ಬೈಕ್​ನಲ್ಲಿ ಜಾಲಿರೈಡ್​: ಬಂಧಿಸಿ ವಿಚಾರಿಸಿದ ಪೊಲೀಸರ ಮುಂದೆ ಖದೀಮರ ಅಸಲಿಯತ್ತು ಬಯಲು!

Accused Arrest
Published on

ಬೆಂಗಳೂರು: ಕದ್ದ ಬೈಕ್​ನಲ್ಲಿ ಜಾಲಿ ರೈಡ್ ಮಾಡುವಾಗ ಖದೀಮರು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ.

ಬಂಧಿತರನ್ನು ಸಂತೋಷ್ (20), ನಾಗರಾಜ್ (20) ಹಾಗೂ ದಿಲೀಪ್ (19) ಎಂದು ಗುರುತಿಸಲಾಗಿದೆ. ಆರೋಪಿಗಳು ಜುಲೈ 17ರಂದು ಕಳ್ಳತನ‌ ಮಾಡಿದ್ದರು. ಸಿಸಿಟಿವಿ ದೃಶ್ಯವನ್ನು ಆಧರಿಸಿ ಕಾರ್ಯಾಚರಣೆಗೆ ಇಳಿದ ಬೆನ್ನಲ್ಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಕದ್ದ ಬೈಕ್​ನಲ್ಲಿ ಖಾಲಿ ರಸ್ತೆಯಲ್ಲಿ ಆರೋಪಿಗಳು ಜಿಗ್​ಜಾಗ್ ರೈಡ್ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಆರೋಪಿಗಳ ಹಿಂದೆ ಬಿದ್ದಿದ್ದರು. ಅವರನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸುವಾಗ ಕಳ್ಳತನದ ಬೈಕ್ ಎಂದು ಬಾಯಿ ಬಿಟ್ಟಿದ್ದಾರೆ.

ಹೆಚ್ಚಿನ ವಿಚಾರಣೆ ವೇಳೆ ಮನೆಗಳ್ಳತನ, ಅಂಗಡಿ ಕಳವು ಸಹ ಬೆಳಕಿಗೆ ಬಂದಿದೆ. ಕಳೆದ ತಿಂಗಳು 17ರಂದು ಚಿನ್ನಕ್ಕಾಗಿ ಆಚಾರಿ ಕಬ್ಬಿಣ ಪೆಟ್ಟಿಗೆಯನ್ನು ಕದ್ದಿದ್ದರು. ಅಂಗಡಿಯ ಮಸ್ಕಟ್ ಮಣ್ಣನ್ನು ಕದ್ದುಕೊಂಡು ಹೋಗಿದ್ದರು.

ಸದ್ಯ ಆರೋಪಿಗಳಿಂದ 16 ಲಕ್ಷ 50 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ಎರಡು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿಚಾರಣೆ ವೇಳೆ 5 ಪ್ರಕರಣಗಳು ಬೆಳಕಿಗೆ ಬಂದಿವೆ. ಪ್ರಕರಣ ದಾಖಲಿಸಿಕೊಂಡಿರೋ ಸುಬ್ರಮಣ್ಯ ನಗರ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net