VIDEO| ಯಾರದ್ದೋ ಕಾರ್​​ ರೇಸ್​ಗೆ ಬಲಿಯಾದ ಯುವಕ! ಬೆಚ್ಚಿ ಬೀಳಿಸುತ್ತೆ ಈ ದೃಶ್ಯ

ಅಕಸಹಅಯ
Published on

ಬೆಂಗಳೂರು: ನಗರದ ಮೂಡಲಪಾಳ್ಯದಲ್ಲಿ ಮದ್ಯಪಾನ ಮಾಡಿ ಕಾರ್​ ರೇಸ್​ ಮಾಡುತ್ತಿದ್ದ ಯುವಕರಿಂದಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಯುವಕ ಅಕ್ಷಯ್​ ಇಂದು ಸಾವನ್ನಪ್ಪಿದ್ದಾನೆ. ಡಿಸೆಂಬರ್​ 3ರಂದು ನಡೆದ ಭೀಕರ ಅಪಘಾತದಿಂದಾಗಿ ಗಂಭೀರ ಗಾಯಾಳುವಾಗಿದ್ದ ಅಕ್ಷಯ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗ ಹಿನ್ನೆಲೆಯಲ್ಲಿ ಆತ ಇಂದು ಕೊನೆಯುಸಿರೆಳೆದಿದ್ದಾನೆ.

ಹೋಂಡಾ ಸಿವಿಕ್ ಮತ್ತು ಸ್ವಿಫ್ಟ್ ಕಾರಿನಲ್ಲಿ ಕುಡಿದ ಮತ್ತಿನಲ್ಲಿದ್ದ ಯುವಕರು ಕಾರು ರೇಸ್​ ಮಾಡುತ್ತಿದ್ದರು. ಹಠಕ್ಕೆ ಬಿದ್ದವರಂತೆ ನಾ ಮುಂದೆ ತಾ ಮುಂದೆ ಎಂಬಂತೆ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು‌ ಬಂದು ಎದುರಿನ ರಾಯಲ್ ಎನ್ಫೀಲ್ಡ್ ಬೈಕ್​ಗೆ ಡಿಕ್ಕಿ ಹೊಡೆದಿದ್ದರು. ಡಿಕ್ಕಿಯ ರಭಸಕ್ಕೆ ಬೈಕ್​ ಎರಡು ಪೀಸ್ ಆಗಿ, ಬೈಕ್ ಸವಾರ ಅಕ್ಷಯ್ (28)​ ಮೇಲಕ್ಕೆ ಹಾರಿಬಿದ್ದಿದ್ದ. ಡಿಕ್ಕಿ ಹೊಡೆದ ಪರಿಣಾಮ ಅಕ್ಷಯ್​ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು.

ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net