ರಸ್ತೆ ವಿಭಜಕಕ್ಕೆ ಗುದ್ದಿದ ಬೈಕ್, ಇಬ್ಬರು ಸ್ಥಳದಲ್ಲೇ ಸಾವು, ಒಬ್ಬನ ಪರಿಸ್ಥಿತಿ ಗಂಭೀರ

divider flyover
Published on

ಬೆಂಗಳೂರು: ಶನಿವಾರ ನಗರದ ಕೆಐಎಬಿ ಏರ್ಪೋರ್ಟ್ ಎಲಿವೇಟೆಡ್ ರಸ್ತೆಯ ಪ್ಲೈ ಓವರ್ ಮೇಲೆ ಡಿವೈಡರ್​ಗೆ ಬೈಕ್​ ಡಿಕ್ಕಿಯಾದ ಪರಿಣಾಮ ಬೈಕ್​ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಈ ಘಟನೆಯಲ್ಲಿ ವಿಕ್ರಮ್(28) ಮತ್ತು ಅಮಿತ್ ಸಿಂಗ್(27) ಸಾವನ್ನಪ್ಪಿದ ಯುವಕರು. ಮತ್ತೋರ್ವ ಸವಾರ ಸೌರಬ್ (27)ಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಲಹಂಕದ ಸಂತೆ ಗೇಟ್ ಫ್ಲೈ ಓವರ್ ಮೇಲೆ ಈ ಅಪಘಾತ ನಡೆದಿದೆ.

ಮರಣೋತ್ತರ ಪರೀಕ್ಷೆಗಾಗಿ ಸಾವನ್ನಪ್ಪಿದ ಯುವಕರ ಮೃತದೇಹವನ್ನು ಯಲಹಂಕದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕುರಿತು ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net