

ಬೆಂಗಳೂರು: ಕನ್ನಡ ಕುರಿತೆರೆಯ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ಬಾಸ್ (BiggBoss) ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಶೋ ರೋಚಕತೆ ಹೆಚ್ಚಿಸುತ್ತಿದೆ. ಇನ್ನೂ ಫಿನಾಲೆ ವಾರ ಹತ್ತಿರ ಬರುತ್ತಿದ್ದಂತೆ ಕಾರ್ಯಕ್ರಮವು ಹೊಸರೂಪ ಪಡೆದುಕೊಳ್ಳುತ್ತಿದ್ದು, ಇದೀಗ 11ನೇ ಆವೃತ್ತಿಯಲ್ಲಿ ಎಲಿಮಿನೇಟ್ ಆಗಿದ್ದ ಸ್ಫರ್ಧಿಗಳು ಮನೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ವಾಹಿನಿಯು ಇದರ ಪ್ರೋಮೋವನ್ನು ರಿಲೀಸ್ ಮಾಡಿದ್ದು, ಇಂದಿನ ಸಂಚಿಕೆ ಭರ್ಜರಿ ಎಂಟರ್ಟೈನ್ಮೆಂಟ್ ಕೊಡುವುದು ಪಕ್ಕಾ ಆಗಿದೆ.
ನೆನಪಿನ ಮೂಟೆ ಹೊತ್ತು ತಂದ ಹಳೆ ಕಂಟೆಸ್ಟೆಂಟ್ಸ್! ಶೀರ್ಷಿಯಡಿ ರಿಲೀಸ್ ಆಗಿರುವ ಪ್ರೋಮೋ ನೋಡುವುದಾದರೆ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದ ಯಮುನಾ ಶ್ರೀನಿಧಿ, ಹಂಸಾ, ರಂಜಿತ್, ಅನುಷಾ ರೈ, ಮಾನಸ, ಗೋಲ್ಡ್ ಸುರೇಶ್ ಹಾಗೂ ಶಿಶಿರ್ ಸೇರಿದಂತೆ ಮೊದಲಾದ ಸ್ಪರ್ಧಿಗಳು ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಇರುವ 9 ಸ್ಫರ್ಧಿಗಳ ಪೈಕಿ ಓರ್ವ ಅಭ್ಯರ್ಥಿಯ ಬಗ್ಗೆಯೂ ಇವರುಗಳು ಮಾತನಾಡಿದ್ದು, ಅದಕ್ಕೆ ಕಾರಣವನ್ನು ನೀಡಿದ್ದಾರೆ. ಆದರೆ, ಪ್ರೋಮೋದಲ್ಲಿ ಧರ್ಮ ಕೀರ್ತಿರಾಜ್ ಹಾಗೂ ಜಗದೀಶ್ ಕಾಣಿಸಿಕೊಂಡಿಲ್ಲ. ಇವರಿಬ್ಬರು ಬಂದಿರುವುದು ಅನುಮಾನ ಎನ್ನಲಾಗುತ್ತಿದೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.