ಬೈಕ ಸಾವರನ ಮೇಲೆ ದಾಳಿ ನಡೆಸಿದ ಒಂದು ಕೊಂಬಿನ ಘೇಂಡಾಮೃಗ!; ಮುಂದೆನಾಯ್ತು ನೀವೇ ನೋಡಿ.. | (Rhino)

blank

ದಿಸ್ಪುರ್​​​: ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಪೊಬಿಟೋರಾ ವನ್ಯಜೀವಿ ಅಭಯಾರಣ್ಯದ ಬಳಿ ಭಾನುವಾರ(ಸೆಪ್ಟೆಂಬರ್​​ 29) ಘೇಂಡಾಮೃಗವು(Rhino) ಬೈಕ್​ ಸವಾರನನ್ನು ಬೆನ್ನಟ್ಟಿ ದಾಳಿ ನಡೆಸಿದ್ದು, ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತನನ್ನು 37 ವರ್ಷದ ಸದ್ದಾಂ ಹುಸೇನ್ ಎಂದು ಗುರುತಿಸಲಾಗಿದೆ. ಆತ ಮೃತಪಟ್ಟಟಿರುವ ಸ್ಥಳದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕಾಮ್ರೂಪ್ ಮೆಟ್ರೋಪಾಲಿಟನ್ ಜಿಲ್ಲೆಯ ನಿವಾಸಿ.

ಇದನ್ನು ಓದಿ: Viral Video | ಚಿಂದಿ ಆಯುವ ತಂದೆಯಿಂದ ಮಗನಿಗೆ ಐಫೋನ್​ ಗಿಫ್ಟ್​​; ಡ್ಯಾಡ್ ಆಫ್​ ದಿ ಇಯರ್​​ ಎಂದ ನೆಟ್ಟಿಗರು

ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ವನ್ಯಜೀವಿ ಅಭಯಾರಣ್ಯದಿಂದ ಹೊರಬಂದ ಘೇಂಡಾಮೃಗವು ಬೈಕ್​ ಸವಾರನ ಬಳಿಗೆ ಬಂದಿದೆ. ಘೇಂಡಾಮೃಗ ಹಿಂಬಾಲಿಸುತ್ತಿದ್ದಂತೆ ಆತ ಬೈಕ್​ನಿಂದ ಇಳಿದು ತೆರೆದ ಮೈದಾನಕ್ಕೆ ಓಡಿದ್ದಾನೆ. ಗಂಟೆಗೆ 55 ಕಿಲೋಮಿಟರ್​​ಗಳವರೆಗೆ ಓಡಬಲ್ಲ ಪ್ರಾಣಿ ಅವನನ್ನು ಹಿಂಬಾಲಿಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ, ಸಮೀಪದಲ್ಲಿರುವ ಜನರು ಘೇಂಡಾಮೃಗವನ್ನು ಹೆದರಿಸಲು ಕೂಗುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲೇ ಸ್ಥಳದಲ್ಲಿದ್ದ ವ್ಯಕ್ತಿ ತನ್ನ ಮೊಬೈಲ್​ನಲ್ಲಿ ದೃಶ್ಯವನ್ನು ಸೆರೆಹಿಡಿಯುವುದು ತಿಳಿಯುತ್ತದೆ.

ಆದರೆ ನಂತರ ಹುಸೇನ್ ತಲೆ ಒಡೆದ ಸ್ಥಿತಿಯಲ್ಲಿ ಹೊಲದಲ್ಲಿ ಪತ್ತೆಯಾಗಿದ್ದಾನೆ ಎನ್ನಲಾಗಿದೆ. ಘೇಂಡಾಮೃಗದ ಸುಮಾರು 2,800 ಕೆ.ಜಿ. ತೂಕವಿರುತ್ತದೆ. ಘೇಂಡಾಮೃಗವು ವನ್ಯಜೀವಿ ಅಭಯಾರಣ್ಯದಿಂದ ಹೊರಬಂದಿದೆ. ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾಗಿ ಎಎನ್​ಐ ವರದಿ ಮಾಡಿದೆ.

