ಹೆಂಡತಿಗಾಗಿ 30 ಅಡಿ ಎತ್ತರದ ಚಿಮಣಿ ಏರಿದ ಪತಿ: 4 ಗಂಟೆ ಹೈಡ್ರಾಮಾ..!

bihar husband climb
Published on

ಪಾಟ್ನಾ: ಹೆಂಡತಿಯನ್ನು ಜತೆಗೆ ಕಳುಹಿಸದ ಕಾರಣ ಅತ್ತೆ ಮೇಳೆ ಕೋಪಗೊಂಡ ಅಳಿಯ ಸ್ಮಶಾನದಲ್ಲಿದ್ದ 32 ಅಡಿ ಎತ್ತರದ ಚಿಮಣಿಯನ್ನು ಹತ್ತಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಇದನ್ನೂ ಓದಿ: ಸರ್..ಸೊಸೆ ಗುಟ್ಖಾ ತಿಂದು ಎಲ್ಲೆಂದರಲ್ಲಿ ಉಗುಳುತ್ತಾಳೆ: ಪೊಲೀಸರಿಗೆ ದೂರು ನೀಡಿದ ಅತ್ತೆ..

ಸತತ ನಾಲ್ಕು ಗಂಟೆಗಳ ಹೈವೋಲ್ಟೇಜ್ ನಾಟಕದ ನಂತರ ಪತ್ನಿ ಬಳಿಕ ಯುವಕ ಕೆಳಗಿಳಿದಿದ್ದು, ಆತನನ್ನು ರಾಜಗೀರ್ ನಿವಾಸಿ ಶೆಟ್ಟಿ ರಾಮ್ ಎಂದು ಗುರುತಿಸಲಾಗಿದೆ. 2018ರಲ್ಲಿ ಪಾಟ್ನಾದ ರಾಜವಂಶಿ ನಗರದಲ್ಲಿ ಈತನ ಮದುವೆಯಾಗಿದ್ದು, ಈತನಿಗೆ ಇಬ್ಬರು ಮಕ್ಕಳಿದ್ದರು. ಶೆಟ್ಟಿ ರಾಮ್ ತನ್ನ ಪತ್ನಿಯನ್ನು ಥಳಿಸುತ್ತಾನೆ ಎಂದು ಹೆಂಡತಿಯು ಈ ಹಿಂದೆ ಆರೋಪಿಸಿದ್ದು, ಇದಾದ ನಂತರ ಹಲವು ಬಾರಿ ಉಭಯ ಪಕ್ಷಗಳ ನಡುವೆ ಒಪ್ಪಂದವಾಗಿತ್ತು. ಇತ್ಯರ್ಥದ ನಂತರ, ಆಕೆ ಆತನ ಜತೆ ಇದ್ದರೂ ಸಹಿತ ಆತ ತನ್ನ ಮೊದಲಿನ ಚಾಳಿಯನ್ನೇ ಮುಂದುವರೆಸಿದ್ದನು.

ಕೊನೆಗೆ ಪತ್ನಿಯು ತನ್ನ ತಾಯಿಯ ಮನೆಗೆ ಬಂದು ನೆಲೆಸಿದ್ದು, ಆಕೆಯನ್ನು ಕರೆದುಕೊಂಡು ಹೋಗಲು ರಾಮ್​ ತನ್ನ ಅತ್ತೆಯ ಮನೆಗೆ ಬಂದಿದ್ದ. ಈ ವೇಳೆ ಪತ್ನಿಯನ್ನು ಈತನ ಜತೆಗೆ ಕಳುಹಿಸಲು ನಿರಾಕರಿಸಿದ್ದು, ಸಿಟ್ಟಿಗೆದ್ದ ಆತ ಸಮೀಪದಲ್ಲಿದ್ದ ಸ್ಮಶಾನದ 30 ಅಡಿ ಎತ್ತರದ ಚಿಮಣಿಯನ್ನು ಏರಿ ಹೈಡ್ರಾಮಾ ಮಾಡಿದ್ದಾನೆ. ಗಲಾಟೆ ನೋಡಿದ ಜನರು ಬುದ್ಧ ಕಾಲೋನಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಆತನ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ಆತ ಕೆಳಗಿಳಿಯಲು ಒಪ್ಪಲೇ ಇಲ್ಲ. ಕೊನೆಗೆ ನಾಲ್ಕು ಗಂಟೆಗಳ ನಂತರ ಹೆಂಡತಿ ಬಂದು ಕರೆದ ತಕ್ಷಣವೇ ಇಳಿದು ಬಂದಿದ್ದಾನೆ. ಕೆಳಗಿಳಿದ ನಂತರ ಆತ ತನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೇನೆ, ಆಕೆಯಿಲ್ಲದೇ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದು, ಆಕೆ ಆತನನ್ನು ಮನೆಗೆ ಕರೆದೊಯ್ದಿದ್ದಾಳೆ. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.(ಏಜೆನ್ಸೀಸ್)

compensation #chennai

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net