ಚುನಾವಣೆ ಹೊಸ್ತಿಲಲ್ಲೇ ನಿವೃತ್ತ ಪತ್ರಕರ್ತರಿಗೆ ಬಂಪರ್ ಕೊಡುಗೆ! ಮಾಸಿಕ ಪಿಂಚಣಿ ಹೆಚ್ಚಿಸಿದ ಬಿಹಾರ ಸಿಎಂ​ | Bihar

ವಿಜಯವಾಣಿ (79)
Published on

Bihar: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ಸಿಎಂ ನಿತೀಶ್​ ಕುಮಾರ್​, ರಾಜ್ಯದ ಜನತೆಗೆ ಹಲವು ಬಂಪರ್​ ಘೋಷಣೆಗಳು ನೀಡುತ್ತಿರುವುದು ಸದ್ಯ ಭಾರೀ ಕುತೂಹಲಕ್ಕೆ ಸಾಕ್ಷಿಯಾಗಿದೆ.

ಬಿಹಾರ ಸರ್ಕಾರ ಪತ್ರಕರ್ ಸಮ್ಮಾನ್ ಪಿಂಚಣಿ ಯೋಜನೆಯಡಿ ನಿವೃತ್ತ ಪತ್ರಕರ್ತರಿಗೆ ಮಾಸಿಕ ಪಿಂಚಣಿ ನೀಡುತ್ತಿದೆ. ಈ ಹಿಂದೆ ತಿಂಗಳಿಗೆ 6,000 ರೂ. ಕೊಡಲಾಗುತ್ತಿತ್ತು. ಪ್ರಸ್ತುತ, ಪಿಂಚಣಿಯನ್ನು 15,000 ರೂ.ಗೆ ಹೆಚ್ಚಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಇದಲ್ಲದೆ, ಈ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಪತ್ರಕರ್ತರು ಮೃತಪಟ್ಟರೆ, ಅವರ ಮನೆಯವರಿಗೆ/ಪತ್ನಿಗೆ ಮಾಸಿಕ 10 ತಿಂಗಳು ನೀಡುವುದಾಗಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ತಿಂಗಳಿಗೆ ಕೇವಲ 3,000 ರೂ. ಕೊಡಲಾಗುತ್ತಿತ್ತು. ಆದರೀಗ, ಹೊಸ ಕೊಡುಗೆ ಘೋಷಣೆ ಬಳಿಕ ಮೃತ ಪತ್ರಕರ್ತನ ಪತ್ನಿಗೆ ಅಥವಾ ಕುಟುಂಬಸ್ಥರಿಗೆ ಮಾಸಿಕ 10,000 ರೂ. ಜೀವಮಾನ ಪಿಂಚಣಿ ನೀಡಲಾಗುವುದು ಎಂದು ಸಿಎಂ ತಮ್ಮ 'ಎಕ್ಸ್' ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಹಿರಿಯ ನಾಗರಿಕರು, ಅಂಗವಿಕಲರು ಮತ್ತು ವಿಧವೆಯರಿಗೆ ನೀಡಲಾಗುವ ಮಾಸಿಕ ಪಿಂಚಣಿಯನ್ನು ಇತ್ತೀಚೆಗಷ್ಟೇ ಹೆಚ್ಚಿಸಿದ್ದ ನಿತೀಶ್ ಕುಮಾರ್, ಅದರ ಬೆನ್ನಲ್ಲೇ ಮತ್ತೊಂದು ಭರ್ಜರಿ ಕೊಡುಗೆಯನ್ನು ಘೋಷಿಸಿದ್ದಾರೆ.

ಗೃಹಬಳಕೆಯ ಗ್ರಾಹಕರಿಗೆ 125 ಯೂನಿಟ್ ಉಚಿತ ವಿದ್ಯುತ್ ಈಗಾಗಲೇ ಘೋಷಿಸಲಾಗಿದ್ದು, ಇದು ಆಗಸ್ಟ್ 1ರಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ. ಮತ್ತೊಂದೆಡೆ, ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಸರ್ಕಾರಿ ಉದ್ಯೋಗಗಳು ಮತ್ತು ಇತರ ಉದ್ಯೋಗಾವಕಾಶಗಳನ್ನು ಸಹ ಸಿಎಂ ಘೋಷಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net