ಅಸ್ಸಾಂನ ರಾಜಧಾನಿ ಗುವಾಹಟಿಯ ಉಪನಗರದಲ್ಲಿರುವ ಪೊಬಿಟೋರಾ ವನ್ಯಜೀವಿ ಅಭಯಾರಣ್ಯವು ದೇಶದಲ್ಲಿ ಒಂದು ಕೊಂಬಿನ ಘೇಂಡಾಮೃಗಗಳಿಗೆ ಹೆಸರುವಾಸಿಯಾಗಿದೆ. ಈ ತಿಂಗಳ ವಿಶ್ವ ಘೇಂಡಾಮೃಗ ದಿನದಂದು ಬಿಡುಗಡೆಯಾದ ಮಾಹಿತಿಯ ಪ್ರಕಾರ, ಭಾರತದಲ್ಲಿ ಒಂದು ಕೊಂಬಿನ ಏಷ್ಯನ್ ಘೇಂಡಾಮೃಗಗಳ ಜನಸಂಖ್ಯೆಯು ಕಳೆದ ನಾಲ್ಕು ದಶಕಗಳಲ್ಲಿ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ನಾಲ್ಕು ದಶಕಗಳ ಹಿಂದೆ 1,500 ಇದ್ದ ಪ್ರಾಣಿಗಳ ಸಂಖ್ಯೆ ಈಗ 4,000ಕ್ಕೂ ಹೆಚ್ಚಿದೆ. ಮೂರು ಏಷ್ಯನ್ ಜಾತಿಗಳಲ್ಲಿ ದೊಡ್ಡದಾದ ವಯಸ್ಕ ಭಾರತೀಯ ಘೇಂಡಾಮೃಗವು ಸುಮಾರು 50 ವರ್ಷಗಳವರೆಗೆ ಬದುಕಬಲ್ಲದು.(ಏಜೆನ್ಸೀಸ್​​)

Viral Video | ಮರಿ ರಕ್ಷಣೆಗಾಗಿ ಹುಲಿ ಜತೆ ಕರಡಿ ಕಾದಾಟ; ಫೈಟ್​ನಲ್ಲಿ ಗೆದ್ದವರು ಯಾರು?

Share This Article

Curry Leaf Juice ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಯ ರಸ ಕುಡಿಯಿರಿ..ಬೊಜ್ಜು ಕಡಿಮೆಯಾಗುತ್ತದೆ..

Curry Leaf Juice : ಕರಿಬೇವಿನ ಎಲೆಗಳನ್ನು ಆಯುರ್ವೇದದಲ್ಲಿ ಔಷಧಿ ಎಂದು ಪರಿಗಣಿಸಲಾಗಿದೆ. ವಿಶೇಷವೆಂದರೆ ಇಷ್ಟೆಲ್ಲಾ…

Health Tips : ನೀವು ಮಧ್ಯರಾತ್ರಿ ಎಚ್ಚರಗೊಳ್ಳುತ್ತೀರಾ? ಆರೋಗ್ಯ ಸಮಸ್ಯೆ ಇರೋದು ಪಕ್ಕಾ…

Health Tips : ಮನುಷ್ಯನಿಗೆ ಆಹಾರ ಮತ್ತು ನೀರು ಎಷ್ಟು ಮುಖ್ಯವೋ ನಿದ್ರೆಯೂ ಅಷ್ಟೇ ಮುಖ್ಯ…

‘ಗೋಲ್ಡನ್ ಮಿಲ್ಕ್’ ಮಾಡುವ ಸರಿಯಾದ ವಿಧಾನ ಇಲ್ಲಿದೆ; ಉತ್ತಮ ಆರೋಗ್ಯಕ್ಕಾಗಿ ಈ Recipe

ಒಂದು ಚಮಚ ಅರಿಶಿನವನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಅದು ದೇಹಕ್ಕೆ ವರದಾನವಾಗಿದೆ. ಅರಿಶಿನ ಹಾಲು ಅನೇಕ…