

ಪಾಟ್ನಾ: ಖಾಸಗಿ ಶಾಲಾ ಶಿಕ್ಷಕರು ವಿದ್ಯಾರ್ಥಿಯೊಬ್ಬನನ್ನು ಅಮಾನುಷವಾಗಿ ಥಳಿಸಿದ ಪರಿಣಾಮ ಆತ ಮೃತಪಟ್ಟ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ಇದನ್ನೂ ಓದಿ: ಚಾಕೊಲೇಟ್ ಕೊಡುವುದಾಗಿ ನಂಬಿಸಿ ಮಕ್ಕಳ ಕಳ್ಳತನಕ್ಕೆ ಯತ್ನ; ಯುವಕ ಪೊಲೀಸ್ ಸುಪರ್ಧಿಗೆ
ಪೂರ್ವ ಚಂಪಾರಣ್‌ನ ನಿವಾಸಿ ಬಜರಂಗಿ ಕುಮಾರ್ ಮೃತ ವಿದ್ಯಾರ್ಥಿಯಾಗಿದ್ದು, ಖಾಸಗಿ ವಸತಿ ಶಾಲೆಯ ಮಧುಬನ್ ರೈಸಿಂಗ್ ಸ್ಟಾರ್ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದನು. ಈತ ರಿಪೇರಿಗೆ ಕೊಟ್ಟಿದ್ದ ತನ್ನ ತಾಯಿಯ ಮೊಬೈಲ್ ಫೋನ್ನ್ನು ಮರಳಿ ಪಡೆಯಲು ಮಧುಬನ್ ಪ್ರದೇಶಕ್ಕೆ ಹೋಗಿ ಬರುವ ಈ ವೇಳೆ ಶನಿವಾರದಂದು ಹರ್ದಿಯಾ ಸೇತುವೆಯ ಕೆಳಗೆ ಸ್ನೇಹಿತರ ಜತೆಗೂಡಿ ಸಿಗರೇಟ್ ಸೇದಿದ್ದಾನೆ.
ಇದನ್ನು ಶಾಲೆಯ ಅಧ್ಯಕ್ಷ ವಿಜಯ್ ಕುಮಾರ್ ಯಾದವ್ ಗಮನಿಸಿದ್ದರು. ನಂತರ ವಿಜಯ್ ವಿದ್ಯಾರ್ಥಿಯನ್ನು ಶಾಲೆಗೆ ಕರೆದೊಯ್ದ ಅಲ್ಲಿ ಇತರ ಶಿಕ್ಷಕರೊಂದಿಗೆ ಸೇರಿ ವಿವಸ್ತ್ರಗೊಳಿಸಿ ಬೆಲ್ಟ್‌ನಿಂದ ಹೊಡೆದಿದ್ದಾರೆ ಎಂದು ಆತನ ತಾಯಿ ಉಸ್ಮಿಳಾ ದೇವಿ ಹೇಳಿದ್ದಾರೆ.
ಇದನ್ನೂ ಓದಿ: ಮತ್ತೊಂದು ದೊಡ್ಡ ಪ್ರೊಡಕ್ಷನ್ ಹೌಸ್ನೊಂದಿಗೆ ಕೈಜೋಡಿಸಿದ ಡಾರ್ಲಿಂಗ್ ಪ್ರಭಾಸ್?
ಬಜರಂಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಾಗ, ಆತನನ್ನು ಮುಜಾಫರ್‌ಪುರಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಚಿಕಿತ್ಸೆ ವೇಳೆ ಆತ ಮೃತಪಟ್ಟಿದ್ದಾನೆ. ಬಜರಂಗಿಯ ಕುತ್ತಿಗೆ ಮತ್ತು ತೋಳುಗಳ ಮೇಲೆ ಆಳವಾದ ಗಾಯಗಳಾಗಿದ್ದು, ಖಾಸಗಿ ಭಾಗಗಳಲ್ಲಿ ರಕ್ತಸ್ರಾವವಾಗಿದೆ ಎಂದು ಆತನ ಸಹೋದರಿ ಆರೋಪಿಸಿದ್ದಾರೆ.
ಆದರೆ ಶಾಲೆಯ ಅಧ್ಯಕ್ಷರು ಕುಟುಂಬದವರ ಹೇಳಿಕೆಗಳನ್ನು ವಿರೋಧಿಸಿದ್ದು, ಆತನನ್ನು ನಾವು ಹೊಡೆದಿಲ್ಲ. ಆದರೆ ಧೂಮಪಾನದ ವಿಷಯ ಮನೆಯವರಿಗೆ ತಿಳಿದು ಏನಾದರೂ ಅನಾಹುತವಾಗಬಹುದೆಂದು ಆತನೇ ವಿಷ ಸೇವಿಸಿದ್ದಾನೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)