ಗಂಗೊಳ್ಳಿಯಲ್ಲಿ ಭೀಮ ವಂದನೆ ಕಾರ್ಯಕ್ರಮ

gan-19
Published on

ಗಂಗೊಳ್ಳಿ: ಗಂಗೊಳ್ಳಿ ವಿಶ್ವನಾಥ ಯುವಕ ಮಂಡಲ ಹಾಗೂ ಇಂದುಧರ ಯುವಕ ಮಂಡಲ ಜಂಟಿ ಆಶ್ರಯದಲ್ಲಿ ಗಂಗೊಳ್ಳಿ ಶ್ರೀ ಇಂದುಧರ ದೇವಸ್ಥಾನದ ಸಭಾಂಗಣದಲ್ಲಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ಭೀಮ ವಂದನೆ ಕಾರ್ಯಕ್ರಮ ಸೋಮವಾರ ನಡೆಯಿತು.

ದೇವಸ್ಥಾನದ ಅಧ್ಯಕ್ಷ ಗುರುರಾಜ್ ಗಂಗೊಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ಶ್ರೀಧರ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಗಂಗೊಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಜಿ.ಕೆ. ಶುಭ ಹಾರೈಸಿದರು. ದೇವಸ್ಥಾನ ಅರ್ಚಕ ಕೃಷ್ಣ ಜಿ.ಟಿ. ಹಾಗೂ ಸದಸ್ಯರು ಉಪಸ್ಥಿತರಿದ್ದರು. ದೇವಸ್ಥಾನ ಕಾರ್ಯದರ್ಶಿ ವರದರಾಜ್ ಜಿ.ಟಿ. ಸ್ವಾಗತಿಸಿದರು. ಉಪಾಧ್ಯಕ್ಷ ಸುದೀಪ್ ಜಿ.ಎನ್.ವಂದಿಸಿದರು. ಅಶೋಕ್ ಎನ್.ಡಿ. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net