿರದ ಅಧ್ಯಕ್ಷ ಮಹಾಬಲೆಶ್ವರ ಐತಾಳ್ ಹೆಳಿದರು.

ಉಪ್ಪುಂದ ಫಿಶರೀಸ್ ಕಾಲನಿಯಲ್ಲಿ ಆಸರೆ ಬಳಗ ವತಿಯಿಂದ ಆಯೋಜಿಸಿದ ಪದಪ್ರದಾನ ಸಮಾರಂಭ ಹಾಗೂ ಈಜು ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಪ್ರಾಂಶುಪಾಲ ಯು.ಸೀತಾರಾಮ ಮಯ್ಯ ಈಜು ತರಬೇತಿಗೆ ಚಾಲನೆ ನೀಡಿದರು. ಆಸರೆ ಬಳಗದ ನಿಯೋಜಿತ ಅಧ್ಯಕ್ಷ ಆನಂದ ಖಾರ್ವಿಗೆ ನಿರ್ಗಮಿತ ಅಧ್ಯಕ್ಷ ವೀರಭದ್ರ ಖಾರ್ವಿ ಅಧಿಕಾರ ಹಸ್ತಾಂತರಿಸಿದರು. ನಯ್ಕನಕಟ್ಟೆ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಗಣೇಶ ಪೈ, ಧಾರ್ಮಿಕ ಮುಖಂಡ ಮಂಜಯ್ಯ ಖಾರ್ವಿ, ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ನಾಗರಾಜ ಖಾರ್ವಿ, ಕಾರ್ಯದರ್ಶಿ ನಾಗರಾಜ ಖಾರ್ವಿ, ದಾನಿ ಪ್ರಭಾವತಿ ಇದ್ದರು. ಶಿಕ್ಷಕ ಸುಧಾಕರ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net