

ಮುಂಬೈ: ವ್ಯಕ್ತಿಯೊರ್ವ ಏಳು ಮಕ್ಕಳೊಂದಿಗೆ ಸ್ಕೂಟಿ ಸವಾರಿ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಇದನ್ನೂ ಓದಿ: ಲಂಡನ್ ನಗರದಲ್ಲಿ ಭಾರತೀಯ ಮನಃಶಾಸ್ತ್ರಜ್ಞ ಅಂದರ್! ಈತ ಹೆಸರಿಗಷ್ಟೇ ಡಾಕ್ಟರ್…
ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವಿಟರ್ ಬಳಕೆದಾರನೊಬ್ಬ ಈ ಕುರಿತಾದ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಈ ಬೇಜವಾಬ್ದಾರಿ ವ್ಯಕ್ತಿ ಸ್ಕೂಟರ್ನಲ್ಲಿ ಏಳು ಮಕ್ಕಳೊಂದಿಗೆ ಸವಾರಿ ಮಾಡುತ್ತಿದ್ದಾನೆ. ಏಳು ಪುಟ್ಟ ಮಕ್ಕಳ ಪ್ರಾಣಕ್ಕೆ ಅಪಾಯ ತಂದಿರುವ ಆತನನ್ನು ಕೂಡಲೇ ಬಂಧಿಸಬೇಕು. ಈ ಮಕ್ಕಳ ಪೋಷಕರ ಮೇಲೂ ಕಾನೂನು ಕ್ರಮ ಜರುಗಿಸಬೇಕು ಎಂದು ಟ್ವೀಟ್ ಮಾಡಿದ್ದರು.
ಇದನ್ನು ಗಂಭೀರವಾಗಿ ತೆಗೆದುಕೊಂಡ ಮುಂಬೈ ಪೊಲೀಸರು ಆತನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ಗುರುತನ್ನು ಬಹಿರಂಗಪಡಿಸದೇ, ಅದೇ ಸ್ಕೂಟರ್ನಲ್ಲಿ ಸವಾರನ ಮುಖವನ್ನು ಮಾರ್ಫಿಂಗ್ ಮಾಡಿದ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಭಾರೀ ಮಳೆಗೆ ಬಿದ್ದ ಮದುವೆ ಮನೆ ಪೆಂಡಲ್; 8 ಮಂದಿ ಸ್ಥಿತಿ ಗಂಭೀರ
ಜತೆಗೆ, 40 ವರ್ಷದ ಆರೋಪಿಯು ಹಿಂಬದಿಯ ಸವಾರರ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಿದ್ದು, ಆತನ ವಿರುದ್ಧ ನರಹತ್ಯೆಗೆ ಯತ್ನಿಸಿದ್ದಕ್ಕಾಗಿ ಯು/ಸೆಕ್ಷನ್ 308 ಐಪಿಸಿ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.(ಏಜೆನ್ಸೀಸ್)